Saturday, September 23, 2023
Homeಇದೀಗ ಬಂದ ಸುದ್ದಿಗ್ಯಾರಂಟಿ ಅನುಷ್ಠಾನಕ್ಕೆ ಪ್ರತ್ಯೇಕ ಆ್ಯಪ್ ಸಿದ್ಧತೆ

ಗ್ಯಾರಂಟಿ ಅನುಷ್ಠಾನಕ್ಕೆ ಪ್ರತ್ಯೇಕ ಆ್ಯಪ್ ಸಿದ್ಧತೆ

- Advertisement -

ಬೆಂಗಳೂರು, ಜೂ.1 – ಪಂಚಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಆ್ಯಪ್ ಮೂಲಕ ಅರ್ಜಿ ಸ್ವೀಕರಿಸಲು ತಯಾರಿಗಳು ನಡೆದಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ದುರುಪಯೋಗ ತಡೆಗಟ್ಟಲು ಚರ್ಚೆಗಳು ನಡೆದಿವೆ.

ಪಂಚಖಾತ್ರಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಯೂ ಕೂಡ ದುರುಪಯೋಗದ ಅವಕಾಶಗಳು ಹೆಚ್ಚಿರುವುದರಿಂದ ಪ್ರತೀ ಹಂತದಲ್ಲೂ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲಾರಂಭಿಸಿದೆ.

- Advertisement -

ಪಂಚಖಾತ್ರಿ ಯೋಜನೆಗಳ ಪೈಕಿ ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮೂರು ಯೋಜನೆಗಳ ಅನುಷ್ಠಾನಕ್ಕೆ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. ಅರ್ಜಿಗಳ ಸಲ್ಲಿಕೆಗೆ ಪ್ರತಿ ಯೋಜನೆಗೂ ಪ್ರತ್ಯೇಕ ಆ್ಯಪ್ ರಚಿಸಲು ಸೂಚಿಸಲಾಗಿದೆ.

ಮೇಕೆದಾಟು ವಿಚಾರವಾಗಿ ಆಕ್ರಮಣಕಾರಿ ವರ್ತನೆ ಬೇಡ: ತಮಿಳುನಾಡು

ಆಧಾರಕಾರ್ಡ್, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಪ್ರಮಾಣಪತ್ರಗಳನ್ನು ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಬೇಕು. ಈ ಆ್ಯಪ್‍ಗಳು ಜಿಪಿಎಸ್ ಆಧಾರಿತವಾಗಿರಲಿದ್ದು ಫಲಾನುಭವಿ ಯಾವ ಸ್ಥಳದಲ್ಲಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತದೆ. ಜೊತೆಗೆ ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ಪ್ರಾಧಿಕಾರದ ಜೊತೆ ಜೋಡಣೆ ಹೊಂದಿರುವುದರಿಂದ ಫಲಾನುಭವಿ ಬೇರೆ ಬೇರೆ ಹೆಸರಿನಲ್ಲಿ ಸೌಲಭ್ಯ ಪಡೆಯುವ ಅವಕಾಶಗಳು ತಗ್ಗಲಿವೆ ಎಂದು ಹೇಳಲಾಗುತ್ತಿದೆ.

ಆ್ಯಪ್‍ಗಳ ಜೊತೆಗೆ ನಗರ ಪ್ರದೇಶಗಳಲ್ಲಿರುವ ಸಹಾಯ ಕೇಂದ್ರಗಳು ಗ್ರಾಮೀಣ ಭಾಗದ ಪಂಚಾಯತ್ ಕಛೇರಿಗಳು ಹಾಗೂ ಇತರೆಡೆಗಳಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಚರ್ಚೆಗಳು ನಡೆಯುತ್ತಿವೆ.

ಭಾರತ-ಚೀನಾ ನಡುವೆ ಶಾಂತಿ ಮಾತುಕತೆ ಪುನರಾರಂಭ

ಅರ್ಜಿ ಸಲ್ಲಿಕೆ ಉಚಿತವಾಗಿರಲಿದ್ದು ಅಗತ್ಯ ದಾಖಲಾತಿಗಳು ಮತ್ತು ಮಾಹಿತಿಯನ್ನು ಒದಗಿಸದಿದ್ದರೆ ಫಲಾನುಭವಿಗಳು ಸೌಲಭ್ಯ ವಂಚಿತರಾಗುವ ಅವಕಾಶ ಇದೆ. ಭೌತಿಕವಾಗಿ ಆಯಾ ಇಲಾಖೆಗಳ ಕಛೇರಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ಒಟ್ಟಿನಲ್ಲಿ ಯಾವುದೇ ಅವ್ಯವಹಾರ ಹಗರಣಗಳು ಹಾಗೂ ದುರುಪಯೋಗಗಳಿವೆ ಅವಕಾಶ ಇಲ್ಲದಂತೆ ಆಧುನಿಕ ತಂತ್ರಜ್ಞಾನ ಆಧರಿಸಿ ಯೋಜನೆ ಜಾರಿಗೊಳಿಲಾಗುವುದು ಎಂದು ಮೂಲಗಳು ತಿಳಿಸಿವೆ.

congressguarantee, #Beneficiary, #Online, #app,

- Advertisement -
RELATED ARTICLES
- Advertisment -

Most Popular