ಬೆಂಗಳೂರು,ಫೆ.4-ಅದಾನಿ ಸಮೂಹ ಸಂಸ್ಥೆಯ ಷೇರು ಹಗರಣದ ಬಗ್ಗೆ ಜಂಟಿ ಸದನ ಸಮಿತಿಯ ತನಿಖೆ ನಡೆಸಬೇಕು ಎಂದು ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಪ್ರೊ,ಬಿ.ಕೆ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಡನ್ ಬರ್ಗ್ ಕುರಿತು ಸಾಕಷ್ಟು ಪ್ರಶ್ನೆ ಹುಟ್ಟುಕೊಂಡಿವೆ. 2008ರಲ್ಲಿ ಆರಂಭವಾಗಿದ ಈ ಸಂಸ್ಥೆ ಷೇರುಪೇಟೆ ಹಾಗೂ ಕಂಪನಿಗಳಲ್ಲಿ ಅಕ್ರಮದ ಬಗ್ಗೆ ತನಿಖೆ ಮಾಡಿ ವರದಿ ನೀಡುತ್ತಿದೆ.
ಈ ಸಂಸ್ಥೆ ಅದಾನಿ ಅವರ ಕಂಪನಿಗೂ ಮುನ್ನ ಒಂದೆರಡು ಕಂಪನಿ ಬಗ್ಗೆ ತನಿಖೆ ಮಾಡಿದೆ. ನಿಕಾಲ್ ಎಂಬ ಕಂಪನಿ ಬಗ್ಗೆ ವರದಿ ಪ್ರಕಟಿಸಿದೆ. ನಿಕಾಲ್ ಕಂಪನಿ ಎಲೆಕ್ಟ್ರಿಕ್ ವಾಹನ ನಿರ್ಮಾಣ ಮಾಡುತ್ತೇವೆ. ಕೇವಲ ಸಣ್ಣ ವಾಹನ ಮಾತ್ರವಲ್ಲ ದೊಡ್ಡ ವಾಹನ ತಯಾರಿಸುತ್ತೇವೆ ಎಂದು ಹೇಳಿತ್ತು. ಹೀಗಾಗಿ ಹಿಡನ್ ಬರ್ಗ್ ಇವರು ತನಿಖೆ ಮಾಡಿದ್ದಾರೆ. ನಂತರ ಈ ಕಂಪನಿಯವರು ತಪ್ಪಿತಸ್ಥರೆಂದು ತೀರ್ಮಾನವಾಗಿದ್ದು, ಜೈಲಿಗೆ ಹೋಗಿದ್ದಾರೆ.
ಕೆಜಿಎಫ್ ಬಾಬು ಮನೆಗೆ ಪೆಟ್ರೋಲ್ ಸುರಿದು ಬೆಂಕಿ
ಗೌತಮ್ ಅದಾನಿ ಅವರನ್ನು ನಮ್ಮ ಮನೆಯಲ್ಲಿ ಹುಟ್ಟಿದ ಮಗುವನ್ನು ಹೇಗೆ ಮುದ್ದಿನಿಂದ ಬೆಳೆಸುತ್ತಾರೋ ಆ ರೀತಿ ಮೋದಿ ಅವರು ಅದಾನಿಯನ್ನು ಬೆಳೆಸಿದ್ದಾರೆ. ಇದರ ಫಲಿತಾಂಶ ಏನು ಎಂದು ನೋಡಬೇಕಿದೆ. ಮೋದಿ ಅವರು ಆರಂಭದಿಂದಲೂ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಆದ್ಯತೆ ನೀಡುತ್ತದೆ. ಕಡಿಮೆ ದರದಲ್ಲಿ ಭೂಮಿ, ಸಾಲ ನೀಡಲಾಗುತ್ತಿದೆ. 1990ರ ನಂತರ ಈ ಪರಿಸ್ಥಿತಿ ಮತ್ತಷ್ಟು ಬದಲಾಯಿತು. ಮೋದಿ ಅವರು ರಾಜಕಾರಣ ಮತ್ತು ಕೈಗಾರಿಕೋದ್ಯಮಗಳ ನಡುವಣ ಸಂಬಂಧ ತೀರಾ ಹತ್ತಿರಕ್ಕೆ ತಂದರು.
