ಕಾಂಗ್ರೆಸ್‍ನಲ್ಲಿ ಮತ್ತೆ ಶುರುವಾಯ್ತು ಬಣ ಬಡಿದಾಟ

Social Share

ಬೆಂಗಳೂರು,ಮಾ.17-ಟಿಕೆಟ್ ಹಂಚಿಕೆ ಸಂಬಂಧ ಕೇಂದ್ರ ಚುನಾವಣೆ ಸಮಿತಿ ಸಭೆಯ ಬೆನ್ನಲ್ಲೆ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ತೀವ್ರಗೊಂಡಿದೆ. ಸಮೀಕ್ಷಾ ವರದಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲು ವರಿಷ್ಠರು ನಿರ್ಧರಿಸಿದ್ದಾರೆ.

ಈ ನಡುವೆ ಆಕಾಂಕ್ಷಿಗಳ ದಂಡು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಪ್ರಬಲ ಲಾಬಿಗಳು ನಡೆಯುತ್ತಿವೆ.
ಮೊದಲ ಹಂತದಲ್ಲಿ ಹಾಲಿ ಶಾಸಕರು ಸೇರಿ 135 ಕ್ಷೇತ್ರಗಳಿಗೆ ಒಂದೇ ಹೆಸರಿನ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗಿದೆ.

ಉಳಿದಂತೆ ಅನೇಕ ಕ್ಷೇತ್ರಗಳಲ್ಲಿ ಟಿಕೆಟ್‍ಗಾಗಿ ಭಾರೀ ಪೈಪೋಟಿ ನಡೆದಿದ್ದು, ನಾಯಕರ ನಡುವೆಯೂ ಮುನಿಸು-ಸಂಘರ್ಷಗಳು ತಲೆದೊರಿವೆ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷದಂತೆ ಈ ವರ್ಷವೂ ಟಿಕೆಟ್ ಹಂಚಿಕೆ ಬಳಿಕ ಬಂಡಾಯ ತೀವ್ರಗೊಳ್ಳುವ ಆತಂಕ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ರಾಜ್ಯದಲ್ಲಿ ಸುಮಾರು 13 ಸಭೆಗಳನ್ನು ನಡೆಸಿ, ನಾನಾ ರೀತಿಯ ಕಸರತ್ತು ನಡೆಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗಿದೆ.

ಹೈದ್ರಾಬಾದ್ ಕರ್ನಾಟಕ ಮೀಸಲಾತಿಯಿಂದ ಇತರೆ ಭಾಗದವರಿಗೆ ಭಾರೀ ಅನ್ಯಾಯ

ಆದರೆ ಕೊನೆ ಗಳಿಗೆಯಲ್ಲಿ ತಮ್ಮವರಿಗೆ ಟಿಕೆಟ್ ಕೊಡಿಸಲು ಪ್ರಭಾವಿಗಳು ಜಿದ್ದಿಗೆ ಬಿದ್ದಿದ್ದಾರೆ. ಶ್ರಿಮಂತರೂ, ಉದ್ಯಮಿಗಳು ಟಿಕೆಟ್‍ಗಾಗಿ ಮುಗಿ ಬಿದ್ದಿದ್ದಾರೆ. ಜೊತೆಗೆ ವಲಸಿಗ ನಾಯಕರ ಅಬ್ಬರವೂ ಜೋರಾಗಿದೆ. ನಿಷ್ಠಾವಂತ ನಾಯಕರು, ಕಾರ್ಯಕರ್ತರು ಅಸಮದಾನಗೊಂಡು ಸಿಡಿದೇಳುವ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾಗಿ ಕಾಂಗ್ರೆಸ್ ಪಟ್ಟಿ ರಾಜ್ಯ ರಾಜಕೀಯದಲ್ಲಿ ಅಂತರ್ ಜ್ವಾಲಾಮುಖಿಯಂತೆ ಒಳಬೇಗುದಿಯಲ್ಲಿ ಕುದಿಯುತ್ತಿದೆ.

ಬಹುತೇಕ ಶಾಸಕರಿಗೆ ಟಿಕೆಟ್:
ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರಿರುವ ನಾಲ್ಕು ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಶಾಸಕರಿಗೂ ಟಿಕೆಟ್ ಖಚಿತಗೊಳಿಸಲಾಗಿದೆ. ಹಾಲಿ ಶಾಸಕರಿರುವ ನಾಲ್ಕು ಕ್ಷೇತ್ರಗಳಿಗೆ ಪರ್ಯಾಯ ಅಭ್ಯರ್ಥಿಗಳ ಹೆಸರನ್ನು ನಮೂದಿಸಲಾಗಿದೆ.

