Saturday, September 23, 2023
Homeಇದೀಗ ಬಂದ ಸುದ್ದಿಗ್ಯಾರಂಟಿ ಚಿಂತೆಯಲ್ಲಿ ಸಿಎಂ ಸಿದ್ದರಾಮಯ್ಯ: 15ಕ್ಕೂ ಹೆಚ್ಚು ಸಭೆ

ಗ್ಯಾರಂಟಿ ಚಿಂತೆಯಲ್ಲಿ ಸಿಎಂ ಸಿದ್ದರಾಮಯ್ಯ: 15ಕ್ಕೂ ಹೆಚ್ಚು ಸಭೆ

- Advertisement -

ಬೆಂಗಳೂರು, ಜೂ.1 – ಚುನಾವಣೆ ವೇಳೆ ಜನರಿಗೆ ನೀಡಿರುವ ಭರವಸೆಗಳ ಈಡೇರಿಕೆಗೆ ಕಟಿಬದ್ಧರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದ ಎಲ್ಲಾ ಕಾರ್ಯಕಲಾಪಗಳನ್ನು ಬದಿಗಿರಿಸಿ ಪಂಚಖಾತ್ರಿ ಯೋಜನೆಗಳ ಜಾರಿಗೆ ತಮ್ಮ ಬಹುತೇಕ ಸಮಯ ಮೀಸಲಿಟ್ಟಿದ್ದಾರೆ.

ಮೇ 20 ರಂದು ಪ್ರಮಾಣವಚನ ಸ್ವೀಕರಿಸುವ ಮೊದಲಿನಿಂದಲೂ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಭೆಗಳನ್ನು ಆರಂಭಿಸಿದ ಸಿದ್ಧರಾಮಯ್ಯನವರು ಸತತವಾಗಿ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ನಿನ್ನೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಯೋಜನೆಯ ಬಗ್ಗೆ ಸ್ಪಷ್ಟತೆಗೆ ಬಂದಿದ್ದು ಖರ್ಚುವೆಚ್ಚಗಳ ಬಗ್ಗೆ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದ್ದಾರೆ.

- Advertisement -

ಅದರ ಪ್ರಕಾರ ಕಾಂಗ್ರೆಸ್ ಘೋಷಿಸಿರುವಂತೆ ಬೇಷರತ್ ಆಗಿ ಯೋಜನೆ ಜಾರಿಗೆ ತರಬೇಕಾದರೆ ಒಟ್ಟು 70 ರಿಂದ 80 ಸಾವಿರ ಕೋಟಿ ರೂ.ಗಳ ಆರ್ಥಿಕ ವೆಚ್ಚದ ಅಂದಾಜು ಪ್ರಸ್ತಾಪಿಸಲಾಗಿದೆ. ಆದರೆ ಅಷ್ಟೂ ಹಣಕಾಸನ್ನೂ ಏಕಕಾಲಕ್ಕೆ ಹೊಂದಿಸಲು ರಾಜ್ಯಸರ್ಕಾರಕ್ಕೆ ಅಸಾಧ್ಯ ಎನ್ನಲಾಗುತ್ತಿದೆ.

ಸಭೆಗಳಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ಸಿದ್ಧರಾಮಯ್ಯ ಅವರ ಆರ್ಥಿಕ ತಿಳುವಳಿಕೆಯನ್ನೇ ಅವಲಂಬಿಸಿದ್ದು ನೀವು ಹೇಳಿದಂತೆ ಕೇಳುತ್ತೇವೆ ಎನ್ನುತ್ತಿದ್ದಾರೆ.

ಈಗಾಗಲೇ ಬದ್ಧತೆಯ ವೆಚ್ಚಗಳ ಪ್ರಮಾಣ ಹೆಚ್ಚಾಗಿದೆ. ಸುಮಾರು 20 ಸಾವಿರ ಕೋಟಿ ರೂ.ಗಳ ಬಾಕಿ ಬಿಲ್ ಪಾವತಿಸಬೇಕಿದೆ. ಜೊತೆಗೆ ರಾಜ್ಯಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡುವ ಸವಾಲು ಮುಂದಿದೆ. ಹೊಸ ನೇಮಕಾತಿಗಳು ಅದರಿಂದ ಎದುರಾಗುವ ಆರ್ಥಿಕ ಹೊರೆ ಸೇರಿದಂತೆ ಎಲ್ಲವೂ ದುಬಾರಿ ವೆಚ್ಚದ ಬಾಬ್ತುಗಳಾಗಿದ್ದು ಆರ್ಥಿಕ ವ್ಯವಸ್ಥೆ ಮೇಲೆ ಒತ್ತಡ ಬೀರಲಿದೆ ಎಂದು ಸಬೂಬು ಹೇಳಿದ್ದಾರೆ.

