ಬೆಂಗಳೂರು,ಡಿ.19- ಪಕ್ಷದಲ್ಲಿ ಶಿಸ್ತು ಮತ್ತು ಏಕತೆಗೆ ಪಾಲನೆ ಮಾಡದೆ ಇರುವ ಎಷ್ಟೇ ದೊಡ್ಡ ನಾಯಕರಾದರೂ ಕಠಿಣ ಕ್ರಮ ಜರುಗಿಸುವ ಸಂದೇಶ ರವಾನೆಯಾಗಿದೆ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎನ್ನುವ ಹಂತದಲ್ಲಿ ಮೂರು ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ, ಅದಕ್ಕೂ ಮೊದಲು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಡಿದ ಟೀಕೆಗಳು ಪಕ್ಷದಲ್ಲಿ ಭಾರೀ ಕೋಲಾಹಲ್ ಮೂಡಿಸಿವೆ.
ನಿಷ್ಠಾವಂತ ಕಾಂಗ್ರೆಸಿಗರು ಸಿದ್ದರಾಮಯ್ಯ ಅವರ ವಿರುದ್ಧ ಬಿ.ಕೆ.ಹರಿಪ್ರಸಾದ್‍ರನ್ನು ಎತ್ತಿಕಟ್ಟಿದ್ದಾರೆ ಎಂಬ ಅಸಮಧಾನ ಒಳಗೊಳಗೆ ಕುದಿಯುತ್ತಿದೆ. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರ ಬಣದಿಂದ ಅಕಾಡಕ್ಕಿಳಿದಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೂರು ಉಪಮುಖ್ಯಮಂತ್ರಿ ಹುದ್ದೆಗಳ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಾಬಲ್ಯ ಕುಗ್ಗಿಸುವ ಯತ್ನ ನಡೆದಿದೆ.
ಈ ಮೊದಲು ರಾಜಣ್ಣ ಹಲವಾರು ಬಾರಿ ಬಹಿರಂಗ ಹೇಳಿಕೆಗಳ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಹಿಂದೆ ಗೃಹ ಸಚಿವರು, ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಾ.ಜಿ.ಪರಮೇಶ್ವರ್‍ರನ್ನು ಜಿರೋ ಟಾಫ್ರಿಕ್ ಮಿನಿಸ್ಟರ್ ಎಂದು ಟೀಕಿಸಿ, ಅವಾಚ್ಯ ಶಬ್ದಗಳಿಂದ ತೆಗಳಿದ್ದರು. ಅದೇ ವೇಳೆ ಆಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರನ್ನು ಹಿರಿಯ ನಾಯಕ ರೋಷನ್‍ಬೇಗ್ ಬಹಿರಂಗವಾಗಿ ಟೀಕಿಸಿದ್ದರು.
ಕೆ.ಎನ್.ರಾಜಣ್ಣ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿದ್ದರು. ಪರಮೇಶ್ವರ್‍ರನ್ನು ಸಮರ್ಥಿಸಿಕೊಂಡು ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದ ರೋಷನ್‍ಬೇಗ್ ವಿರುದ್ಧ ಕ್ರಮ ಜರುಗಿಸಲಾಗಿತ್ತು. ಕಾಲಾನುಕ್ರಮದಲ್ಲಿ ರೋಷನ್‍ಬೇಗ್ ಆಪರೇನ್ ಕಮಲದ ಖೆಡ್ಡಾದಲ್ಲಿ ಕಣ್ಣು ಮುಚ್ಚಿಕೊಂಡು ಬಿದ್ದು ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುವಂತಾಯಿತು. ರಾಜಣ್ಣ ಅವರಿಂದ ಸ್ಪಷ್ಟನೆ ಪಡೆದುಕೊಂಡು ಹೈಕಮಾಂಡ್ ಕ್ಷಮಾದಾನ ನೀಡಿತ್ತು.
