ಲೋಕಾಯುಕ್ತ ಮುಚ್ಚಿದ ಕಾಂಗ್ರೆಸ್‍ಗೆ ಯಾವ ನೈತಿಕತೆ ಇದೆ..? : ಸಚಿವ ಸುಧಾಕರ್

Social Share

ಬೆಂಗಳೂರು,ಜ.23- ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರೊಬ್ಬರ ಡೈರಿಯಲ್ಲಿ ಹೈಕಮಾಂಡ್‍ಗೆ ಒಂದು ಸಾವಿರ ಕೋಟಿ ಹೇಗೆ ಹೋಯಿತು ಎಂಬುದನ್ನು ರಾಜ್ಯದ ಜನತೆಯ ಮುಂದಿಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, 2017ರಲ್ಲಿ ಡೈರಿ ಸಿಕ್ಕಾಗ ಕಾಂಗ್ರೆಸ್‍ಗೆ ಒಂದು ಸಾವಿರ ಕೋಟಿ ಕಪ್ಪ ಕಾಣಿಕೆ ನೀಡಲಾಗಿದೆ ಎಂದು ಬರೆದುಕೊಂಡಿದ್ದರು. ಇದು ಧರ್ಮದ ಹಣವೇ? ಎಂದು ಪ್ರಶ್ನೆ ಮಾಡಿದರು.

ಸಚಿವ ಸುಧಾಕರ್ ಮಾತನಾಡಿ, ಒಂದು ವೇಳೆ ಭ್ರಷ್ಟಾಚಾರದ ಹಣ ಹೋಗದಿದ್ದರೆ ಬಜೆಟ್ ಮೂಲಕ ವಿಶೇಷ ಅನುದಾನವನ್ನು ಹೈಕಮಾಂಡ್‍ಗೆ ಕೊಡಲಾಗಿತ್ತೆ? ಸತ್ಯ ಹರಿಶ್ಚಂದ್ರರಂತೆ ಕಾಂಗ್ರೆಸಿಗರು ಮಾತನಾಡುತ್ತಾರೆ. ನಿಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ ಎಂದು ಪ್ರಶ್ನಿಸಿದರು.

ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರಿಗೆ ಕೊಡುವ ಊಟದಲ್ಲೂ ಕಮೀಷನ್ ಹೊಡೆದರು. ಅಲ್ಪಸಂಖ್ಯಾತರಿಗೆ, ದಲಿತರಿಗೆ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಲ್ಯಾಪ್‍ಟಾಪಲ್ಲಿ ಭ್ರಷ್ಟಾಚಾರ ಆಗಿಲ್ಲವಾ? ವಸ್ತುನಿಷ್ಠವಾಗಿ ಕೆಲಸ ನಡೆದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕಳೆದ 60 ವರ್ಷಗಳಿಂದ ನಮ್ಮ ದೇಶ ಆಳಿರುವ ಕಾಂಗ್ರೆಸ್ ಯಾವ ರೀತಿ ಭ್ರಷ್ಟಾಚಾರ ಮಾಡಿತು.

ಗರ್ಭ ಮುಂದುವರೆಸುವ, ತೆಗೆಸುವ ಅಧಿಕಾರ ಮಹಿಳೆಗೆ ಮಾತ್ರ ಸೇರಿದೆ : ಬಾಂಬೆ ಹೈಕೋರ್ಟ್

ಹಿಂದೆ ಕಾಂಗ್ರೆಸ್ ಆಡಳಿತ ಇದ್ದಾಗ ನೋಡಿದ್ದೇವೆ. ನಮ್ಮ ಮೂಲಕ ರಾಜ್ಯದ ಜನತೆಗೆ ಗೊತ್ತಾಗಬೇಕು. 2013ರ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ತಡೆಯುವುದಾಗಿ ಹೇಳಿತ್ತು. ತಮ್ಮ ಅಕಾರ ಅವಯಲ್ಲಿ ಭ್ರಷ್ಟಾಚಾರ ದೂರು ದಾಖಲಾದಾಗ ತನಿಖೆ ಎದುರಾಯಿಸಬೇಕಾಗುತ್ತದೆ ಎಂದು ರಾತ್ರೋರಾತ್ರಿ ಎಸಿಬಿ ಜಾರಿಗೆ ತಂದರು ಎಂದು ವ್ಯಂಗ್ಯವಾಡಿದರು.

