ಆಕ್ರಮಣಕಾರಿ ಪ್ರಚಾರ ತಂತ್ರಕ್ಕೆ ಮೊರೆಹೋದ ಕಾಂಗ್ರೆಸ್

Social Share

ಬೆಂಗಳೂರು,ಡಿ.4- ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಆಕ್ರಮಣಕಾರಿ ಪ್ರಚಾರ ಮಾರ್ಗಗಳ ಮೊರೆ ಹೋಗಿದ್ದು, ಬಿಜೆಪಿಯ ರೌಡಿ ರಾಜಕಾರಣಕ್ಕೆ ತಿರುಗೇಟು ನೀಡಲು ಪ್ರತ್ಯೇಕ ಬ್ಲಾಗ್ ಮಾದರಿಯ ಸಾಮಾಜಿಕ ಜಾಲತಾಣವನ್ನು ಪ್ರಾರಂಭಿಸಿದೆ.

ಅದರಲ್ಲಿ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ಕೆಲವು ವ್ಯಕ್ತಿಗಳ ಭಾವಚಿತ್ರಗಳಿದ್ದು, ಅವರು ಆರೋಪಿಗಳೆಂದು ಗುರುತಿಸಲಾದ ಕೊಲೆ ಹಾಗೂ ಇತರ ಪ್ರಕರಣಗಳ ಸಂಖ್ಯೆಯನ್ನು ನಮೂದಿಸಲಾಗಿದೆ.

ಕಳೆದ ಬಾರಿ ಕಾಂಗ್ರೆಸ್‍ನ ಪೇಸಿಎಂ ಅಭಿಯಾನ ಭಾರೀ ಸಂಚಲನ ಮೂಡಿಸಿತ್ತು. ಬಿಜೆಪಿಗೆ ತೀವ್ರ ಮುಜಗರವನ್ನುಂಟು ಮಾಡಿದ್ದಲ್ಲದೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಿಸಿತ್ತು.

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಶೋಭಯಾತ್ರೆಗೆ ಪೊಲೀಸರ ಬಿಗಿ ಬಂದೋಬಸ್ತ್

ಹಂತ ಹಂತವಾಗಿ ಪ್ರತಿದಿನ ಒಂದಲ್ಲ ಒಂದು ಹಗರಣವನ್ನು ಬಯಲಿಗೆ ತರುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಉಸಿರುಗಟ್ಟಿಸುವಂತೆ ಮಾಡುತ್ತಿದೆ. ಈ ಹಿಂದೆ ಬಿಜೆಪಿ ಅನುಸರಿಸಿದ್ದ ಆಕ್ರಮಣಕಾರಿ ಪ್ರಚಾರ ತಂತ್ರಗಳನ್ನೇ ಕಾಂಗ್ರೆಸ್ ಅಧುನಿಕತೆಗೆ ಅನುಗುಣವಾಗಿ ಬಳಕೆ ಮಾಡುತ್ತಿದೆ. ಬಿಜೆಪಿ ಪ್ರತಿ ವಿಚಾರಕ್ಕೂ ಏಟಿಗೆ ಎದುರೇಟು ನೀಡುತ್ತಿದೆಯಾದರೂ ಕಾಂಗ್ರೆಸ್‍ನ ಆರ್ಭಟದ ಮುಂದೆ ಸಪ್ಪೆ ಎನ್ನಿಸಲಾರಂಭಿಸಿದೆ.

ಅನ್ನಭಾಗ್ಯಕ್ಕೆ ಕನ್ನ : ನಕಲಿ ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಎತ್ತುವಳಿ

ಆಡಳತಾರೂಢ ಪಕ್ಷಕ್ಕಿರುವ ಇತಿಮಿತಿಯಲ್ಲೇ ಬಿಜೆಪಿ ಪ್ರತಿಪಕ್ಷಕ್ಕೆ ಸಮಜಾಯಿಷಿ ನೀಡುವ ಪ್ರಯತ್ನ
ಮಾಡುತ್ತಿದೆ. ಆದರೆ ಸರ್ವ ದಿಕ್ಕುಗಳಲ್ಲೂ ಅವಕಾಶಗಳನ್ನು ಮುಕ್ತವಾಗಿ ಇರಿಸಿಕೊಂಡಿರುವ ಕಾಂಗ್ರೆಸ್,
ತೀವ್ರ ಸ್ವರೂಪದ ಆರೋಪಗಳನ್ನು ಮಾಡುತ್ತಾ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

#Congress, #ElectionCampaign #Aggressive, #strategy,

Articles You Might Like

Share This Article