ಕುಂದಗೋಳಕ್ಕೆ ಶಾಸಕಿ ಕುಸುಮಾ ಶಿವಳ್ಳಿ, ಶಾಸಕಿ ಜೊತೆಗೆ ಕಾಂಗ್ರೆಸ್ ನಾಯಕ ಚಂದ್ರಶೇಖರ್ ಜತ್ತಲ್ ಹೆಸರು ನಮೂದಿಸಲಾಗಿದೆ. ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಶಾಸಕ ವೆಂಕಟರಮಣಯ್ಯ ಜೊತೆಗೆ ಬಿ.ಸಿ.ಆನಂದ್ ಹೆಸರು, ಪಾವಗಡ ಕ್ಷೇತ್ರಕ್ಕೆ ಶಾಸಕ ವೆಂಕಟರಮಣಪ್ಪ ಜೊತೆಗೆ ಅವರ ಪುತ್ರ ಎಚ್.ವಿ ವೆಂಕಟೇಶ್, ಲಿಂಗಸುಗೂರು ಕ್ಷೇತ್ರದಕ್ಕೆ ಶಾಸಕ ಡಿ.ಎಸ್. ಹೂಲಗೇರಿ ಜೊತೆಗೆ ರುದ್ರಯ್ಯ ಹೆಸರು ನಮೂದಾಗಿದೆ.

ಉಳಿದಂತೆ ಪಕ್ಷ ಚಟುವಟಿಕೆಯಲ್ಲಿ ನಿರಾಸಕ್ತಿ ತೋರಿದ ಪ್ರಭಾವಿ ನಾಯಕರ ಕ್ಷೇತ್ರಗಳಿಗೂ ಪರ್ಯಾಯ ಅಭ್ಯರ್ಥಿಯ ಹೆಸರನ್ನು ನಮೂದಿಸಲಾಗಿದೆ. ಅದರಲ್ಲಿ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡ ಮಾಜಿ ಶಾಸಕರ ಕ್ಷೇತ್ರಗಳು ಸೇರಿರುವುದು ಈ ಬಾರಿಯ ವಿಶೇಷವಾಗಿದೆ.

ಕೊನೆ ಕ್ಷಣದ ಗೊಂದಲ:
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕ್ಷೇತ್ರ ತ್ಯಾಗದ ಬಳಿಕ ಅವರ ಪುತ್ರ ನಿಖೀಲ್ ಕುಮಾರ ಸ್ವಾಮಿ ಸ್ಪಧೆಯಿಂದ ತೀವ್ರ ಕುತೂಹಲ ಕೆರಳಿಸಿರುವ ರಾಮನಗರಕ್ಕೆ ಮೊದಲು ಇಕ್ಬಾಲ್ ಹುಸೇನ್ ಹೆಸರು ಅಖೈರುಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಸಂಸದ ಡಿ.ಕೆ.ಸುರೇಶ್ ರಾಜ್ಯ ರಾಜಕಾರಣಕ್ಕೆ ಬರಲು ಆಸಕ್ತಿ ತೋರಿಸಿದ್ದು, ಗೊಂದಲ ಮೂಡಿಸಿದೆ.

ಸುರೇಶ್ ಸ್ರ್ಪಧಿಸಿ ಗೆದ್ದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅದಕ್ಕಾಗಿ ಸುರೇಶ್ ಸಂಸದರಾಗಿಯೇ ಮುಂದುವರೆಯಲಿ ಎಂದು ಕೆಲವು ಸಲಹೆ ನೀಡಿದ್ದಾರೆ. ಆದರೆ ರಾಮನಗರದಲ್ಲಿ ಹಲವು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಮಣೆ ಹಾಕುತ್ತಿರುವುದರಿಂದ ಗೆಲುವು ಕಷ್ಟವಾಗುತ್ತಿದೆ. ಈ ಬಾರಿ ಬದಲಾವಣೆ ಮಾಡಬೇಕು, ಡಿ.ಕೆ.ಸುರೇಶ್‍ರನ್ನು ಕಣಕ್ಕಿಳಿಸುವುದರಿಂದ ರಾಮನಗರ ಜಿಲ್ಲೆಯ ರಾಜಕಾರಣ ಬದಲಾಗಲಿದೆ ಎಂಬ ಚರ್ಚೆಗಳು ನಡೆಯಲಿವೆ.

