Saturday, September 23, 2023
Homeಇದೀಗ ಬಂದ ಸುದ್ದಿಕನಿಷ್ಠ ಒಬ್ಬ ವಿಪಕ್ಷ ನಾಯಕನನ್ನಾದರೂ ಬಿಜೆಪಿ ಆಯ್ಕೆ ಮಾಡಿಕೊಳ್ಳಲಿ : ಕಾಂಗ್ರೆಸ್ ತಿರುಗೇಟು

ಕನಿಷ್ಠ ಒಬ್ಬ ವಿಪಕ್ಷ ನಾಯಕನನ್ನಾದರೂ ಬಿಜೆಪಿ ಆಯ್ಕೆ ಮಾಡಿಕೊಳ್ಳಲಿ : ಕಾಂಗ್ರೆಸ್ ತಿರುಗೇಟು

- Advertisement -

ಬೆಂಗಳೂರು, ಜೂ.3- ಪಂಚಖಾತ್ರಿ ಯೋಜನೆಗಳ ಜಾರಿಗೆ ಮೊದಲು ಮತ್ತು ಜಾರಿಯ ನಂತರ ಬಿಜೆಪಿಯ ವರಸೆಗಳು ಬದಲಾಗಿವೆ. ಕನಿಷ್ಠ ಸ್ಪಷ್ಟ ನಿಲುವು ವ್ಯಕ್ತ ಪಡಿಸಲಾದರೂ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷಕ್ಕೆ ತಿರುಗೇಟು ನೀಡಿದೆ.

ಉದ್ಯೋಗ ಖಾತ್ರಿ ಕೊಟ್ಟಾಗ ದೇಶ ದಿವಾಳಿಯಾಗುತ್ತದೆ ಎಂದಿದ್ದರು. ಅನ್ನಭಾಗ್ಯ ಕೊಟ್ಟಾಗ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ ದಿವಾಳಿಯಾಗಿದ್ದು ದೇಶವೂ ಅಲ್ಲ, ರಾಜ್ಯವೂ ಅಲ್ಲ ಬಿಜೆಪಿಗರ ಬೌದ್ಧಿಕತೆ. ಜನರಿಗೆ ನೀಡುವ ಹಣ, ಭೂಮಿಗೆ ಬಿತ್ತುವ ಬೀಜ ವ್ಯರ್ಥವಾಗುವುದಿಲ್ಲ, ಬೆಳೆದು ಮರವಾಗಿ ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

- Advertisement -

ಸಿಎಂ ಹುದ್ದೆ ಕುರಿತು ಸೂಕ್ತ ಕಾಲದಲ್ಲಿ ಹೈಕಮಾಂಡ್‍ ನಿರ್ಧಾರ ಕೈಗೊಳ್ಳುತ್ತೆ : ಡಿಕೆಶಿ

ಪಂಚಖಾತ್ರಿ ಘೋಷಣೆ ಮಾಡಿದಾಗ ಹಣ ಹೇಗೆ ಹೊಂದಿಸುತ್ತಾರೆ, ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಈ ಯೋಜನೆಗಳು ಆರ್ಥಿಕತೆಯ ವಿರೋ ಎಂದು ಬಿಜೆಪಿಗರು ಆರೋಪಿಸಿದ್ದರು. ಅದೇ ಪಂಚಖಾತ್ರಿ ಯೋಜನೆಗಳು ಜಾರಿಯಾದಾಗ ಷರತ್ತು ಹಾಕುತ್ತಿದಾರೆ, ಎಲ್ಲರಿಗೂ ಕಳ್ಳೆಪುರಿ ಹಂಚಿದ ಹಾಗೆ ಹಂಚಬೇಕು ಎಂದು ಹೇಳಿಕೆ ನೀಡಲಾರಂಬಿಸಿದ್ದಾರೆ. ಬಿಜೆಪಿಯ ವರಸೆಗಳು ಹೇಗೆಲ್ಲಾ ಬದಲಾಗುತ್ತಿವೆ ಎಂದು ಜನ ಗಮನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಯಾವ ನಿಲುವು ತಾಳಬೇಕು, ಹೇಗೆ ವಿರೋಧಿಸಬೇಕು ಎಂದು ಗೊಂದಲದಲ್ಲಿದೆ. ಕನಿಷ್ಠ ಸ್ಪಷ್ಟವಾಗಿ ವಿರೋಧಿಸಲಾದರೂ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಗ್ಯಾರಂಟಿ ಲಾಭ ಪಡೆಯಲು ದಾಖಲಾತಿಗಳ ಸಿದ್ಧತೆಯಲ್ಲಿ ತೊಡಗಿದ ಜನ

ಜನರ ಕೈಗೆ ಹಣ ಹೋದರೆ ಜನರ ಖರೀದಿ ಸಾಮಥ್ರ್ಯ ಹೆಚ್ಚುತ್ತದೆ, ಬದುಕಿನ ಮಟ್ಟ ಸುಧಾರಿಸುತ್ತದೆ. ಇದರಿಂದ ಜಿಡಿಪಿ ಬೆಳವಣಿಗೆಯಾಗುತ್ತದೆ, ತೆರಿಗೆ ಸಂಗ್ರಹಕ್ಕೂ ಅನುಕೂಲವಾಗುತ್ತದೆ. ಜನರ ಆರ್ಥಿಕ ಸಾಮಥ್ರ್ಯದಿಂದಲೇ ದೇಶದ ಆರ್ಥಿಕ ಸಾಮಥ್ರ್ಯ ವೃದ್ಧಿಸಲು ಸಾಧ್ಯ. ನಮ್ಮ ಪ್ರಕಾರ ದೇಶ, ರಾಜ್ಯ ಎಂದರೆ ಇಲ್ಲಿನ ಜನರು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

Congress, #choose, #BJP, #oppositionleader,

- Advertisement -
RELATED ARTICLES
- Advertisment -

Most Popular