ಮುಂದಿನ 5 ವರ್ಷದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ : ಆರ್.ಅಶೋಕ್

Social Share

ಬೆಂಗಳೂರು,ಡಿ.8- ಮುಂದಿನ ಐದು ವರ್ಷದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ನಿರ್ಮೂಲನೆಯಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಗುಜರಾತ್ ಮತ್ತು ಹಿಮಾಚಲಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ರಾಜ್ಯದ ಬಿಜೆಪಿ ಮುಖಂಡರು, ಕಾರ್ಯಕರ್ತರಲ್ಲಿ ಹುರುಪು ತಂದಿದೆ. ಈ ಚುನಾವಣೆಯ ಫಲಿತಾಂಶ ಅಭಿವೃದ್ಧಿಯ ದಿಕ್ಸೂಚಿಯಾಗಿದೆ ಎಂದರು.

ಗುಜರಾತ್‍ನಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದ್ದು, ಅತಿಹೆಚ್ಚಿನ ಉತ್ಸಾಹ ಮೂಡಿಸಿದ್ದು, ಶಕ್ತಿ ತುಂಬಿದಂತಾಗಿದೆ. ಹೀಗಾಗಿ ಕಾಂಗ್ರೆಸ್ ನಿರ್ಮೂಲನೆಯಾಗಲಿದೆ. ಬಹಳಷ್ಟು ಕಾಂಗ್ರೆಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದು ಮುಂದಿನದ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದರು.

ಗುಜರಾತ್ ಫಲಿತಾಂಶದಿಂದ ಹಿರಿಹಿರಿ ಹಿಗ್ಗಿದ ಸಿಎಂ ಬೊಮ್ಮಾಯಿ

ಕಬಿನಿ ಹಿನ್ನೀರಿನಲ್ಲಿ ಮುಳುಗಡೆಯಾಗಿ ಜಮೀನು ಕಳೆದುಕೊಂಡವರ ಸಮಸ್ಯೆ ಪರಿಹಾರಕ್ಕೆ ನಾಳೆ ಸಭೆ ನಡೆಸಲಾಗುವುದು. ಹಾಗೆಯೇ ಶೇಂದಿ ನಿಷೇಧ ಮಾಡಿರುವುದರಿಂದ ಈಚಲು ಬೆಳೆ ಬೆಳೆದಿದ್ದ ರೈತರ ಸಮಸ್ಯೆ ಯಾಗಿದೆ. ಸದ್ಯದಲ್ಲೇ ಇದರ ಪರಿಹಾರಕ್ಕೂ ಸಭೆ ಮಾಡಲಾಗುವುದು ಎಂದರು.

ಕರ್ನಾಟಕ ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮಕ್ಕೆ 21 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 2013 ಫಲಾನುಭವಿಗಳಿಗೆ ಸ್ಥಾನ ನೀಡಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ. ಸ್ವಯಂ ಉದ್ಯೋಗ, ನೇರಸಾಲ, ಅರಿವು ಶೈಕ್ಷಣಿಕ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಕಂದಾಯ ಸಚಿವಾಲಯದಲ್ಲಿ ಆರ್ಯ ವೈಶ್ಯ ಆಹಾರವಾಹಿನಿ ಯೋಜನೆ ಆರಂಭಿಸಲಾಗಿದೆ. ಇದರಡಿ ಗರಿಷ್ಠ 2 ಲಕ್ಷ ರೂ.ವರೆಗೂ ಸಹಾಯಧನ ಮಂಜೂರು ಮಾಡಲಿದ್ದು, ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.

ಅಂಧಕಾರದಲ್ಲಿರುವ ಮೋದಿ ಕಣ್ಣಾಸ್ಪತ್ರೆ ಮೇಲೆ ಭೂಗಳ್ಳರ ಕಣ್ಣು

ಈ ಯೋಜನೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕಡೆಯ ದಿನವಾಗಿದೆ. ನಿಗಮವು ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಿಇಒ ಲೈವ್ ಡಾಶ್‍ಬೋರ್ಡ್ ಸಿದ್ದಪಡಿಸಿದ್ದು, ಡಾಶ್‍ಬೋರ್ಡ್‍ನಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಸಿಇಒಗಳು ಅಭ್ಯರ್ಥಿಗಳ ವಿವರವನ್ನು ವೀಕ್ಷಿಸಬಹುದು ಎಂದರು.

ನಿಗಮದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೆಚ್ಚುವರಿಗೆ 10 ಕೋಟಿ ರೂ. ಅನುದಾನ ಕೋರಲಾಗಿದೆ ಎಂದು ತಿಳಿಸಿದರು.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್. ಗೀತಾಶ್ರೀ ಉಪಸ್ಥಿತರಿದ್ದರು.

Congress, end, next five years, Minister Ashok,

Articles You Might Like

Share This Article