ಇನ್ನೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ ವಿರುದ್ಧ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್‍ರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಮೊದಲು 2018ರ ವಿಧಾನಸಭೆ ಚುನಾವಣೆಯಲ್ಲಿ ಕೊತ್ತೂರು ಮಂಜುನಾಥ್ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿದ್ದರು.

ಕೊನೆ ಕ್ಷಣದಲ್ಲಿ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಂಡಿದ್ದರಿಂದ ಮೀಸಲು ಕ್ಷೇತ್ರದಿಂದ ಸ್ರ್ಪಧಿಸಲಾಗಲಿಲ್ಲ. ಬದಲಾಗಿ ಕಾಂಗ್ರೆಸ್ ಆ ವೇಳೆ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಎಚ್.ನಾಗೇಶ್‍ಗೆ ಕಾಂಗ್ರೆಸ್ ಬೆಂಬಲ ಘೋಷಿಸಿತ್ತು. ಅವರು ಗೆದ್ದ ಬಳಿಕ ಒಂದಷ್ಟು ಕಾಲ ಸಚಿವರಾಗಿದ್ದರು. ನಂತರ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ವೇಳೆ ಬಿಜೆಪಿ ಸೇರಿದ್ದರು. ಈಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ.

ಮುಳಬಾಗಿಲು ಕ್ಷೇತ್ರಕ್ಕೆ ಮತ್ತೆ ಕೊತ್ತೂರು ಮಂಜುನಾಥ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಚಿಕ್ಕಬಳ್ಳಾಪುರದಿಂದ ಅವರ ಹೆಸರು ಶಿಫಾರಸ್ಸು ಮಾಡಲಾಗಿದೆ. ಮುಳಬಾಗಿಲು ಕ್ಷೇತ್ರದಿಂದ ಶಾಸಕರಾಗಿರುವ ನಾಗೇಶ್‍ರಿಗೆ ಬೆಂಗಳೂರಿನ ಮಹದೇವಪುರ ಮತ್ತು ಮುಳಬಾಗಿಲು ಕ್ಷೇತ್ರ ಎರಡರಲ್ಲೂ ಹೆಸರು ನಮೂದಿಸಲಾಗಿದೆ.

ಇನ್ನೂ ನಂಜನಗೂಡು ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಕಾರ್ಯಧ್ಯಕ್ಷ ದ್ರುವನಾರಾಯಣ್ ಜೊತೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಪೈಪೋಟಿ ನಡೆಸಿದ್ದರು. ಆದರೆ ದ್ರವ ನಾರಾಯಣ್‍ರ ಹಠಾತ್ ನಿಧನದಿಂದ ರಾಜಕೀಯ ಪರಿಸ್ಥಿತಿ ತಿರುವು ಮರುವಾಗಿದೆ ಮಹದೇವಪ್ಪ ನಂಜನಗೂಡು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಟಿ.ನರಸಿಪುರ ಕ್ಷೇತ್ರಕ್ಕೆ ಮಹದೇವಪ್ಪನರವ ಪುತ್ರ ಸುನಿಲ್ ಬೋಸ್‍ಗೆ ಟಿಕೆಟ್ ನೀಡುವ ಸಾಧ್ಯತೆ ಇತ್ತು. ಈಗ ಮತ್ತೆ ಮಹದೇವಪ್ಪನವರೇ ಟಿ.ನರಸೀಪುರದಲ್ಲಿ ಸ್ರ್ಪಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಮುನಿಸು ಶಮನ, ಒಗ್ಗಟ್ಟಿನ ಜಪ

ಇನ್ನೂ ಬಳ್ಳಾರಿ ನಗರ ಕ್ಷೇತ್ರದಿಂದ ಮಾಜಿ ಶಾಸಕ ಹಾಗೂ ಗಣಿ ಉದ್ಯಮಿ ಅನೀಲ್ ಲಾಡ್‍ಪ್ರಬಲ ಆಕಾಂಕ್ಷಿಯಾಗಿದ್ದರು, ಕಾಂಗ್ರೆಸ್ ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪನವರ ಪುತ್ರಪ್ರಶಾಂತ್ ಅಲ್ಲಂ ಪೈಪೋಟಿ ನೀಡಿದ್ದಾರೆ. ಪಕ್ಷದ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ದೆಹಲಿಗೆ ಭೇಟಿ ನೀಡಿ ಪ್ರಶಾಂತ್ ಅಲ್ಲಂ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಶಿಫಾರಸ್ಸು ಮಾಡಿದ್ದಾರೆ.