ಈಗ ಅದೇ ರೀತಿಯ ಮತ್ತೊಂದು ಬೆಳವಣಿಗೆ ನಡೆದಿದೆ. ಹರಿಪ್ರಸಾದ್ ಕಾಂಗ್ರೆಸ್‍ನಲ್ಲಿ ಹಿರಿಯ ನಾಯಕರಾಗಿದ್ದು ಎಐಸಿಸಿ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ. ವರಿಷ್ಠ ಮಂಡಳಿಯಲ್ಲಿ ಕೆಲಸ ಮಾಡಿರುವ ಅವರು ಹೈಕಮಾಂಡ್‍ನಲ್ಲಿ ಪ್ರಭಾವಿಯೂ ಆಗಿದ್ದಾರೆ. ಆದರೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಧಾನಗೊಂಡಿರುವ ಅವರು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಅವರಿಗೆ ಹೈಕಮಾಂಡ್ ನೋಟಿಸ್ ಜಾರಿ ಮಾಡಿದ್ದು. ವಿವರಣೆ ನೀಡಲು ಹತ್ತು ದಿನಗಳ ಕಾಲಾವಕಾಶ ನೀಡಿದೆ.
ಈ ಬಾರಿ ಸಿದ್ದರಾಮಯ್ಯ ಅವರ ಬಣದಲ್ಲಿ ಬ್ಯಾಟಿಂಗ್‍ಗೆ ಇಳಿದಿರುವ ರಾಜಣ್ಣ ಎಚ್ಚರಿಕೆಯ ದಾಳ ಉರುಳಿಸಿದ್ದಾರೆ. ಜಾತಿವಾರು ಉಪಮುಖ್ಯಮಂತ್ರಿಗಳ ಹುದ್ದೆಯ ಪ್ರಸ್ತಾಪ ಮಾಡಿದ್ದಾರೆ. ಇದು ಪಕ್ಷ ನಿಷ್ಠರಿಗೆ ನುಂಗಲಾರದ ತುತ್ತಾಗಿದೆ. ರಾಜಣ್ಣ ಪ್ರಸ್ತಾಪಿಸಿರುವ ಉಪಮುಖ್ಯಮಂತ್ರಿ ಹುದ್ದೆ ರಚನೆಯಾದರೆ ಅದರ ಫಲಾನುಭವಿಯ ರೇಸ್‍ನಲ್ಲಿ ಹಿಂದೇ ರಾಜಣ್ಣ ಅವರಿಂದ ಟೀಕೆಗೆ ಗುರಿಯಾಗಿದ್ದ ಡಾ.ಜಿ.ಪರಮೇಶ್ವರ್ ಇದ್ದಾರೆ. ರಾಜಣ್ಣ ಅವರ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆಯೂ ಇಲ್ಲ, ಅತ್ತ ತಿರಸ್ಕರಿಸುವಂತೆಯೂ ಇಲ್ಲದ ಇಕ್ಕಟ್ಟಿಗೆ ಅವರು ಸಿಲುಕಿದ್ದಾರೆ.
ಒಂದು ಕಾಲದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಗಳಸ್ಯ ಕಂಠಸ್ಯ ಎಂಬಂತಿದ್ದರು. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಸ್ನೇಹ ಇದೆಯಾದರೂ ಮೊದಲಿನ ಆತ್ಮೀಯತೆ ಕಂಡು ಬರುತ್ತಿಲ್ಲ. ಮುಖ್ಯಮಂತ್ರಿ ಆಯ್ಕೆಯ ವೇಳೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ದೆಹಲಿಯಲ್ಲಿ ಪೈಪೋಟಿಯ ಸಭೆಗಳು ನಡೆಯುತ್ತಿರುವಾಗ ಪರಮೇಶ್ವರ್ ಬೆಂಗಳೂರಿನಲ್ಲೇ ಕುಳಿತು ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹೇಳುತ್ತಿದ್ದರು.
ಅದು ಸಿದ್ದರಾಮಯ್ಯ ಅವರ ಪಾಲಾದಾಗ ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಮುಂದಿಟ್ಟಿದ್ದರು. ಆದರೆ ಮುಖ್ಯಮಂತ್ರಿ ಹುದ್ದೆಗೆ ಪರ್ಯಾಯ ವಾಗಿ ಒಂದೇ ಉಪಮುಖ್ಯಮಂತ್ರಿ ಹುದ್ದೆ ಇರಬೇಕು ಎಂದು ಪಟ್ಟು ಹಿಡಿದ್ದಿದ್ದ ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಕೆ ಹೈಕಮಾಂಡ್ ಮಣಿದಿತ್ತು. ಇದು ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಸಣ್ಣ ಮನಸ್ತಾಪಕ್ಕೆ ಕಾರಣವಾಗಿದೆ.