ಕೈಗಾರಿಕೋದ್ಯಮಿಗಳಿಗೆ ನೀಡುವ ನೆರವಿನ ಚೌಕಟ್ಟನ್ನು ದಾಟಿದರು. ಪರಿಣಾಮ ಮೋದಿ ಅವರ ನೇತೃತ್ವದ ಗುಜರಾತಿನ ಸರ್ಕಾರ 1999ರ ನಂತರ ಅಲ್ಲಿ 1 ಚದರ ಕಿ.ಮೀಗೆ 10 ಸಾವಿರ ರೂ ಮËಲ್ಯವಿದ್ದರೂ ಅದನ್ನು ಕೇವಲ 900 ರೂ ನಂತೆ ಟಾಟಾ ಅವರಿಗೆ ಒಟ್ಟು 1100 ಎಕರೆಯನ್ನು ನೀಡಿದರು. ಈ ಹಣವನ್ನು ಕಂತಿನಲ್ಲಿ ಪಾವತಿಸುವಂತೆ ತಿಳಿಸಿದರು. 20 ಕೋಟಿಯಷ್ಟು ಸ್ಟಾಂಪ್ ಡ್ಯೂಟಿ ಮನ್ನಾ ಮಾಡಿದರು. ಮೌಲ್ಯಾಧಾರಿತ ತೆರಿಗೆ ಮುಂದೂಡಿದರು.
2900 ಕೋಟಿ ಮೌಲ್ಯದ ಉದ್ಯಮಕ್ಕೆ ಸರ್ಕಾರದಿಂದ 10 ಸಾವಿರ ಕೋಟಿ ಸಾಲ ನೀಡಿದ್ದರು. ಅರಣ್ಯ ಭೂಮಿ ಕೊಟ್ಟರು. 2013ರಲ್ಲಿ ಸಿಎಜಿ ವರದಿಯಲ್ಲಿ 15 ಸಾವಿರ ಆಡಿಟ್ ಪ್ರಶ್ನೆಗಳನ್ನು ಗುಜರಾತ್ ಸರ್ಕಾರಕ್ಕೆ ಕೇಳಲಾಗಿತ್ತು. ಇದಕ್ಕೆ ಸರ್ಕಾರ ಸರಿಯಾದ ಉತ್ತರ ನೀಡಲಿಲ್ಲ. ಇದು ಗುಜರಾತ್ ಮಾಡೆಲ್. ಇವುಗಳಿಂದ ಮೋದಿ ಪಾಠ ಕಲಿಯಲಿಲ್ಲ ಎಂದು ಹೇಳಿದರು.
ಲಂಚ ನೀಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ
2013ರ ಸೆಪ್ಟೆಂಬರ್ ವೇಳೆಗೆ ಅದಾನಿ ಮತ್ತು ಅಂಬಾನಿ ಸಂಪತ್ತು ಹೆಚ್ಚು ಕಡಿಮೆ ಸಮಾನಾಂತರವಾಗಿತ್ತು. ಮೋದಿ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಅದಾನಿ ಸಂಪತ್ತು ಹೆಚ್ಚಾಯಿತು. ಮೋದಿ ಅವರು ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ ತಕ್ಷಣವೇ ಅದಾನಿ ಗ್ರೂಪ್ ಷೇರುಗಳು ಗಗನಕ್ಕೇರಿತು. 60 ಸಾವಿರ ಕೋಟಿಗೆ ಸಂಪತ್ತು ಏರಿತ್ತು. ಸಂಪತ್ತು ಹೆಚ್ಚಳಕ್ಕೆ ಮೋದಿ ಹಾಗೂ ಅದಾನಿ ಅವರ ಸಂಬಂಧವೇ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿದ್ದವು ಎಂದರು.
