Saturday, September 23, 2023
Homeಇದೀಗ ಬಂದ ಸುದ್ದಿಗ್ಯಾರಂಟಿ ಮತ್ತಷ್ಟು ವಿಳಂಬ: ಶುಕ್ರವಾರ ಸಂಪುಟ ಸಭೆ

ಗ್ಯಾರಂಟಿ ಮತ್ತಷ್ಟು ವಿಳಂಬ: ಶುಕ್ರವಾರ ಸಂಪುಟ ಸಭೆ

- Advertisement -

ಬೆಂಗಳೂರು, ಮೇ 31- ಜನರ ಬಹು ನಿರೀಕ್ಷಿತ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮತ್ತೊಂದು ದಿನ ಮುಂದೂಡಿಕೆಯಾಗಿದೆ. ಜೂನ್ 1ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಅದೇ ದಿನ ನಿರ್ಧಾರ ತೆಗೆದುಕೊಂಡು ಕಾರ್ಯಾನುಷ್ಠಾನವನ್ನು ಘೋಷಿಸಲಾಗುತ್ತದೆ ಎಂದು ಹೇಳಲಾಗಿತ್ತು. ಈವರೆಗೂ ಮಾತನಾಡಿದ ಬಹುತೇಕ ಸಚಿವರುಗಳು ಜೂ.1ರಂದೇ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಆದರೆ, ಇಂದು ದಿಢೀರ್ ನಿರ್ಧಾರದಲ್ಲಿ ಗುರುವಾರದ ಬದಲಿಗೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.

- Advertisement -

ಪೂರ್ವಭಾವಿಯಾಗಿ ಇಂದು ಎಲ್ಲ ಇಲಾಖೆಗಳ ಸಚಿವರ ಜತೆ ಚರ್ಚೆ ನಡೆಸಲಾಗುತ್ತಿದೆ. ನಾಳೆ ಮತ್ತಷ್ಟು ವಿಸ್ತೃತ ಸಮಾಲೋಚನೆ ಮೂಲಕ ಶುಕ್ರವಾರದ ಸಚಿವ ಸಂಪುಟ ಸಭೆಗೆ ಯೋಜನೆಗಳ ಮಾಹಿತಿಯನ್ನು ಮಂಡಿಸಲಾಗುವುದು. ಅಲ್ಲಿ ಅಕೃತ ಒಪ್ಪಿಗೆ ದೊರೆತ ಬಳಿಕ ಯಾವ ರೀತಿ ಮತ್ತು ಯಾವಾಗ ಯೋಜನೆ ಜಾರಿ ಎಂಬ ಕುರಿತು ಪ್ರಕಟಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಚಿವರ ಸಮ್ಮತಿ

ಹೀಗಾಗಿ ಜನರ ಬಹುನಿರೀಕ್ಷಿತ ಗ್ಯಾರಂಟಿ ಯೋಜನೆಗಳು ಮತ್ತೊಂದು ದಿನ ಮುಂದೂಡಿಕೆಯಾಗಿವೆ. ಈಗಾಗಲೇ ಹಲವಾರು ಕಡೆಗಳಲ್ಲಿ ಸಾರ್ವಜನಿಕರು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದು ಗಲಾಟೆ ಮಾಡುತ್ತಿದ್ದಾರೆ. ಸಾರಿಗೆ ಬಸ್‍ಗಳಲ್ಲಿ ಮಹಿಳೆಯರು ಬಸ್‍ಚಾರ್ಜ್ ನೀಡದೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಪಕ್ಷಗಳು ಪ್ರತಿ ಹಂತದಲ್ಲೂ ಜನರನ್ನು ಪ್ರಚೋದಿಸಿ ಗೊಂದಲ ಮೂಡಿಸುತ್ತಿದೆ. ಈ ಹಂತದಲ್ಲಿ ಸಾರಿಗೆ ನಿಗಮಗಳು ಮತ್ತು ವಿದ್ಯುತ್ ಸರಬರಾಜು ಕಂಪೆನಿ ಜತೆ ಪ್ರತಿ ದಿನವೂ ಕೂಡ ಅಮೂಲ್ಯವಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ಸಂಪುಟದಲ್ಲೇ ಗ್ಯಾರಂಟಿಗಳನ್ನು ಜಾರಿಮಾಡಲು ನಿರ್ಧಾರ ಪ್ರಕಟಿಸಬೇಕು ಎಂಬುದು ಕಾಂಗ್ರೆಸ್‍ನ ಎಲ್ಲ ವರಿಷ್ಠ ನಾಯಕರ ಸೂಚನೆಯಾಗಿತ್ತು. ಅದರಂತೆ ಅಂಗೀಕಾರ ನೀಡಿ ಆದೇಶ ಹೊರಡಿಸಲಾಗಿದೆ. ಆದರೆ, ಕಾರ್ಯಾನುಷ್ಠಾನ ಯಾವಾಗ ಎಂಬ ಪ್ರಶ್ನೆ ಕಾಡುತ್ತಲೇ ಇದೆ.

ಯಾವ ಮಾನದಂಡದ ಮೇಲೆ ಬಿಬಿಎಂಪಿ ಚುನಾವಣೆ..?

ಆ.15ರ ನಂತರ ಯೋಜನೆ ಜಾರಿಗೆ ಬರಲಿವೆ ಎಂಬ ವದಂತಿಗಳನ್ನು ಹರಿಯಬಿಟ್ಟು ಗೊಂದಲ ಮೂಡಿಸಲಾಯಿತು. ಇಂದು ಸಚಿವರ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡು ಶುಕ್ರವಾರದ ಸಂಪುಟದಲ್ಲಿ ಅಂತಿಮ ಮುದ್ರೆ ಹಾಕಲಾಗುವುದು ಎಂದು ಹೇಳಲಾಗಿದೆ.

CongressGuarantee, #Friday, #Cabinetmeeting,

- Advertisement -
RELATED ARTICLES
- Advertisment -

Most Popular