ಮೇಕೆದಾಟು: ತಮಿಳುನಾಡಿಗೆ ತಿರುಗೇಟು ಕೊಟ್ಟ ಡಿಸಿಎಂ ಡಿಕೆಶಿ

ಆದರೆ ಹಣಕಾಸು ಇಲಾಖೆಯ ಅಧಿಕಾರಿಗಳ ಮಾತಿಗೆ ತಲೆಕೆಡಿಸಿಕೊಳ್ಳದ ಸಿದ್ಧರಾಮಯ್ಯ ತಾವು ಸಲಹೆ ನೀಡಿದಂತೆ ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ. ಪಂಚಖಾತ್ರಿಗಳ ಜಾರಿಗೆ ಸಾಲ ಮಾಡದೆ ಇರುವ ಅನುದಾನ ಲಭ್ಯತೆಯನ್ನೇ ಬಳಸಿಕೊಂಡು ಹಂತಹಂತವಾಗಿ ಅನುಷ್ಠಾನಗೊಳಿಸಲು ಸಿದ್ಧರಾಮಯ್ಯ ಚಿಂತಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯಸರ್ಕಾರದ ವಿವಿಧ ಯೋಜನೆಗಳ ಅನುದಾನವನ್ನು ಸಮೀಕರಿಸುವುದು ಜೊತೆಗೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಮೊದಲ ವರ್ಷ ಸಂಪನ್ಮೂಲ ಕ್ರೂಢೀಕರಿಸಲು ಚಿಂತನೆ ನಡೆಸಿದ್ದಾರೆ.
ಆರಂಭದಲ್ಲಿ ಪಂಚಖಾತ್ರಿಗಳಿಗೆ 50,000 ಕೋಟಿಯಷ್ಟು ಅನುದಾನ ಸಾಕಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ನಿನ್ನೆ ಸಲ್ಲಿಸಿರುವ ಪ್ರಾತ್ಯಕ್ಷಿಕೆಯ ಪ್ರಕಾರ ಒಟ್ಟು ವೆಚ್ಚ 70,000 ಕೋಟಿ ರೂ. ದಾಟುತ್ತಿದೆ.

ಮಂತ್ರಾಲಯಕ್ಕೆ ಒಂದೇ ತಿಂಗಳಿನಲ್ಲಿ 3.5 ಕೋಟಿ ಕಾಣಿಕೆ

ಈಗಾಗಲೇ ಇರುವ ಯೋಜನೆಗಳ ಅನುದಾನವನ್ನು ಕ್ರೂಢೀಕರಿಸಿದರೆ ಸುಮಾರು 40,000 ಕೋಟಿ ರೂ.ಗಳ ಲಭ್ಯತೆ ಕಂಡುಬಂದಿದ್ದು ಉಳಿದ ಅನುದಾನವನ್ನು ಹಂತಹಂತವಾಗಿ ಭರಿಸಲು ಚರ್ಚೆಗಳು ನಡೆದಿವೆ.
ಸಾರಿಗೆ ಸಂಸ್ಥೆಗಳ ಪರ್ಯಾಯ ಆದಾಯ ಮೂಲಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ಬಳಿಕ ಶೇ.50ರಷ್ಟು ಆದಾಯ ಕುಸಿತವಾಗಬಹುದು. ಅದನ್ನು ಭರಿಸಲು ಪರ್ಯಾಯ ಆದಾಯ ಮೂಲಗಳನ್ನು ಕಂಡುಕೊಳ್ಳುವಂತೆ ಸೂಚಿಸಲಾಗಿದೆ.
ಈ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ವರದಿ ನೀಡುವಂತೆಯೂ ಸೂಚಿಸುವುದಾಗಿ ಮೂಲಗಳು ತಿಳಿಸಿವೆ.

congressguarantee, #CMSiddaramaiah, #officials, #Meeting,

- Advertisement -
RELATED ARTICLES
- Advertisment -

Most Popular