ಸುರಿವ ಮಳೆ ಲೆಕ್ಕಿಸದೆ ದೇಶದಾದ್ಯಂತ ಕಾಂಗ್ರೆಸ್ ಪ್ರತಿಭಟನೆ

Social Share

ನವದೆಹಲಿ, ಆ.5- ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಹೆಚ್ಚಳ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಮತ್ತು ಚರ್ಚೆಗೂ ಅವಕಾಶ ನೀಡದೆ ಸರ್ವಾಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ದೇಶಾದ್ಯಂತ ಇಂದು ಪ್ರತಿಭಟನೆ ನಡೆಸಿದ್ದು, ದೆಹಲಿಯಲ್ಲಿ ಬಿಗಿ ಭದ್ರತೆಯನ್ನು ಭೇಸಿ, ಸುರಿವ ಮಳೆಯಲ್ಲೇ ಬೃಹತ್ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತ ಪಡಿಸಿದೆ. ಕಾಂಗ್ರೆಸ್ ಮುಖಂಡರು ಕಪ್ಪು ಬಟ್ಟೆ ಧರಿಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇಂದು ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತ ಪಡಿಸಿದರು. ಬಹುತೇಕ ಮುಖಂಡರು ತಲೆಗೆ ಕಪ್ಪು ಪಟ್ಟಿ ಧರಿಸಿದ್ದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್‍ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕರು ಇದೇ ಮೊದಲ ಬಾರಿಗೆ ಕಪ್ಪು ಬಟ್ಟೆ ಧರಿಸಿ ಕಾಣಿಸಿಕೊಂಡರು.

ತಮ್ಮ ರಾಜಕೀಯ ಜೀವನದ್ದುದ್ದಕ್ಕೂ ಖಾದಿಯ ಬಿಳಿ ವಸ್ತ್ರಗಳನ್ನೇ ಧರಿಸುತ್ತಿದ್ದ ನಾಯಕರು ಇದೇ ಮೊದಲ ಬಾರಿಗೆ ಪೂರ್ತಿ ಕಪ್ಪು ಬಟ್ಟೆ ಸಂಸತ್ ಅವೇಶನದಲ್ಲಿ ಭಾಗವಹಿಸಿದ್ದರು. ಖರ್ಗೆ ಅವರು ಕಪ್ಪು ಬಟ್ಟೆಯ ಜೊತೆಗೆ ತಲೆಗೆ ಕಪ್ಪು ಬಟ್ಟೆಯ ಮುಂಡಾಸು ಧರಿಸಿ ರಾಜ್ಯಸಭೆ ಅವೇಶನದಲ್ಲಿ ಭಾಗವಹಿಸಿದ್ದರು.

ಸುರಿವ ಮಳೆ ಲೆಕ್ಕಿಸದೇ ಪ್ರತಿಭಟನೆ:
ಸಂಸತ್ ಭವನದ ಸ್ವಲ್ಪ ದೂರದಲ್ಲಿ, ಸಂಸತ್ ಭವನದ ಗೇಟ್ ಸಂಖ್ಯೆ ಒಂದರಲ್ಲಿ, ಎಐಸಿಸಿ ಕಚೇರಿಯಲ್ಲಿ, ವಿಜಯಚೌಕ್ ಸೇರಿದಂತೆ ದೆಹಲಿಯ ವಿವಿಧ ಪ್ರದೇಶದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಇಂದು ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿತ್ತು. ಮಳೆಯನ್ನೂ ಲೆಕ್ಕಿಸದೇ ಕಾಂಗ್ರೆಸ್‍ನ ಕಾರ್ಯಕರ್ತರು, ಸಂಸದರು, ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ಮುಂಜಾಗೃತಾ ಕ್ರಮವಾಗಿ ದೆಹಲಿ ಪೊಲೀಸರು ಬಿಗಿ ಭದ್ರತೆ ಆಯೋಜಿಸಿದ್ದರು. ಎಐಸಿಸಿ ಕಚೇರಿ ಇರುವ ಅಕ್ಬರ್ ರಸ್ತೆಯಲ್ಲಿ ಬ್ಯಾರಿಕ್ಯಾಡ್ ಹಾಕಿ ಸಂಚಾರವನ್ನು ನಿರ್ಬಂಸಲಾಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಪತ್ರ ಬರೆದ ದೆಹಲಿ ಪೊಲೀಸ್ ಆಯುಕ್ತರು ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಕಾಂಗ್ರೆಸ್ ಕಾನೂನು ಪಾಲನೆ ಸಹಕಾರ ನೀಡಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅದರ ಹೊರತಾಗಿಯೂ ಕಾಂಗ್ರೆಸ್ ಮುಖಂಡರು ಹಲವು ಕಡೆ ಪ್ರತಿಭಟನೆ ನಡೆಸುವ ಮೂಲಕ ನಿಷೇಧಾಜ್ಞೆಯನ್ನು ಉಲ್ಲಂಘಿಸಿದರು.