ಈಗ ರಾಜಣ್ಣ ಈ ಓರೆಕೋರೆಗಳನ್ನು ಗಮನದಲ್ಲಿಟ್ಟುಕೊಂಡೆ ಕಲ್ಲು ಎಸೆದಿದ್ದಾರೆ. ಅದು ಆಯಕಟ್ಟಿನ ಜಾಗಕ್ಕೆ ತಲುಪಿದೆ. ರಾಜಣ್ಣ ಅವರ ಹೇಳಿಕೆಗೆ ಡಿ.ಕೆ.ಶಿವಕುಮಾರ್ ನಿನ್ನೆ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ಯಾರಿಗೆ ಯಾವಾಗ ವಿವರಣೆ ಕೇಳಬೇಕು ಎಂದು ತಮಗೆ ಗೊತ್ತಿದೆ ಎಂದು ಸ್ಪೋಟಿಸಿದ್ದಾರೆ.
ಮುಂದುವರೆದ ಆಪರೇಷನ್ ಹಸ್ತ: ಮೂವರು ಮಾಜಿ ಶಾಸಕರು ಕೈ ಸೇರ್ಪಡೆ..?
ರಾಜಕಾರಣದಲ್ಲಿ ಸಾಕಷ್ಟು ಪಳಗಿರುವ ಡಿ.ಕೆ.ಶಿವಕುಮಾರ್ ತಮ್ಮ ವಿರುದ್ಧ ನಡೆಯುತ್ತಿರುವ ಮಸಲತ್ತನ್ನು ಅಷ್ಟು ಸುಲಭಕ್ಕೆ ಸಹಿಸುವುದಿಲ್ಲ ಎಂಬುದು ಮೊದಲಿನಿಂದಲೂ ಕಂಡು ಬಂದಿರುವ ರಾಜಕೀಯ ವಿದ್ಯಮಾನಗಳಲ್ಲಿ ಸ್ಪಷ್ಟವಾಗಿದೆ. ಹಾಗೇಯೇ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರನ್ನು ಅಷ್ಟು ಸಲೀಸಾಗಿ ಬಲಿಪಶುಗಳಾಗಲು ಅವಕಾಶ ನೀಡುವುದಿಲ್ಲ ಎಂಬುದು ಅಷ್ಟೆ ಸತ್ಯ.
ಹೀಗಾಗಿ ಇಬ್ಬರು ಬಲಾಢ್ಯರ ನಡುವೆ ನಡೆಯುತ್ತಿರುವ ಮುಸಿಕಿನ ಸಂಘರ್ಷ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲು ಹೈಕಮಾಂಡ್ ಎಚ್ಚರಿಸಿದೆ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗುವ ಹೇಳಿಕೆಗಳ ಬಗ್ಗೆ ಯಾರು ಬಹಿರಂಗವಾಗಿ ಮಾತನಾಡಬಾರದು ಎಂದು ವರಿಷ್ಠರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಅ.1ರಿಂದ ಸ್ಥಿರಾಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ
ಆದಗ್ಯೂ ದಾವಣಗೆರೆಯಲ್ಲಿ ಚೆನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ ಶಿವಗಂಗಾ, ರಾಜ್ಯಕ್ಕೆ ಒಬ್ಬರೆ ಉಪಮುಖ್ಯಮಂತ್ರಿ ಸಾಕು ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ, ಹೈಕಮಾಂಡ್ ಅವರನ್ನು ಮುಖ್ಯಮಂತ್ರಿ ಮಾಡಿದೆ. ಅದು ಜಾತಿ ಕಾರಣಕ್ಕೆ ದೊರೆತ ಮನ್ನಣೆ ಅಲ್ಲ. ಅವರ ಸಾಮಥ್ರ್ಯ ಹಾಗೂ ಪಕ್ಷ ನಿಷ್ಠೆಗೆ ದೊರೆತ ಫಲ ಎಂದಿದ್ದಾರೆ.
ಹೈಕಮಾಂಡ್ ಎಷ್ಟೆ ಎಚ್ಚರಿಕೆ ನೀಡಿದರೂ ಅಲ್ಲಲ್ಲಿ ಪಕ್ಷದ ಒಳಗೆ ಈ ರೀತಿಯ ಅಭಿಪ್ರಾಯಬೇಧಗಳು ಕೇಳಿ ಬರುತ್ತಲೇ ಇವೆ.
Congress, #discipline, #strictaction, #highcommand,