Friday, November 22, 2024
Homeರಾಜ್ಯಶೈಕ್ಷಣಿಕ-ಸಾಮಾಜಿಕ ವರದಿ ಬಹಿರಂಗಕ್ಕೆ ಹರಿಪ್ರಸಾದ್ ಒತ್ತಾಯ

ಶೈಕ್ಷಣಿಕ-ಸಾಮಾಜಿಕ ವರದಿ ಬಹಿರಂಗಕ್ಕೆ ಹರಿಪ್ರಸಾದ್ ಒತ್ತಾಯ

ನವದೆಹಲಿ, ಅ.3- ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ರಾಜ್ಯಸರ್ಕಾರ ಮೊದಲು ಬಹಿರಂಗಪಡಿಸಬೇಕು. ಅದರ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಹಿರಿಯ ಕಾಂಗ್ರೆಸಿಗ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ನಡೆಸಿರುವುದು ಸರ್ಕಾರದಿಂದ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು ಕಾಂಗ್ರೆಸ್ ಪಕ್ಷದಿಂದ. ಹೀಗಾಗಿ ತಾವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇಳಿಕೆ ನೀಡುವುದಿಲ್ಲ. ನೇರವಾಗಿ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಕಾಂಗ್ರೆಸ್‍ನ ವರಿಷ್ಠ ನಾಯಕ ರಾಹುಲ್‍ಗಾಂಧಿ ದೇಶ ಮತ್ತು ರಾಜ್ಯಗಳಲ್ಲಿ ಜಾತಿ ಜನಗಣತಿ ಆಗಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಬಹಳ ಹಿಂದೆಯೇ ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆ ನಡೆಸಿದೆ. ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವೋ, ಇಲ್ಲವೋ ಅದು ಬೇರೆ ವಿಚಾರ. ಆದರೆ ಮೊದಲು ಅದು ಬಹಿರಂಗಗೊಳಿಸಬೇಕಿದೆ ಎಂದು ಹೇಳಿದರು.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಜಾತಿ ಜನಗಣತಿ ವರದಿ ಬಿಡುಗಡೆಯಾಗದೇ ಇರುವುದಕ್ಕೆ ಹಲವು ಕಾರಣಗಳಿರಬಹುದು. ಬಿಡುಗಡೆಯಾದ ತಕ್ಷಣವೇ ಅನುಷ್ಠಾನಕ್ಕೆ ಬರುತ್ತದೆ ಎಂದೇನಿಲ್ಲ. ಮೊದಲು ವರದಿ ಸಾರ್ವಜನಿಕವಾಗಿ ಚರ್ಚೆಯಾಗಲಿ. ಅಲ್ಲಿರುವ ಲೋಪದೋಷಗಳನ್ನು ಪರಿಶೀಲಿಸಿ ಮತ್ತೊಮ್ಮೆ ಸಮೀಕ್ಷೆ ನಡೆಸಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಮೊದಲಿನಿಂದಲೂ ಆವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಸೇರಿದಂತೆ ಹಲವು ವರದಿಗಳಿವೆ. ಬಿಜೆಪಿ ಸರ್ಕಾರದಲ್ಲೂ ಒಂದು ವರದಿಯಿದೆ. ಎಲ್ಲವನ್ನೂ ಸೇರಿಸಿ ವರದಿಯನ್ನು ಬಹಿರಂಗ ಪಡಿಸಲಿ. ಕೆಲವು ಸಮುದಾಯಗಳು ಹೆಚ್ಚಿವೆ, ಕೆಲವು ಕಡಿಮೆ ಇವೆ ಎಂಬ ಚರ್ಚೆಗಳಿವೆ. ಅದನ್ನು ನಂತರ ಸರಿಪಡಿಸಬಹುದು. ವಿಧಾನಸಭೆ, ವಿಧಾನಪರಿಷತ್‍ನಲ್ಲಿ ಚರ್ಚೆಯಾದ ಬಳಿಕವೇ ಇದು ಅನುಷ್ಠಾನಕ್ಕೆ ಬರಲು ಸಾಧ್ಯ ಎಂದು ಹೇಳಿದರು.