ರಾಹುಲ್ ಗಾಂಧಿ ಸಂಸದರ ಜೊತೆಯಲ್ಲಿ ರಾಷ್ಟ್ರಪತಿ ಭವನ ಚಲೋ ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಿದ್ದರು. ಪ್ರಿಯಾಂಕ ಗಾಂಧಿ ವಾದ್ರ ಅವರು ಕಾಂಗ್ರೆಸ್ ಮುಂಖಡರ ಜೊತೆಯಲ್ಲಿ ಪ್ರಧಾನ ಮಂತ್ರಿ ನಿವಾಸ ಮುತ್ತಿಗೆ ಹೋರಾಟ ನೇತೃತ್ವದ ನೇತೃತ್ವ ವಹಿಸಿದ್ದರು.

ಇದಕ್ಕೂ ಮುನ್ನಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು. ಪೊಲಿಸರು, ಅರೆಸೇನಾಪಡೆ ಯೋಧರು ಧರಣಿ ನಿರತರನ್ನು ವಶಕ್ಕೆ ಪಡೆದು ಧರಣಿಯನ್ನು ಅಂತ್ಯಗೊಳಿಸಿದರು. ಹೆಚ್ಚಿನ ಕಾರ್ಯಕರ್ತರು, ಮುಖಂಡರು ಪಕ್ಷದ ಕಚೇರಿಗೆ ಆಗಮಿಸುವುದನ್ನು ಬ್ಯಾರಿಕೇಡ್‍ಗಳನ್ನು ಹಾಕಿ ತಡೆಯಲಾಗಿತ್ತು.

ಸಂಸತ್ ಭವನದ ಗೇಟ್ ಬಳಿ ಸಂಸದರು ಪ್ರತಿಭಟನೆ ನಡೆಸಿದರು. ಬೃಹತ್ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿದ್ದರು. ಪ್ಯಾರಾ ಮಿಲಿಟರಿ ಮತ್ತು ಪೊಲೀಸರು ಕಾರ್ಯಕರ್ತರನ್ನು ಬಲವಂತವಾಗಿ ವಶಕ್ಕೆ ಪಡೆಯುವ ಮೂಲಕ ಪ್ರತಿಭಟನೆಯನ್ನು ನಿಷ್ಕ್ರೀಯಗೊಳಿಸುವ ಯತ್ನ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು ಬ್ಯಾರಿಕೇಡ್‍ಗಳನ್ನು ಹತ್ತಿ ಜಿಗಿದು ಭದ್ರತಾಕೋಟೆಯನ್ನು ಬೇಸುವ ಯತ್ನ ನಡೆಸಿದರು. ಪೊಲೀಸರು ಅದನ್ನು ತಡೆದರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದೆ. ದೆಹಲಿಯಲ್ಲಷ್ಟೆ ಅಲ್ಲದೆ ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

Articles You Might Like

Share This Article