ಬೆಂಗಳೂರು,ಜ.25- ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ವೋಟಿಗೆ ಆರು ಸಾವಿರ ರೂಪಾಯಿಯಂತೆ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸಬರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಐಪಿಸಿ ಸೆಕ್ಷನ್ 171ಬಿ, ಓದಲಾದ 107, 120ಬಿ, 506 ಮತ್ತು ಜನಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 123(1) ಅಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ದೂರು ನೀಡಿದ ಬಳಿಕ ಠಾಣೆಯ ಆವರಣದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಕಾರಣಕ್ಕೆ ಬಿಜೆಪಿ ತಾನು ಗೆಲ್ಲಬೇಕು ಎಂದು ಅಕ್ರಮವಾಗಿ ಹಣ ಹಂಚುವ ಆಮಿಶವೊಡ್ಡಿದೆ ಎಂದು ಹೇಳಿದರು.
ಈ ಸರ್ಕಾರದ ಅವಧಿಯಲ್ಲಿ ಭ್ರಷ್ಟಚಾರ ಮುಗಿಲು ಮುಟ್ಟಿದೆ, ರಾಜ್ಯಾದ್ಯಂತ ಶೇ.40ರಷ್ಟು ಕಮಿಷನ್, ಬೆಂಗಳೂರಿನಲ್ಲಿ ಶೇ.50ರಷ್ಟು ಕಮಿಷನ್ ಮೂಲಕ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯಲಾಗಿದೆ. ಬಿಜೆಪಿಗೆ ಅಧಿಕಾರಕ್ಕೆ ಬರುವುದು ಮತ್ತೆ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುವುದೇ ಪರಿಪಾಠವಾಗಿದೆ ಎಂದು ಹೇಳಿದರು.
ಪಠಾಣ್ ಚಿತ್ರದ ವಿರುದ್ಧ ಕರ್ನಾಟಕದಲ್ಲೂ ಭುಗಿಲೆದ್ದ ಆಕ್ರೋಶ
ಭ್ರಷ್ಟಚಾರದಿಂದ ಗಳಿಸಿದ 30 ಸಾವಿರ ಕೋಟಿ ರೂಪಾಯಿಗಳನ್ನು ಈ ಚುನಾವಣೆಯಲ್ಲಿ ಹಂಚಿಕೆ ಮಾಡಲು ಮುಂದಾಗಿದೆ. ರಾಜ್ಯದಲ್ಲಿ 5 ಕೋಟಿ ಮತದಾರರಿದ್ದಾರೆ. ಪ್ರತಿಯೊಬ್ಬರಿಗೆ ಆರು ಸಾವಿರದಂತೆ 30 ಸಾವಿರ ಕೋಟಿ ಖರ್ಚು ಮಾಡಲು ಮುಂದಾಗಿದೆ. ಇದನ್ನು ನಾನು ಹೇಳುತ್ತಿಲ್ಲ ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅವರ ಹೇಳಿಕೆಯ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಸೇರಿ ಎಲ್ಲಾ ನಾಯಕರಿಗೂ ಮಾಹಿತಿ ಇದೆ ಎಂದು ದೂರಿದ್ದಾರೆ.
ಚುನಾವಣಾ ಆಯೋಗದ ಕಾಯ್ದೆ ಪ್ರಕಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಆದರೆ ಬಿಜೆಪಿ ಅದಕ್ಕೆ ವಿರುದ್ಧವಾಗಿದೆ, ಆಮಿಶವೊಡ್ಡಿ ಮತ ಸೆಳೆಯುವ ಯತ್ನ ನಡೆಸಿದೆ. ಪ್ರಜಾಪ್ರಭುತ್ವ ಬುಡಮೇಲು ಮಾಡುವ ಹುನ್ನಾರವಾಗುತ್ತಿದೆ. ಪ್ರಜಾಪ್ರಭುತ್ವ ಉಳಿಸುವುದು ಅಧಿಕಾರಿಗಳ ಕರ್ತವ್ಯ. ಅದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ರಮೇಶ್ ಜಾರಕಿಹೊಳಿ ಬಹಿರಂಗವಾಗಿ ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ. ಅದನ್ನು ಆಧರಿಸಿ ವಿವಿಧ ಸೆಕ್ಷನ್ಗಳ ಅಡಿ ಪೊಲೀಸರಿಗೆ ಇಂದು ದೂರು ನೀಡಿದ್ದೇವೆ. ನಂತರ ಚುನಾವಣೆ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ದೂರು ಆಧರಿಸಿ ಎಫ್ಐಆರ್ ಹಾಕಬೇಕು, ಬಿಜೆಪಿ ನಾಯಕರನ್ನು ಬಂಸಬೇಕು ಎಂದು ಹೈಗ್ರೌಂಡ್ಸ್ ಪೊಲೀಸರನ್ನು ಒತ್ತಾಯಿಸಿದ್ದೇವೆ. ಪ್ರತಿಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಕಾಂಗ್ರೆಸ್ ಪಕ್ಷದ ಗೃಹಲಕ್ಷ್ಮೀ ಯೋಜನೆ ಜನರಿಗೆ ನೀಡುವ ಆಮಿಷವಲ್ಲ. ಸರ್ಕಾರ ರಚನೆಯ ಬಳಿಕ ಜಾರಿಗೆ ತರುವ ಕಾರ್ಯಕ್ರಮ. ಚುನಾವಣೆ ಕಾಲದಲ್ಲಿ ಭರವಸೆ ನೀಡಲು, ಪ್ರಣಾಳಿಕೆ ಪ್ರಕಟಿಸಲು ರಾಜಕೀಯ ಪಕ್ಷಗಳಿಗೆ ಸ್ವಾತಂತ್ರ್ಯವಿದೆ. ಪಾಪ ಮುಖ್ಯಮಂತ್ರಿಯವರಿಗೆ ಈ ಕಾನೂನಿಗೆ ಅರಿವು ಇದ್ದಂತಿಲ್ಲ ಎಂದರು.
