ಕಾಂಗ್ರೆಸ್‍ಗೆ ಮತ ಹಾಕಿ ವ್ಯರ್ಥ ಮಾಡಬೇಡಿ : ಅರವಿಂದ್ ಕೇಜ್ರಿವಾಲ್

Social Share

ಅಹಮದಾಬಾದ್.ಸೆ.13- ಎಲ್ಲಿಯೂ ಇಲ್ಲದ ಪಕ್ಷ ಕಾಂಗ್ರೆಸ್‍ಗೆ ಜನರು ತಮ್ಮ ಮತ ಹಾಕಿ ವ್ಯರ್ಥ ಮಾಡಬೇಡಿ ,ಕಾಂಗ್ರೆಸ್ ಅಂತ್ಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಇಂದಿಲ್ಲಿ ಹೇಳಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಇಲ್ಲಿಗೆ ಭೇಟಿ ನೀಡಿರುವ ಕೇಜ್ರಿವಾಲ್ ಇಂದು ಪೌರ ಕಾರ್ಮಿಕರೊಂದಿಗೆ ನಡೆದ ಸಭೆ ನಂತರ ಸುದ್ದಿಗೋಷ್ಠಯಲ್ಲಿ ಮಾತನಾಡಿದರು.

ಪಂಜಾಬ್‍ನ ಎಎಪಿ ಸರ್ಕಾರವು ದಿವಾಳಿತನದ ಅಂಚಿನಲ್ಲಿದ್ದರೂ ಮತ್ತು ಸರ್ಕಾರಿ ನೌಕರರಿಗೆ ಸಂಬಳಕ್ಕೂ ಹಣವಿಲ್ಲದಿದ್ದರೂ ಗುಜರಾತ್‍ನಲ್ಲಿ ಜಾಹೀರಾತುಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ ಎಂಬ ಕಾಂಗ್ರೆಸ್‍ನ ಆರೋಪ ಮಾಡಿತ್ತು
ಇದಕ್ಕೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಅಂತ್ಯಕಾಣುತ್ತಿರುವ ಬಗ್ಗೆ ಜನರಿಗೆ ಸ್ಪಷ್ಟತೆ ಇದೆ. ಅವರ ಪ್ರಶ್ನೆಗಳಿಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಬದಲಿಗೆ ಎಎಪಿಯನ್ನು ಬಿಜೆಪಿಯ ಪ್ರಮುಖ ಪ್ರತಿಸ್ಪರ್„ ಎಂದು ಬಿಂಬಿಸಲಾಗುತ್ತಿದೆ ಎಂದರು .ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ಬಯಸದ ಜನರಿದ್ದಾರೆ ಮತ್ತು ಅವರು ಕಾಂಗ್ರೆಸ್‍ಗೆ ಮತ ಹಾಕಲು ಇಷ್ಟಪಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ನಾವೇ ಪರ್ಯಾಯವಾಗಿರುವುದರಿಂದ ಅವರ ಮತಗಳನ್ನು ನಾವು ಪಡೆಯಬೇಕು ಎಂದು ಅವರು ಹೇಳಿದರು.

Articles You Might Like

Share This Article