35 ಸಾವಿರ ಕೋಟಿ ಹಣಾಸು ದುರುಪಯೋಗವಾಗಿದೆ. ರೀಡೂ ಎಂದು ಅವರ ಅನುಕೂಲಕ್ಕೆ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ. 10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. 900 ಎಕರೆಗೂ ಹೆಚ್ಚು ಜಾಗವನ್ನು ನೋಟಿಫಿಕೇಷನ್ ಮಾಡಿದ್ದಾರೆ. ಇದಕ್ಕಾಗಿ ಲೋಕಾಯುಕ್ತ ಮುಚ್ಚಿ ಎಸಿಬಿ ತೆರೆದರು ಎಂದು ಆರೋಪಿಸಿದರು.

ಇವರ ಬಲಗೈ ಬಂಟ ಕೆ.ಜೆ ಜಾರ್ಜ್ ನಗರಾಭಿವೃದ್ಧಿ ಸಚಿವರಾಗಿದ್ದರು. 292 ಕೋಟಿ ವೈಟ್ ಟಾಪಿಂಗ್ ಎಸ್ಟಿಮೇಟ್ ಇತ್ತು. ಅದನ್ನು 374 ಕೋಟಿಗೆ ಹೆಚ್ಚಿಸಿದರು. ಯಾಕೆ 23% ಹೆಚ್ಚಳವಾಗಿ ಕೊಟ್ಟರು? ಹೇಳಿ ಜಾರ್ಜ್ ಅವರೇ ಯಾಕೆ, ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ಟಿದ್ದೀರಿ? 9.47 ಕಿಮೀ 75 ಕೋಟಿ ಎಸ್ಟಿಮೇಟ್ ಇದ್ದು, 115 ಕೋಟಿಗೆ ಕೊಡುತ್ತಾರೆ.

53% ಹೆಚ್ಚಿಗೆ ಕೊಟ್ಟಿದ್ದಾರೆ. ಸಾರ್ವಜನಿಕ ಸಂಗ್ರಹದಲ್ಲಿ ಟೆಂಡರ್ ಪ್ರೀಮಿಯರ್ ಕುರಿತು 5% ಹೆಚ್ಚಿಗೆ ಕೊಡಬಾರದು.
ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ 40% ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. 5% ಟೆಂಡರ್ ಪ್ರೀಮಿಯಂ ತೆಗೆದುಕೊಳ್ಳುವ ಕಂಟ್ರಾಕ್ಟರ್ 40% ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪಿಎಸ್‍ಐ ಸ್ಕ್ಯಾಮ್ ಆಗಿದೆ ಎಂದು ಹೇಳುತ್ತಾರೆ ಅದು ಅವರ ಕಾಲದಲ್ಲೇ ಕೆಂಪಯ್ಯ ಅವರ ಮೇಲೆ ಆರೋಪ ಇರುವುದು ಎಂಬುದು ಮರೆತಿದ್ದಾರೆ ಎಂದು ಟೀಕಿಸಿದರು. ಕಸ ವಿಲೇವಾರಿ ಮಾಡುವುದರಲ್ಲೂ ಕಾಂಗ್ರೆಸ್ ಹಗರಣ ಮಾಡಿದೆ. ಹಣಕಾಸು ವರ್ಷ 2016-17ರಲ್ಲಿ ಕಸ ವಿಲೇವಾರಿಗೆ 1,066 ಕೋಟಿ ಆಗಿದೆ. 2015-16ರಲ್ಲಿ 385 ಕೋಟಿ ಖರ್ಚಾಗಿದೆ ಕೇವಲ ಒಂದೇ ವರ್ಷದಲ್ಲಿ 681 ಕೋಟಿ ಹೆಚ್ಚಾಗಿದೆ.

ಪ್ರಧಾನಮಂತ್ರಿ ಅವರ ಬಡವರ ಮನೆಗೆ ಮನೆ ಕೊಡುವ ಯೋಜನೆಯಲ್ಲೂ ಹಗರಣ ಮಾಡಿದ್ದರು. ಹತ್ತು ಜನ ಕಂಟ್ರಾಕ್ಟರ್‍ಗಳಿಗೆ ಮಾತ್ರ ನೀವೇ ಮಾಡಬೇಕು ಎಂದು ಕೆಪಿಟಿಟಿಪಿ ಆಕ್ಟ್ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರದ ಗಂಗೋತ್ರಿ ಎಂದು ಸಿಎಂ ಹೇಳಿರುವುದು ಇದಕ್ಕೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‍ನಿಂದ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಿಯದರ್ಶಿನಿ ಪ್ರಣಾಳಿಕೆ

