ಬೆಂಗಳೂರು,ಫೆ.5- ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚುವಲ್ಲಿ ಭ್ರಹ್ಮಾಂಡ ಭ್ರಷ್ಟಚಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು ಕಮಿಷನ್ ಪೇ ಚರ್ಚಾ 2023ನ್ನು ನಡೆಸಿ ಎಂದು
ಮನವಿ ಮಾಡಿದೆ.
ಇತ್ತೀಚೆಗೆ ಕಾಂಗ್ರೆಸ್‍ನ್ನು ಅವಹೇಳನ ಮಾಡುವ ಮತ್ತು ಅದರ ಮೇಲಿನ ಆರೋಪಗಳನ್ನು ವೈಭವೀಕರಿಸುವ ಹಲವಾರು ಇಮೇಜ್‍ಗಳು ಹಾಗೂ ವಿಡಿಯೋಗಳನ್ನು ಕೃತಕವಾಗಿ ಸೃಷ್ಟಿಸಿ ಬಿಜೆಪಿ ಟ್ವಿಟರ್ ಸೇರಿದಂತೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿತ್ತು.
ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ಕಾಂಗ್ರೆಸ್, ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಕಳೆದ 3 ವರ್ಷದಲ್ಲಿ 7121 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ವರದಿ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಭ್ರಷ್ಟಚಾರದ ವಿರುದ್ಧ ಹರಿಹಾಯ್ದಿದೆ.
ಮೂರು ವರ್ಷದಲ್ಲಿ 25 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆಯಂತೆ, ಅದಕ್ಕಾಗಿ 7121 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಅಂದರೆ ಒಂದು ಗುಂಡು ಮುಚ್ಚಲು 28 ಲಕ್ಷ ರೂಪಾಯಿ ಬಿಲ್ ಮಾಡಲಾಗಿದೆ. ಅದರಲ್ಲಿ ಶೇ.40ರಷ್ಟು ಕಮಿಷನ್ ಕಳೆದರೂ ಪ್ರತಿ ಗುಂಡಿ ಮುಚ್ಚಲು 16 ಲಕ್ಷ ರೂಪಾಯಿ ವೆಚ್ಚವಾಗಿರುವ ಲೆಕ್ಕ ತೋರಿಸಲಾಗಿದೆ ಎಂದು ಕಾಂಗ್ರೆಸ್ ಆಘಾತ ವ್ಯಕ್ತಪಡಿಸಿದೆ.
ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡಗೆ ಜೆಡಿಎಸ್ ಟಿಕೆಟ್ ಡೌಟ್
ಅಷ್ಟೆಲ್ಲಾ ಖರ್ಚು ಮಾಡಿದ್ದರೂ ಬೆಂಗಳೂರು ಇನ್ನೂ ಗುಂಡಿಮಯವಾಗಿಯೇ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಲೂಟಿ ಇಷ್ಟು ದುಬಾರಿಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಾರಿ ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹಂಗಿಸಲಾಗಿದೆ. ಪ್ರೀತಿಯ ಮೋದಿ ಅವರೇ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೇ ಚರ್ಚಾದಲ್ಲಿ ಸಲಹೆ ನೀಡಿದ್ದಕ್ಕೆ ನಿಮಗೆ ದೊಡ್ಡ ಧನ್ಯವಾದಗಳು. ಈಗ ಕರ್ನಾಟಕದ ಜನ ಶೇ.40ರಷ್ಟು ಕಮಿಷನ್ ಪೇ ಚರ್ಚಾಗಾಗಿ ಕಾಯುತ್ತಿದ್ದಾರೆ.
ನೀವು ಕರ್ನಾಟಕಕ್ಕೆ ಬಂದಾಗ ಇದನ್ನು ಮಾಡಿ ಎಂದು ಮನವಿ ಮಾಡುವ ಜೊತೆಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕುರ್ಚಿಯಲ್ಲಿ ಕುಳಿತು ಪರಸ್ಪರ ಚರ್ಚೆ ಮಾಡುವ ಫೋಟೋವನ್ನು ಫೋಸ್ಟ್ ಮಾಡಲಾಗಿದೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯುಷ್ ಗೋಯಲ್, ಪ್ರಧಾನ ಮಂತ್ರಿಯವರು ಭ್ರಷ್ಟಚಾರ ಮುಕ್ತ ಭಾರತದ ಸಂಕಲ್ಪಕ್ಕೆ ಬದ್ಧರಾಗಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ಎಲ್ಲಿಯೇ ಭ್ರಷ್ಟಚಾರ ನಡೆದರೂ, ದೂರುಗಳು ಕೇಳಿ ಬಂದರೂ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜನ ನಂಬಿದ್ದಾರೆ.
58 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಅಪ್ರಾಪ್ತ ಬಾಲಕ
ಕರ್ನಾಟದಲ್ಲಿನ ಶೇ.40ರಷ್ಟು ಕಮಿಷನ್ ಆರೋಪಕ್ಕೆ ನಿರ್ದಿಷ್ಟ ದೂರುಗಳಿದ್ದರೆ ಅದನ್ನು ತನಿಖೆ ನಡೆಸಲು ಪ್ರಧಾನಿ ಸಿದ್ಧ. ಆದರೆ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು. ಈ ವೇಳೆ ಪತ್ರಕರ್ತರು ಕೇಳಿದ ಸರಣಿ ಪ್ರಶ್ನೆಗಳು ಕೇಂದ್ರ ಸಚಿವರನ್ನು ಮುಜಗರಕ್ಕೀಡು ಮಾಡಿತ್ತು. ಅದರ ಬೆನ್ನಲ್ಲೇ ಬಿಬಿಎಂಪಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿನ ಭ್ರಷ್ಟಚಾರದ ಆರೋಪ ಬೆಳಕಿಗೆ ಬಂದಿದೆ.
Congress, demands, commission pay charche, Modi,