ಚುನಾವಣಾ ರಣತಂತ್ರ ರೂಪಿಸಲು ಕಾಂಗ್ರೆಸ್ ಸಭೆ

Social Share

ಬೆಂಗಳೂರು,ಡಿ.9- ಗುಜರಾತ್ ಸೋಲು, ಹಿಮಾಚಲ ಪ್ರದೇಶ ಗೆಲುವಿನ ಬಳಿಕ ಕರ್ನಾಟಕದಲ್ಲಿ ಅನುಸರಿಸಬೇಕಾದ ರಣತಂತ್ರದ ಬಗ್ಗೆ ಕಾಂಗ್ರೆಸ್ ನಾಯಕರು ಶೀಘ್ರ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್‍ನಲ್ಲಿ ಕೆಲವರು ಬಿಜೆಪಿ ಸರ್ಕಾರ ವಿರುದ್ಧ ಆಕ್ರಮಣಕಾರಿ ಪ್ರಚಾರ ಮತ್ತು ತಂತ್ರಗಾರಿಕೆ ಅನುಸರಿಸಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ.

ಆದರೆ, ಏನನ್ನೂ ಮಾಡದೆ ತಟಸ್ಥವಾಗಿ ಉಳಿದಿದ್ದೇ ಆದರೆ ಮುಂದಿನ ಚುನಾವಣೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಹಾಗಾಗಿ ತಟಸ್ಥ ನೀತಿ ಅನುಸರಿಸುವುದು ಸೂಕ್ತ ಎಂಬ ಪ್ರತಿಪಾದನೆ ಮಾಡುತ್ತಿದ್ದಾರೆ.

ಎರಡು ವಿಧಾನಭೆ ಚುನಾವಣೆ ಪೈಕಿ ಗುಜರಾತ್‍ನಲ್ಲಿ ಕಾಂಗ್ರೆಸ್ ಆಕ್ರಮಣಕಾರಿ ಪ್ರಚಾರ ತಂತ್ರ ಅನುಸರಿಸಿತ್ತು. ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಗುಜರಾತ್ ಅಸ್ಮಿತೆಯನ್ನು ಕೆಣಕ್ಕಿದ್ದರಿಂದಾಗಿ ಕಾಂಗ್ರೆಸ್ ಮುಜುಗರ ಅನುಭವಿಸುವಂತಾಯಿತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಯಿತು. ಬಿಜೆಪಿ ಗುಜರಾತ್‍ನ ಸುಪತ್ರನಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಎಂದು ಭಾರೀ ಅಪಪ್ರಚಾರ ನಡೆಸಿತು. ಇದು ಮತಗಳ ಪ್ರಮಾಣ ಏರಿಳಿಕೆಯಾಗಲು, ತಟಸ್ಥ ರಾಜಕೀಯ ನಿಲುವು ಹೊಂದಿದವರು ಬಿಜೆಪಿಯತ್ತ ಮುಖ ಮಾಡಲು ಕಾರಣವಾಯಿತು ಎಂಬ ವಿಶ್ಲೇಷಣೆಗಳಿವೆ.

ಹಿಮಾಚಲ ಪ್ರದೇಶದಲ್ಲಿ ಸದ್ದಿಲ್ಲದೆ ಪ್ರಚಾರ ನಡೆಸಲಾಗಿದೆ. ಪ್ರಿಯಾಂಕ ಗಾಂಧಿ ಅವರು ಪದೇ ಪದೇ ಅಲ್ಲಿಗೆ ತೆರಳಿ ಸರಣಿ ಸಭೆಗಳನ್ನು ನಡೆಸುವ ಮೂಲಕ ಜನರ ಮನವೊಲಿಕೆ ಯತ್ನ ನಡೆಸಿದ್ದರು. ಪಕ್ಷದ ಸೈಲೆಂಟ್ ಆಪರೇಷನ್ ಯಶಸ್ಸು ನೀಡಿದೆ. ಪರಿಣಾಮ ಹಿಮಾಚಲಪ್ರದೇಶದಲ್ಲಿ 62 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ.

ನಟ ಅನಿರುದ್ಧ್ ನಿರ್ಬಂಧ ತೆರವಿಗೆ ಎಸ್.ನಾರಾಯಣ್ ಸಂಧಾನ

ಈ ಸಮೀಕರಣದ ಆಧಾರದ ಮೇಲೆ ಕರ್ನಾಟಕದಲ್ಲಿ ಯಾವ ತಂತ್ರಗಾರಿಕೆ ಅನುಸರಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಮತ್ತು ಕೋಮುವಾದದ ವಿರುದ್ಧ ಜನಾಂದೋಲಗಳನ್ನು ರೂಪಿಸಬೇಕು. ಕಾವು ತಣ್ಣಗಾಗಲು ಬಿಡದಂತೆ ಪ್ರತಿಭಟನಾ ರ್ಯಾಲಿಗಳನ್ನು ಸಂಯೋಜಿಸಬೇಕು ಎಂಬ ಅಭಿಪ್ರಾಯಗಳು ಬಲವಾಗಿವೆ.

ಆದರೆ, ಇದನ್ನು ಶಾಸಕಾಂಗ ಪಾಳಯ ಒಪ್ಪುತ್ತಿಲ್ಲ. 2013ರ ಚುನಾವಣೆ ಪೂರ್ವದಲ್ಲಿ ಜೆಡಿಎಸ್ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಪದೇ ಪದೇ ಆರೋಪಗಳನ್ನು ಮಾಡಿ ಕೆಣಕ್ಕಿತ್ತು. ಕಾಂಗ್ರೆಸ್ ಅಂತಹ ಯಾವುದೇ ಶ್ರಮ ತೆಗೆದುಕೊಳ್ಳದೆ ತಟಸ್ಥವಾಗಿತ್ತು. ಆದರೆ, ಚುನಾವಣೆಯಲ್ಲಿ ಜನ ಕಾಂಗ್ರೆಸ್ ಕೈ ಹಿಡಿದರು. ಈಗಲೂ ಅದೇ ಮಾದರಿಯನ್ನು ಅನುಸರಿಸಿದ್ದೇ ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ.

ಆಕ್ರಮಣಕಾರಿ ಪ್ರಚಾರದ ಮೊರೆ ಹೋದರೆ ಬಿಜೆಪಿ ಪ್ರತಿಯೊಂದಕ್ಕೂ ಎದುರೇಟು ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ ಕಾಂಗ್ರೆಸ್ ಬಿಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಹೀಗಾಗಿ ಏನೂ ಮಾಡದೆ ನಮ್ಮ ಪಾಡಿಗೆ ನಾವು ಪಕ್ಷ ಸಂಘಟನೆ ಮಾಡಿಕೊಂಡಿದ್ದರೆ ಜನ ಬಿಜೆಪಿ ಆಡಳಿತದ ನಿಷ್ಕ್ರಿಯತೆಯಿಂದ ಬೇಸತ್ತು ನಮಗೆ ಮತ ನೀಡುತ್ತಾರೆ.
ಬಾಯಿಬಿಟ್ಟು ಬಣ್ಣಗೆಡು ಮಾಡಿಕೊಳ್ಳುವುದಕ್ಕೆ ಮೌನವಾಗಿರುವುದು ಸೂಕ್ತ ಎಂದು ಕೆಲವು ನಾಯಕರು ಸಲಹೆ ನೀಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಬ್ರೇಕ್, ಕಟೀಲ್ ಮುಂದುವರಿಕೆ

ಈ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆ ಬಗ್ಗೆ ಶೀಘ್ರವೇ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Congress, election, strategy, meeting,

Articles You Might Like

Share This Article