ಬೆಂಗಳೂರು,ಮೇ 26- ಚುನಾವಣೆ ಪ್ರಚಾರದ ವೇಳೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಂತೆ ಬಿಪಿಎಲ್ ಪಡಿತರ ಚೀಟಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈವರೆಗೂ ಸುಮಾರು 2 ಲಕ್ಷ ಜನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಮನೆಗಳ ಸದಸ್ಯರ ಸಂಖ್ಯೆ ರಾಜ್ಯದಲ್ಲಿ 4.01 ಕೋಟಿ ಇರಬಹುದಾಗಿದೆ. ಈವರೆಗೂ ರಾಜ್ಯದಲ್ಲಿ 4.28 ಕೋಟಿ ಸದಸ್ಯರು ನೋಂದಾವಣಿಯಾಗಿದ್ದಾರೆ. ಇದು ಗರಿಷ್ಠ ಮಿತಿಯನ್ನು ದಾಟಿದೆ. ಮುಂದೆ ಮತ್ತಷ್ಟು ಸೇರ್ಪಡೆ ಮಾಡಬೇಕಾದರೆ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಿದೆ.
ತಾಕತ್ ಇದ್ರೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರನ್ನು ಬಂಧಿಸಿ : ಕಟೀಲ್
ಮೂರು ತಿಂಗಳ ಮೊದಲು ರಾಜ್ಯ ಸರ್ಕಾರ 1.55 ಲಕ್ಷ ಸದಸ್ಯರ ನೋಂದಣಿಗೆ ಅನುಮತಿ ನೀಡಿದ್ದು, ಎಲ್ಲರಿಗೂ ಕಾರ್ಡ್‍ಗಳನ್ನು ಹಂಚಿಕೆ ಮಾಡಲಾಗಿದೆ. ಬಳಿಕ ಚುನಾವಣೆ ಕಾಲವೂ ಸೇರಿದಂತೆ ಈವರೆಗೂ 2 ಲಕ್ಷ ಅರ್ಜಿಗಳು ಇಲಾಖೆಗೆ ಬಂದಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ.
ಪ್ರತಿ ಜಿಲ್ಲೆಯಲ್ಲೂ 10 ರಿಂದ 15 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಿಗೆ ಅನುಮತಿ ನೀಡಿದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆಯಾಗಲಿದ್ದು, ಹೆಚ್ಚುವರಿ ಪಡಿತರ ಧಾನ್ಯದ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ ಎಂಬ ಆತಂಕ ಇದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಬಳಿಕ ಮುಂದೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ಅದರಲ್ಲೂ ಬಿಪಿಎಲ್ ಕಾರ್ಡ್‍ಗಳು ಅಗತ್ಯ ಎಂಬ ಕಾರಣಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಸಲಾರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಅಪಹರಣಕ್ಕೊಳಗಾಗಿದ್ದ ಬಾಲಕಿ 17 ವರ್ಷದ ನಂತರ ಪತ್ತೆ
ಇನ್ನೂ ಕೆಲವು ಜಿಲ್ಲೆಗಳಲ್ಲಿ ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಮಾಡಿದರೆ ಮಾತ್ರ ಸೌಲಭ್ಯ ಎಂಬ ವದ್ಧಂತಿ ಹರಡಿದೆ. ಇದರಿಂದ ಗ್ರಾಮೀಣ ಭಾಗದ ಜನ ಸೈಬರ್ ಕೇಂದ್ರಗಳ ಮುಂದೆ ಸಾಲು ಗಟ್ಟಿ ನಿಂತು ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿಸುತ್ತಿದ್ದಾರೆ.
#congressguarantee, #BPLcard, #2lakh, #applied,