ಕಾಂಗ್ರೆಸ್‍ರವರು ಮಾಡಲು ಕೆಲಸವಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾರೆ : ಸಿಎಂ

Social Share

ಚಿತ್ರದುರ್ಗ, ಮಾ.4- ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್‍ರವರು ಮಾಡಲು ಕೆಲಸವಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಕಿಡಿಕಾರಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದಾಗ ಸಚಿವರ ಕಚೇರಿಯಲ್ಲೇ 2 ಲಕ್ಷ ಹಣ ಸಿಕ್ಕಿತ್ತು. ಆಗ ಏನು ಮಾಡಿದ್ದರು. ಈಗ ನನ್ನ ರಾಜಿನಾಮೆ ಕೇಳುವ ಅವರಿಗೆ ಯಾವ ನೈತಿಕತೆ ಇದೆ ಎಂದು ಸಿಎಂ ಕಿಡಿಕಾಡಿದರು.
ಆಗ ಲೋಕಾಯುಕ್ತರಿದ್ದರೆ ಸಿದ್ದರಾಮಯ್ಯ ಬಂಧನವಾಗುತ್ತಿದ್ರೋ, ಅಂತಹ ಪ್ರಕರಣಗಳನ್ನು ತಡೆಹಿಡಿಯ ಲೆಂದೇ ಲೋಕಾಯುಕ್ತವನ್ನು ದುರ್ಬಲಗೊಳಿಸಲಾಗಿತ್ತು.

ಆದರೆ ನಾವು ನೇರವಾಗಿ ಮುಕ್ತ ತನಿಖೆಗೆ ಆದೇಶಿಸಿದ್ದೇವೆ. ಲೋಕಾಯುಕ್ತರು ನಡೆಸಿರುವ ಕಾರ್ಯಾಚರಣೆ ಹಾಗೂ ನಡೆದಿರುವ ಪ್ರಕ್ರಿಯೆಗಳೇ ಇದಕ್ಕೆ ಸಾಕ್ಷಿಯಾಗಿವೆ.

ರಷ್ಯಾದಲ್ಲಿ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆ ಶೋಧಿಸಿದ ವಿಜ್ಞಾನಿಯ ಹತ್ಯೆ

ಭ್ರಷ್ಟಾಚಾರದ ವಿರುದ್ಧ ನಮ್ಮ ಸಮರ ಅಚಲವಾಗಿದ್ದು, ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿದೆ. ಕಾಂಗ್ರೆಸ್ ನವರು ಸುಮ್ಮನೆ ಜನರ ಭಾವನೆಗಳನ್ನು ತಿರುಚುವ ಪ್ರಯತ್ನದಲ್ಲಿ ಇಂತಹ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಮೈಸೂರಿನಲ್ಲಿ ಮಾ.2 6ಕ್ಕೆ ಜೆಡಿಎಸ್ ಪಂಚರತ್ನ ಸಮಾರೋಪ

ಈ ಹಿಂದೆ ಅವರ ಸರ್ಕಾರ ಇದ್ದಾಗ ಧರ್ಮ ಹಾಗೂ ಜಾತಿ ಹೆಸರಿನಲ್ಲಿ ರಾಜ್ಯದಲ್ಲಿ ಸಾಕಷ್ಟು ಕೊಲೆಗಳಾಗಿವೆ. ಎಸ್‍ಟಿಪಿಐ ಮತ್ತು ಪಿಎಫ್‍ಐ ಸಂಘಟನೆ ಗಳನ್ನು ಪೋಷಿಸಿದ್ದೇ ಕಾಂಗ್ರೆಸ್‍ನವರು. ಈಗ ನಮ್ಮ ಮೇಲೆ ಕೊಲೆಗಡುಕ ಸರ್ಕಾರ ಎಂದು ಟೀಕೆ ಮಾಡುತ್ತಾರೆ. ಇದು ಅವರ ಪರಮಾವ ಎಂದು ತಿಳಿಸಿದರು.

Congress, Corruption, protest, CM Bommai,

Articles You Might Like

Share This Article