2014ರ ಚುನಾವಣೆ ಮುನ್ನ ಮೋದಿ ದೇಶದಾದ್ಯಂತ ಅದಾನಿ ಅವರ ಚಾರ್ಟೆಡ್ ವಿಮಾನದಲ್ಲಿ ಪ್ರವಾಸ ಮಾಡಿದರು. ಚನಾವಣೆ ಗೆದ್ದಾಗ ಪ್ರಮಾಣ ವಚನ ಸ್ವೀಕರಿಸಲು ಅಹಮದಾಬಾದ್ ನಿಂದ ದೆಹಲಿಗೆ ಅದಾನಿ ಅವರ ಖಾಸಗಿ ವಿಮಾನದಲ್ಲಿ ಆಗಮಿಸಿದ್ದರು. ಬಂಡವಾಳಶಾಹಿ ಪರವಾದ ಸರ್ಕಾರ ಎಂದರೆ ಇದೆ.
ಮೋದಿ ಪ್ರಧಾನಿ ಆದ ನಂತರ ಮಾಡಿದ ಬಹುತೇಕ ಎಲ್ಲ ವಿದೇಶ ಪ್ರವಾಸಗಳಿಗೆ ಅದಾನಿ ಅವರನ್ನು ಖಾಸಗಿ ಅತಿಥಿಯನ್ನಾಗಿ ಕರೆದುಕೊಂಡು ಹೋಗುತ್ತಾರೆ. ಇದರ ಪರಿಣಾಮವಾಗಿ ಅದಾನಿ ಅವರು ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದರು ಎಂದು ದೂರಿದರು.
ಶ್ರೀಲಂಕಾದ ಸಮುದ್ರ ತೀರದಲ್ಲಿ ಇಂಧನ ಉತ್ಪಾದನೆ ಅವಕಾಶವನ್ನು ಅಧಾನಿ ಅವರಿಗೆ ನೀಡಬೇಕು ಎಂದು ನಮ್ಮ ಸರ್ಕಾರ ಶ್ರೀಲಂಕಾ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಬಂಡವಾಳಶಾಹಿಗಳ ಪರವಾಗಿ ಸರ್ಕಾರ ನಿಲ್ಲುವುದು ಅಪಾಯಕಾರಿ. ಈ ವಿಚಾರದಲ್ಲಿ ಸೆಬಿ ಮೂಲಕ ತನಿಖೆ ಮಾಡಿಸಬೇಕು ಎಂದು ನಮ್ಮ ನಾಯಕರು ಹೇಳಿದ್ದಾರೆ.
ನನ್ನ ಪ್ರಕಾರ ನಿವೃತ್ತ ನ್ಯಾಯಾೀಧಿಶರು, ಪ್ರತಿಷ್ಠಿತ ಕಾಪೆರ್ಪೊರೇಟ್, ಪ್ರಭಾವಿ ವ್ಯಕ್ತಿಗಳನ್ನೊಳಗೊಂಡ ನಾಗರೀಕ ನ್ಯಾಯಾಕರಣ ರಚಿಸಿ ಅದರಿಂದ ತನಿಖೆ ಮಾಡಿಸಬೇಕು. ಈ ವಿಚಾರವಾಗಿ ಎಲ್ಲ ವಿರೋಧ ಪಕ್ಷಗಳು ಜಂಟಿ ಸದನ ಸಮಿತಿ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.
3 ದಿನ ಸರಕು ಸಾಗಣೆ ವಾಹನಗಳ ಬೆಂಗಳೂರು ಪ್ರವೇಶ ನಿಷೇಧ
ಆರ್ಥಿಕ ಸಚಿವರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ನಿಡಿ, ಅದಾನಿ ಅವರ ವಿಚಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇನ್ನು ಹಣಕಾಸು ಸಚಿವರು, ಎಲ್ಐಸಿ ಷೇರು ಕುಸಿಯುತ್ತಿದ್ದರೂ ಕಂಪನಿಯು ಲಾಭದಲ್ಲಿದೆ ಎಂದು ಹೇಳಿದ್ದಾರೆ. ಇದರ ಅರ್ಥ ಏನು? ಎಂದು ಪ್ರಶ್ನಿಸಿದರು.
Congress, demands, probe, Adani, scam,