ಭ್ರಷ್ಟಚಾರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಾಲಿಶವಾದದ್ದು, ಹಿಂದೆಲ್ಲಾ ಭ್ರಷ್ಟಚಾರ ನಡೆದಿದೆ ಎಂದರೆ ಅಕಾರದಲ್ಲಿದ್ದಾಗ ಅವರು ಏಕೆ ತನಿಖೆ ನಡೆಸಲಿಲ್ಲ. ಹಿಂದೆ ನಡೆದಿದೆ ಎಂದು ಹೇಳಿಕೊಂಡು ಈಗ ಭ್ರಷ್ಟಚಾರ ಮಾಡಬೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಬೆಳೆದಿದ್ದರೆ ಅದಕ್ಕೆ ಜೆಡಿಎಸ್ ಕಾರಣ, ಯಡಿಯೂರಪ್ಪ ಜೊತೆ ಸೇರಿ 20 ತಿಂಗಳು ಸರ್ಕಾರ ರಚನೆ ಮಾಡಿ, ಮುಖ್ಯಮಂತ್ರಿಯಾಗಿದ್ದವರು ಕುಮಾರಸ್ವಾಮಿ. ಬಾಕಿ ಉಳಿದ ಅವಧಿಯಲ್ಲಿ ಯಡಿಯೂರಪ್ಪ ಅವರಿಗೆ ಅವಕಾಶ ಬಿಟ್ಟುಕೊಡಲಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಹೀಗಾಗಿ ಬಿಜೆಪಿ ಬೆಳವಣಿಗೆಗೆ ಕುಮಾರಸ್ವಾಮಿಯೇ ಕಾರಣ ಎಂದರು ದೂರಿದರು.
ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರತಿ ಮತಕ್ಕೆ ಆರು ಸಾವಿರ ರೂಪಾಯಿ ಹಂಚಿ ಗೆಲ್ಲುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಈ ರಣತಂತ್ರದ ವಿರುದ್ಧ ಪ್ರತಿತಂತ್ರ ನಡೆಸಲು ಇಂದು ನಾವು ಕೂಡ ಸಭೆ ನಡೆಸುತ್ತೇವೆ. ಬಿಜೆಪಿಯವರು ಪ್ರತಿಕ್ಷೇತ್ರದಲ್ಲಿ ನಿಗಾವಹಿಸಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ ಎಂದರು.
27ರಂದು ಹುಬ್ಬಳ್ಳಿಗೆ ಅಮಿತ್ ಷಾ ಆಗಮನ, ನಾಯಕರಿಗೆ ಹೊಸ ಜವಾಬ್ದಾರಿ
ಪಿಎಸ್ಐ ನೇಮಕಾತಿ ಹಗರಣದಲ್ಲಿ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ 3 ಕೋಟಿ ರೂಪಾಯಿ ಲಂಚ ಕೇಳಿ, 76 ಲಕ್ಷ ರೂಪಾಯಿ ಪಡೆದಿದ್ದಾನೆ. ಇದು ಒಬ್ಬ ಅಧಿಕಾರಿಯ ಪ್ರಶ್ನೆ ಅಲ್ಲ. ಆರಂಭದಲ್ಲಿ ಗೃಹ ಸಚಿವರು ಹಗರಣ ನಡೆದಿಲ್ಲ ಎಂದಿದ್ದರು. ಬಳಿಕ ತನಿಖೆ ನಡೆದಾಗ ಎಡಿಜಿಪಿ ಸೇರಿ ಹಲವರ ಬಂಧನವಾಗಿದೆ. ಪ್ರಮುಖ ಆರೋಪಿ ಈಗ ಆರೋಪಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾನೆ ಎಂದರು.
ಮಾಗಡಿಯಲ್ಲಿ ಕೆಲ ಆರೋಪಿಗಳನ್ನು ಸಂಪುಟದ ಸಚಿವರು ಬಿಡಿಸಿದ್ದಾರೆ. ಗೃಹ ಸಚಿವರು, ಮುಖ್ಯಮಂತ್ರಿ, ಸೂಪರ್ ಸಿಎಂ ಸೇರಿ ಹಲವರ ಹೆಸರು ಹಗರಣದಲ್ಲಿ ಕೇಳಿ ಬರುತ್ತಿವೆ. ಬಂಧನದಲ್ಲಿರುವ ಅಕಾರಿಗೆ ನ್ಯಾಯಾೀಶರ ಮುಂದೆ ಹೇಳಿಕೆ ನೀಡಲು ಏಕೆ ಬಿಡುತ್ತಿಲ್ಲ. ಪತ್ನಿಯನ್ನು ಭೇಟಿ ಮಾಡಲು, ಒಳ್ಳೆಯ ವಕೀಲರನ್ನು ಇಟ್ಟುಕೊಳ್ಳಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಹೊರ ಜಗತ್ತಿನ ಸಂಪರ್ಕಕ್ಕೆ ಬಂದು ಬಂತ ಅಧಿಕಾರಿ ಬಾಯಿ ಬಿಟ್ಟರೆ ಸರ್ಕಾರದ ಬಂಡವಾಳ ಬಯಲಾಗುತ್ತದೆ ಎಂಬ ಕಾರಣಕ್ಕೆ ಎಲ್ಲವನ್ನು ಮುಚ್ಚಿಡಲಾಗುತ್ತಿದೆ ಎಂದು ದೂರಿದರು.
Congress, files, complain, against, BJP, KPCC President, DK Shivakumar,