ಹಾಲಿ ಶಾಸಕರು:
ಕನಕಪುರ-ಡಿ.ಕೆ.ಶಿವಕುಮಾರ್, ಬಿಟಿಎಂ ಲೇಔಟ್- ರಾಮಲಿಂಗಾರೆಡ್ಡಿ, ಜಯನಗರ- ಸೌಮ್ಯಾರೆಡ್ಡಿ, ಬ್ಯಾಟರಾಯನಪುರ- ಕೃಷ್ಣಬೈರೇಗೌಡ, ಹೆಬ್ಬಾಳ- ಭೈರತಿ ಸುರೇಶ್, ಗಾಂನಗರ- ದಿನೇಶ್ ಗುಂಡೂರಾವ್, ಕೊರಟಗೆರೆ- ಡಾ.ಜಿ.ಪರಮೇಶ್ವರ್, ಚಿತ್ತಾಪುರ- ಪ್ರಿಯಾಂಕ್ ಖರ್ಗೆ, ಕಂಪ್ಲಿ- ಗಣೇಶ್, ಬಳ್ಳಾರಿ ಗ್ರಾಮೀಣ- ನಾಗೇಂದ್ರ, ಸಂಡೂರು-ಇ.ತುಕಾರಾಂ, ಭದ್ರಾವತಿ- ಬಿ.ಕೆ.ಸಂಗಮೇಶ್, ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ, ಬೆಳಗಾವಿ ಗ್ರಾಮೀಣ- ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರ- ಅಂಜಲಿ ನಿಂಬಾಳ್ಕರ್, ಯಮಕನಮರಡಿ- ಸತೀಶ್ ಜಾರಕಿಹೊಳಿ, ಬಬಲೇಶ್ವರ- ಎಂ.ಬಿ.ಪಾಟೀಲ್, ಬಸವನಬಾಗೇವಾಡಿ- ಶಿವಾನಂದ ಪಾಟೀಲ್,

ಕೊಪ್ಪಳ- ರಾಘವೇಂದ್ರ ಹಿಟ್ನಾಳ್, ಹೂವಿನಹಡಗಲಿ- ಪಿ.ಟಿ.ಪರಮೇಶ್ವರ್ ನಾಯ್ಕ, ಹಗರಿಬೊಮ್ಮನಹಳ್ಳಿ- ಭೀಮಾನಾಯ್ಕ, ಹೊಸಕೋಟೆ- ಶರತ್ ಬಚ್ಚೇಗೌಡ, ವರುಣಾ- ಯತೀಂದ್ರ ಸಿದ್ದರಾಮಯ್ಯ, ಕಲಘಟಗಿ- ಸಂತೋಷ್ ಲಾಡ್, ಹುಣಸೂರು-ಹೆಚ್.ಪಿ.ಮಂಜುನಾಥ್, ಪಿರಿಯಾ ಪಟ್ಟಣ- ವೆಂಕಟೇಶ್, ಚಾಮರಾಜನಗರ- ಸಿ.ಪುಟ್ಟರಂಗ ಶೆಟ್ಟಿ, ಹೆಗ್ಗಡದೇವನಕೋಟೆ- ಅನಿಲ್ ಚಿಕ್ಕಮಾದು, ಸರ್ವಜ ನಗರ- ಕೆ.ಜೆ.ಜಾರ್ಜ್,

