Saturday, September 23, 2023
Homeಇದೀಗ ಬಂದ ಸುದ್ದಿಗ್ಯಾರಂಟಿಗೆ ಗಡುವು ವಿಧಿಸಲು ಅವರ್ಯಾರು?: ಸಚಿವ ಪ್ರಿಯಾಂಕ್ ಖರ್ಗೆ

ಗ್ಯಾರಂಟಿಗೆ ಗಡುವು ವಿಧಿಸಲು ಅವರ್ಯಾರು?: ಸಚಿವ ಪ್ರಿಯಾಂಕ್ ಖರ್ಗೆ

- Advertisement -

ಬೆಂಗಳೂರು, ಜೂ.1 – ಗ್ಯಾರಂಟಿ ಯೋಜನೆಗಳ ಜಾರಿಗೆ ಗಡುವು ವಿಧಿಸಲು ಬಿಜೆಪಿಯವರು ಯಾರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿಯವರು ಶೇ.40ರಷ್ಟು ಕಮಿಷನ್ ಪಡೆದು ದುರಾಡಳಿತ ನೀಡಿದ್ದರು. ಈಗ ಸೋಲಿನ ಹತಾಶೆಯಿಂದ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರಿಗೆ ರಾಜಕಾರಣದಲ್ಲಿ ಚಾಲ್ತಿಯಲ್ಲಿರಬೇಕಿದೆ. ಅದಕ್ಕಾಗಿ ಸಾರ್ವಜನಿಕರಿಗೆ ಪ್ರಚೋದನೆ ನೀಡಿ ಪಂಚಖಾತ್ರಿ ಯೋಜನೆಗಳ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಮೇ 10 ರಂದು ವಿಧಾನಸಭೆ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡ ಬಳಿಕ 15 ದಿನದಲ್ಲೇ ಕಾಂಗ್ರೆಸ್ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಿದ್ದು ಎಲ್ಲಾ ಸಚಿವರೂ ಈಗಾಗಲೇ ಇಲಾಖೆಗಳ ಪರಿಚಯ ಸಭೆಗಳನ್ನು ನಡೆಸಿ ಕಾರ್ಯಾರಂಭ ಮಾಡಿದ್ದಾರೆ. ಬಿಜೆಪಿಯವರಿಗೆ ಇದುವರೆಗೂ ವಿರೋಧಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲಾಗಿಲ್ಲ.

- Advertisement -

ಸೋಲಿನ ಕಾರಣಗಳ ಆತ್ಮಾವಲೋಕನ ಆಗಿಲ್ಲ. ಮೊದಲು ಅವರು ಆ ಬಗ್ಗೆ ಗಮನ ಹರಿಸಲಿ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‍ಗೆ ಜನ ಅಧಿಕಾರ ನೀಡಿದ್ದಾರೆ. ನಾವು ಚುನಾವಣೆಯಲ್ಲಿ ಭರವಸೆ ನೀಡಿದಂತೆ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಜನರ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರದ ಬಗ್ಗೆ ಬಿಜೆಪಿಯವರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಈ ಮೊದಲು ಲೋಕಸಭೆ ಚುನಾವಣೆ ವೇಳೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಭರವಸೆ ನೀಡಲಾಗಿತ್ತು. ಅಚ್ಚೆದಾನ್ ಬರಲಿದೆ. ಕೃಷಿಕರ ಆದಾಯ ದುಪ್ಪಟ್ಟಾಗಲಿದೆ. ಡಾಲರ್ ಮೌಲ್ಯ ಕಡಿಮೆಯಾಗಲಿದೆ. ಪೆಟ್ರೋಲ್, ಡೀಸಲ್ ಬೆಲೆ ಇಳಿಸುತ್ತೇವೆ ಎಂದೆಲ್ಲಾ ಭರವಸೆ ನೀಡಿದ್ದರು.

ಮೇಕೆದಾಟು: ತಮಿಳುನಾಡಿಗೆ ತಿರುಗೇಟು ಕೊಟ್ಟ ಡಿಸಿಎಂ ಡಿಕೆಶಿ

ಸ್ಮಾರ್ಟ್ ಸಿಟಿಗಳ ಬಗ್ಗೆಯೂ ಭರವಸೆ ನೀಡಲಾಗಿತ್ತು. ಇದರಲ್ಲಿ ಯಾವುದಾದರೂ ಒಂದು ಈಡೇರಿದೆಯೇ ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸಲಿ. ಬಳಿಕ ಕಾಂಗ್ರೆಸ್ ಬಗ್ಗೆ ಮಾತನಾಡಲಿ. ನಾವು ಅದರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂಬ ವಾಗ್ದಾಳಿ ನಡೆಸಿದ್ದಾರೆ.

congressguarantee, #BJP, #Minister, #PriyankKharge,

- Advertisement -
RELATED ARTICLES
- Advertisment -

Most Popular