ಈ ಹಿಂದೆ ಸಮೀಕ್ಷೆ ನಡೆಸಿರುವುದು ರಾಜ್ಯಸರ್ಕಾರ. ಅದರ ಕುರಿತು ಏನೆಲ್ಲಾ ಚರ್ಚೆ ನಡೆದಿದೆ. ಸಂಪುಟದಲ್ಲಿ ಏನೆಲ್ಲಾ ವಿಶ್ಲೇಷಣೆಗಳಾಗಿವೆ ಎಂಬ ಮಾಹಿತಿ ತಮಗಿಲ್ಲ. ಈ ಬಗ್ಗೆ ಸರ್ಕಾರವೇ ಸ್ಪಷ್ಟನೆ ನೀಡಬೇಕು. ಆದರೆ ಪಕ್ಷದ ಸದಸ್ಯನಾಗಿ ಈ ಬಗ್ಗೆ ಪ್ರಸ್ತಾಪಿಸುವ ಅಧಿಕಾರ ತಮಗಿದೆ ಎಂದು ತಿಳಿಸಿದರು.

ಇಂಡಿಯಾ ಮೈತ್ರಿಕೂಟದಿಂದ ಹೊರಬರುವುದೇ ಎಎಪಿ..?

ಲಿಂಗಾಯತ ಸಮುದಾಯಕ್ಕೆ ಸರಿಯಾದ ಆದ್ಯತೆ ಸಿಗುತ್ತಿಲ್ಲ ಎಂದು ಹಿರಿಯ ನಾಯಕರಾದ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಹಲವು ನಾಯಕರುಗಳು ಚರ್ಚೆ ಮಾಡಿದ್ದಾರೆ. ಆದರೆ ಈ ಬಗ್ಗೆ ತಾವು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಟೀಕೆ ಮಾಡಿದವರೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಜಾತಿ ಪ್ರಾತಿನಿಧ್ಯಗಳ ಬಗ್ಗೆ ಈಗಾಗಲೇ ತಾವು ತಮ್ಮ ಅನಿಸಿಕೆಯನ್ನು ಹೇಳಿಯಾಗಿದೆ. ತಮ್ಮ ಹೇಳಿಕೆಗೆ ಕಾಂಗ್ರೆಸ್ ನೋಟಿಸ್ ನೀಡಿದೆ. ಶ್ಯಾಮನೂರು ಶಿವಶಂಕರಪ್ಪ ಅವರಿಗೆ ನೋಟಿಸ್ ನೀಡಿಲ್ಲ ಎಂಬ ಚರ್ಚೆಯನ್ನು ಮಾಡಲು ನಾವು ಬಯಸುವುದಿಲ್ಲ. ನನ್ನ ಮೇಲೆ ಕೆಲವರಿಗೆ ಪ್ರೀತಿ ಜಾಸ್ತಿ. ಹೀಗಾಗಿ ನೋಟಿಸ್ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ದೆಹಲಿ ಭೇಟಿಗೆ ವಿಶೇಷ ಅರ್ಥ ಇಲ್ಲ. 30 ವರ್ಷ ಇಲ್ಲಿ ವಾಸ ಮಾಡಿದ್ದೆ. ಬಹಳಷ್ಟು ಸ್ನೇಹಿತರು ನನಗೆ ದೆಹಲಿಯಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಆಗಮಿಸಿದ್ದೇನೆ. ಹೈಕಮಾಂಡ್ ನಾಯಕರು ಈಗ ರಾಜ್ಯದವರೇ ಆಗಿದ್ದಾರೆ. ಹೀಗಾಗಿ ವರಿಷ್ಠರನ್ನು ಭೇಟಿ ಮಾಡುವ ಬಗ್ಗೆ ವಿಶೇಷ ಏನಿಲ್ಲ ಎಂದರು.

RELATED ARTICLES

Latest News