ಸಂಸತ್ ಉಭಯ ಸದನಗಳಲ್ಲಿ ಮುಂದುವರೆದ ಗದ್ದಲ : ಮತ್ತೆ ಕಲಾಪ ಮುಂದೂಡಿಕೆ

ಚಾಮರಾಜಪೇಟೆ- ಜಮೀರ್ ಅಹ್ಮದ್, ಶಿವಾಜಿನಗರ- ರಿಜ್ವಾನ್ ಅರ್ಷದ್, ವಿಜಯನಗರ- ಎಂ.ಕೃಷ್ಣಪ್ಪ, ಹುಬ್ಬಳ್ಳಿ- ಧಾರವಾಡ ಪೂರ್ವ- ಪ್ರಸಾದ್ ಅಬ್ಬಯ್ಯ, ಕೆಜಿಎಫ್ – ರೂಪ ಶಶಿಧರ್, ಬಂಗಾರಪೇಟೆ- ನಾರಾಯಣಸ್ವಾಮಿ, ಮಾಲೂರು- ನಂಜೇಗೌಡ, ರಾಯಚೂರು ಗ್ರಾಮೀಣ- ಬಸನಗೌಡ ದದ್ದಲ್,

ಏಕ ವ್ಯಕ್ತಿ ಹೆಸರಿನ ಕ್ಷೇತ್ರಗಳು:
ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್, ಹರಿಹರ- ಎಸ್.ರಾಮಪ್ಪ, ಹೊಸದುರ್ಗ- ಗೋವಿಂದಪ್ಪ, ಚಳ್ಳಕೆರೆ- ಟಿ.ರಘುಮೂರ್ತಿ, ಶಿರಾ- ಟಿ.ಬಿ.ಜಯಚಂದ್ರ, ಮಧುಗಿರಿ- ಕೆ.ಎನ್.ರಾಜಣ್ಣ, ರಾಣೆಬೆನ್ನೂರು- ಕೆ.ಬಿ.ಕೋಳಿವಾಡ, ಹಿರಿಯೂರು- ಸುಧಾಕರ್, ಕೆ.ಆರ್.ನಗರ- ಟಿ.ರವಿಶಂಕರ್, ಹನೂರು- ನರೇಂದ್ರ, ಚಿಕ್ಕನಾಯಕನಹಳ್ಳಿ- ಕಿರಣ್ ಕುಮಾರ್, ಮದ್ದೂರು- ಉದಯ್ ಕುಮಾರ್ ಗೌಡ, ನಾಗಮಂಗಲ-ಚೆಲುವರಾಯಸ್ವಾಮಿ, ಮಳವಳ್ಳಿ-ನರೇಂದ್ರ ಸ್ವಾಮಿ, ಗುಂಡ್ಲು ಪೇಟೆ- ಗಣೇಶ್ ಪ್ರಸಾದ್, ರಾಮದುರ್ಗ- ಅಶೋಕ್ ಪಟ್ಟಣ್, ಬಸವನಗುಡಿ-ಯುಬಿ ವೆಂಕಟೇಶ್, ರಾಜಾಜಿನಗರ- ಪುಟ್ಟಣ್ಣ,

ಸೊರಬ-ಮಧು ಬಂಗಾರಪ್ಪ, ಚಿತ್ರದುರ್ಗ-ವೀರೇಂದ್ರ ಪಪ್ಪಿ, ಹಿರೇಕೆರೂರು-ಯುಬಿ ಬಣಕಾರ್, ವಿರಾಜಪೇಟೆ -ಪೆÇನ್ನಣ್ಣ, ಮಾಗಡಿ-ಬಾಲಕೃಷ್ಣ, ಹೊಸಕೋಟೆ- ಶರತ್ ಬಚ್ಚೇಗೌಡ, ಚಿಂತಾಮಣಿ-ಎಂಸಿ ಸುಧಾಕರ್, ನಿಪ್ಪಾಣಿ -ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ-ಎ.ಬಿ ಪಾಟೀಲ್ , ಗೋಕಾಕ್-ಅಶೋಕ್ ಪೂಜಾರಿ, ಹುನಗುಂದ -ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ-ಸಿ.ಎಸ್ ನಾಡಗೌಡ,

ರಾಯಚೂರು-ಎನ್.ಎಸ್ ಬೋಸರಾಜ್, ಕನಕಗಿರಿ-ಶಿವರಾಜ್ ತಂಗಡಗಿ , ಯಲಬುರ್ಗಾ-ಬಸವರಾಜ್ ರಾಯರೆಡ್ಡಿ, ಕಾರವಾರ -ಸತೀಶ್ ಸೈಲ್, ಭಟ್ಕಳ-ಮಂಕಾಳ ವೈದ್ಯ, ಹಾನಗಲ್- ಶ್ರೀನಿವಾಸ್ ಮಾನೆ, ಬೈಂದೂರು-ಗೋಪಾಲ್ ಪೂಜಾರಿ, ಕೋಲಾರ -ಸಿದ್ದರಾಮಯ್ಯ, ಕಾಪು -ವಿನಯ್ ಕುಮಾರ್ ಸೊರಕೆ, ಕಡೂರು-ವೈಎಸ್‍ವಿ ದತಾ ಅವರಿಗೆ ಟಿಕೆಟ್ ಘೋಷಣೆಯ ಸಾಧ್ಯತೆಗಳಿವೆ.

