ಬೆಂಗಳೂರು, ಮೇ 30- ಮುಂದಿನ ತಿಂಗಳ ಒಂದರಂದು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ, ಆಗಸ್ಟ್ 15ರಿಂದ ಜಾರಿಗೆ ತರುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಉನ್ನತ ಮೂಲಗಳ ಪ್ರಕಾರ ಕೆಲವು ಯೋಜನೆಗಳನ್ನು ತುರ್ತಾಗಿ ಜಾರಿಗೊಳಿಸುವುದು, ಉಳಿದ ಯೋಜನೆಗಳನ್ನು ಸಂಪೂರ್ಣವಾಗಿ ಜೂನ್ 1ರಂದು ನಡೆಯುವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿ, ಅನುಷ್ಠಾನಕ್ಕೆ ಮಾತ್ರ ಸ್ವತಂತ್ರ್ಯ ದಿನಾಚರಣೆಗೆ ಸಮಯ ನಿಗದಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಎಲ್ಲಾ ಯೋಜನೆಗಳನ್ನು ಜಾರಿಗೆ ತರುವುದಾಗಿ ಮೇ 20ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆದರೆ ಯಾವಾಗಿನಿಂದ ಎಂದು ಹೇಳಿಲ್ಲ. ಜೂನ್ 1ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಕಾರ್ಯಾನುಷ್ಠಾನದ ನಿರ್ಧಾರ ಪ್ರಕಟಿಸಲಾಗುತ್ತದೆ. ಆದರೆ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ದೊರೆಯುವುದು ಮಾತ್ರ ಆಗಸ್ಟ್ 15ರ ನಂತರ ಎಂಬ ಮಾಹಿತಿ ಇದೆ.
ಈ ಕುರಿತು ನಾಳೆ ನಡೆಯುವ ಸಚಿವ ಸಂಪುಟದ ಸದಸ್ಯರ ಹಾಗೂ ಅಕಾರಿಗಳ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಏಕಾಏಕಿ ಯೋಜನೆಯನ್ನು ಜಾರಿಗೆ ತರಲು ಹಲವು ಪ್ರಕ್ರಿಯೆಗಳು ಅಡ್ಡಿಯಾಗುತ್ತವೆ. ಅದಕ್ಕಾಗಿ ಮೂರು ತಿಂಗಳ ಸಮಯಾವಕಾಶ ಬೇಕಾಗಲಿದೆ. ಆವರೆಗೂ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಅಗತ್ಯ ಇರುವ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಸಿದ್ದು, ಡಿಕೆಶಿ ಸಹಿಗಳಿಗೆ ಗ್ಯಾರಂಟಿಯೇ ಇಲ್ಲವೇ?: ಎಚ್‍ಡಿಕೆ
ಈಗಾಗಲೇ ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಸಾರ್ವಜನಿಕರು ಪ್ರತಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಮತ್ತೊಂದೆಡೆ ಸಾರಿಗೆ ಬಸ್‍ಗಳಲ್ಲಿ ಬಸ್ ಚಾರ್ಜ್ ನೀಡಲು ಮಹಿಳೆಯರು ಗಲಾಟೆ ಮಾಡುತ್ತಿದ್ದಾರೆ. ಈ ಎರಡು ಯೋಜನೆಗಳನ್ನು ತುರ್ತಾಗಿ ಜಾರಿ ಮಾಡುವ ಒತ್ತಡ ಕೇಳಿ ಬಂದಿದೆ. ಉಳಿದಂತೆ ಯುವ ನಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳನ್ನು ಸ್ವತಂತ್ರ್ಯ ದಿನಾಚರಣೆಯಿಂದ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗಿದೆ.
ರಾಜ್ಯದ ಆರ್ಥಿಕ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸ್ವತಂತ್ರ್ಯ ದಿನಾಚರಣೆಯಿಂದ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದ್ದಾರೆ. ಅಕಾರಿಗಳು ಈ ಸಲಹೆಯನ್ನು ನೀಡಿದ್ದಾರೆ. ಆದರೆ ಉಪಮುಖ್ಯಮಂತ್ರಿ ಸೇರಿದಂತೆ ಉಳಿದ ಸಚಿವರು ರಾಷ್ಟ್ರೀಯ ನಾಯಕರಾದಿಯಾಗಿ ಎಲ್ಲರೂ ಚುನಾವಣೆ ಕಾಲದಲ್ಲಿ ಸರ್ಕಾರ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದ್ದೇವೆ. ಹಾಗಾಗಿ ಸಮಯ ವ್ಯಯ ಮಾಡುವುದುಬೇಡ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ.
congress, #guarantee, #implementing, #August15,