ಡೆಹರಾಡೂನ್(ಉತ್ತರಖಂಡ್),ಜ.31- ಸದಾ ಗೊಂದಲದಲ್ಲಿರುವ ಕಾಂಗ್ರೆಸ್ ಪಕ್ಷ ಈಗ ಅಖಿಲ ಭಾರತ ಗೊಂದಲದ ಪಕ್ಷವಾಗಿದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಟೀಕಿಸಿದ್ದಾರೆ. ಅಧಿಕಾರದಲ್ಲಿದ್ದರೂ ರಾಜ್ಯವನ್ನು ಅಭಿವೃದ್ಧಿಪಡಿಸಲು ವಿಫಲವಾಗಿರುವ ಕಾಂಗ್ರೆಸ್ ಅಖಿಲ ಭಾರತ ಗೊಂದಲದ ಪಕ್ಷ(ಆಲ್ ಇಂಡಿಯಾ ಕನ್ಯೂಸ್ಡ್ ಪಾರ್ಟಿ) ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಉತ್ತರಖಂಡ ಮತ್ತು ಕೇಂದ್ರದಲ್ಲಿ ದೀರ್ಘಕಾಲ ಅಧಿಕಾರ ನಡೆಸಿದೆ. ಉತ್ತರಖಂಡಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು. ಆದರೆ ಗೊಂದಲ ಏರ್ಪಡಿಸಿ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಹೇಳಿದರು.
ಅವರಿಗೆ 370ನೇ ವಿಧಿ, ಭಾರತೀಯ ಸೈನಿಕರು, ಉತ್ತರಖಂಡ್ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವಾಗಲೂ ಗೊಂದಲದಲ್ಲಿರುತ್ತಾರೆ. ಆ ಪಕ್ಷ ದಿಕ್ಕಿಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