ಎರಡು ಹೆಸರುಗಳ ಕ್ಷೇತ್ರಗಳು:
ಹೊಳಲ್ಕೆರೆ-ಸವಿತಾ ರಘು, ಆಂಜನೇಯ, ತೀರ್ಥಹಳ್ಳಿ -ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ, ಬಳ್ಳಾರಿ ನಗರ-ಅಲ್ಲಂ ಪ್ರಶಾಂತ್, ಅನಿಲ್ ಲಾಡ್, ಶಿಗ್ಗಾಂವಿ-ಅಜಂಪೀರ್ ಖಾದ್ರಿ, ಸೋಮಣ್ಣ ಬೇವಿನಮರದ, ಗಂಗಾವತಿ-ಇಕ್ಬಾಲ್ ಅನ್ಸಾರಿ, ಎಚ್.ಆರ್ ಶ್ರೀನಾಥ್, ಕಲಬುರಗಿ ಗ್ರಾಮೀಣ-ರೇವುನಾಯಕ ಬೆಳಮಗಿ, ವಿಜಯಕುಮಾರ್,

ಗಂಡನ ಅಕ್ರಮ ಸಂಬಂಧಕ್ಕೆ ಪತ್ನಿಯ ಕೊಲೆ, ಯೋಧನ ಬಂಧನ

ತೇರದಾಳ್-ಉಮಾಶ್ರೀ, ಮಲ್ಲೇಶಪ್ಪ, ಬಾಗಲಕೋಟೆ-ಎಚ್.ವೈ.ಮೇಟಿ, ದೇವರಾಜ್ ಪಾಟೀಲ್, ಬೆಳಗಾವಿ ಉತ್ತರ-ಫೀರೋಜ್ ಸೇಠ್, ಆಸೀಫ್ ಸೇಠ್, ಕುಡಚಿ – ಶ್ಯಾಮ್ ಭೀಮ್ ಘಾಟ್ಗೆ, ಮಹೇಂದ್ರ ತಮ್ಮಣ್ಣ, ಕಾಗವಾಡ -ರಾಜೂ ಕಾಗೆ, ದಿಗ್ವಿಜಯ್ ದೇಸಾಯಿ, ಅಥಣಿ -ಗಜಾನನ್ ಮಂಗಸೂಳಿ, ಶ್ರೀಕಾಂತ್ ಪೂಜಾರಿ, ನಂಜನಗೂಡು- ದರ್ಶನಗೆ ಧೃವನಾರಾಯಣ್, ಚಾಮುಂಡೇಶ್ವರಿ-ಮರಿಗೌಡ, ಚಂದ್ರಶೇಖರ್,

ಮಂಗಳೂರು ದಕ್ಷಿಣ-ಐವಾನ್ ಡಿಸೋಜಾ, ಜೆ.ಆರ್.ಲೋಬೋ, ಬೆಳ್ತಂಗಡಿ- ರಕ್ಷಿತ್, ಶಿವರಾಂ, ಬೆಂಗಳೂರು ದಕ್ಷಿಣ-ಆರ್.ಕೆ.ರಮೇಶ್, ಸುಷ್ಮಾ ರಾಜಗೋಪಾಲ್, ದಾಸರಹಳ್ಳಿ- ಕೃಷ್ಣಮೂರ್ತಿ, ಸಿ.ಎಂ ಧನಂಜಯ, ಕಲಘಟಗಿ-ಸಂತೋಷ್ ಲಾಡ್, ನಾಗರಾಜ್ ಚಬ್ಬಿ ಅವರ ಹೆಸರುಗಳು ಪಟ್ಟಿಯಲ್ಲಿವೆ.

Congress, DK Shivakumar, Siddaramaiah, Assembly Election,

Articles You Might Like

Share This Article