30 ಸಾವಿರ ಕೋಟಿ ಕಾಮಗಾರಿ ಮಾಡಿದ್ದೇವೆ. 8ಲಕ್ಷ ಜನ ಅತಿ ಹೆಚ್ಚು ಜನ ಸಂಚಾರ ಮಾಡಿದ್ದಾರೆ. 1.52 ಕೋಟಿ ಸಂಗ್ರಹ ಆಗಿದೆ. ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಆದರೆ ನಿಮ್ಮ ಕಾಲದಲ್ಲಿ ಏನು ಮಾಡಿದ್ದೀರಾ ಎಂದು ಕಾಂಗ್ರೆಸ್‍ನ್ನು ತರಾಟೆಗೆ ತೆಗೆದುಕೊಂಡರು.

ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಹೇಳಿ ಅವರಿಂದ ಮತ ಪಡೆದಿದ್ದೀರಿ. ಆದರೆ ಮೀಸಲಾತಿ ಹೆಚ್ಚಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಿದೆ. ಈಗ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಅದು ನ್ಯಾಯಾಲಯದಲ್ಲಿ. ಕೂಡ ಮುಂದೆ ಆಗಲಿದೆ ಎಂದು ಟಾಂಗ್ ನೀಡಿದರು.

ಬ್ರಿಟಿಷರ ಕಾಲದಿಂದಲೂ ತಾಂಡಾ ಜನ ಹೋರಾಟ ಮಾಡುತ್ತಿದ್ದರು. ಅರಣ್ಯದಲ್ಲಿ ಇದ್ದರೂ ಬ್ರಿಟಿಷರ ಜೊತೆ ರಾಜಿಯಾಗಲಿಲ್ಲ. ಒಂದು ಮನೆಯನ್ನು ಕೂಡ ನೀಡಲಿಲ್ಲ. ಅವರು ಸ್ವಾಭಿಮಾನಿಯಾಗಿರಲು ಹಕ್ಕುಪತ್ರ ನೀಡಿದ್ದೇವೆ. ಇದರಿಂದ ಅವರಿಗೆ ಸಾಲ ಕೂಡ ಸಿಗಲಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ನೂರಕ್ಕೆ ನೂರು 80-90 ಸ್ಥಾನಗಳಿಗಷ್ಟೇ ಕಾಂಗ್ರೆಸ್ ಸೀಮಿತವಾಗುತ್ತದೆ. ಚುನಾವಣೆ ಬಳಿಕ ಯಾರ್ಯಾರು ಪಕ್ಷ ಬಿಡ್ತೀರಿ. ಯಾರ್ಯಾರು ಇಲ್ಲಿಗೆ ಬರುತ್ತಿದ್ದೀರಾ ಎಂಬುದು ಗೊತ್ತಿದೆ.

ವಿಧಾನಸೌಧದ ಮುಂಭಾಗ ನೇತಾಜಿ ಪ್ರತಿಮೆ ಮರುಸ್ಥಾಪನೆ : ಸಿಎಂ ಬೊಮ್ಮಾಯಿ

ಪ್ರಿಯಾಂಕ ಗಾಂ ಹೋದಲ್ಲೆಲ್ಲಾ ಕಾಂಗ್ರೆಸ್‍ಗೆ ಸೋಲುತ್ತದೆ. ಉತ್ತರ ಪ್ರದೇಶಕ್ಕೆ ಇವರು ಹೋದ ಬಳಿಕ ಇರುವ ಸೀಟುಗಳೂ ಕಡಿಮೆ ಆಗಿದೆ. ಪ್ರಿಯಾಂಕ ಹೋದ ಕಡೆಯಲ್ಲೆಲ್ಲ ಸೀಟುಗಳು ಕಡಿಮೆಯಾಗಿದೆ. ಬೆಂಗಳೂರಿನ ಬನ್ನೇರುಘಟ್ಟದ ಡಿಎಲ್‍ಎಫ್‍ನಲ್ಲಿ ಯಾರ ಪಾಲಿದೆ. ನಾ ನಾಯಕಿ ಎಂದು ಬಂದ್ರಲ್ಲ. ಅವರ ಪಾಲು ಎಷ್ಟಿದೆ ಎಂದು ಯಾಕೆ ವೇದಿಕೆಯಲ್ಲಿ ಹೇಳಲಿಲ್ಲ ಎಂದು ಸುಧಾಕರ್ ಅಪಹಾಸ್ಯ ಮಾಡಿದರು.

Congress, closed, Lokayukta, Minister Sudhakar,

Articles You Might Like

Share This Article