ಭಾರತ ಬಲಿಷ್ಠವಾಗಿದೆ, ಕಾಂಗ್ರೆಸ್ ಜೋಡೋ ಅಭಿಯಾನ ಮಾಡಿ : ಬಿಜೆಪಿ

Social Share

ಬೆಂಗಳೂರು,ಜು.15- ಭಾರತ್ ಜೋಡೋ ಅಭಿಯಾನ ಮತ್ತು ಸಿದ್ದರಾಮೋತ್ಸವ! ಈ ಎರಡು ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಲಿದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಭಾಜಪ, ಬಿರುಕು ಬಿಟ್ಟಿರುವ ಕಾಂಗ್ರೆಸ್ ಮನೆ ಸಿದ್ದರಾಮೋತ್ಸವದ ಬಳಿಕ ನೆಲಸಮವಾಗಲಿದೆ. ಮನೆಯೊಳಗಿದ್ದವರು ಗುಳೆ ಹೊರಡಲನುವಾಗಿದ್ದಾರೆ ಎಂದು ಟೀಕಿಸಿದೆ.

ಅಕ್ಟೊಬರ್ ತಿಂಗಳಲ್ಲಿ ನಡೆಲಿರುವ ಭಾರತ್ ಜೋಡೋ ಕಾರ್ಯಕ್ರಮಕ್ಕೂ ನಾಯಕರು ಸಿಗಲಾರದಷ್ಟು ಕಾಂಗ್ರೆಸ್ ಖಾಲಿಯಾಗಲಿದೆ ಎಂದು ವ್ಯಂಗ್ಯವಾಡಿದೆ. ಭಾರತ್ ಜೋಡೋ ಅಭಿಯಾನದ ಅಂಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲು ಉದ್ದೇಶಿಸಿರುವ ರಾಹುಲ್ ಗಾಂಧಿ ಅವರೇ, ಭಾರತ ಈಗ ಮತ್ತಷ್ಟು ಬಲಿಷ್ಠವಾಗಿದೆ. ಮುರಿದು ಹೋಗಿರುವುದು ಕಾಂಗ್ರೆಸ್ ಪಕ್ಷ, ಮೊದಲು ಕಾಂಗ್ರೆಸ್ ಜೋಡೋ ಅಭಿಯಾನ ಮಾಡಿ ಎಂದು ಲೇವಡಿ ಮಾಡಿದೆ.

ಮುಂದೊಂದು ದಿನ ಕಾಂಗ್ರೆಸ್ ಪಕ್ಷದ ಬಾಗಿಲು ಮುಚ್ಚಲೂ ಹಿಂಬಾಲಕರು ಸಿಗಲಾರರು ಎಂದು ಬಿಜೆಪಿ ಟೀಕಿಸಿದೆ.
ಸಿದ್ದರಾಮೋತ್ಸವದಿಂದ ಎರಡರಲ್ಲಿ ಯಾವುದಾದರೂ ಒಂದು ನಿಶ್ಚಿತ! ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದರೆ, ಸಿದ್ದರಾಮಯ್ಯ ಪಕ್ಷ ಬಿಡುತ್ತಾರೆ.

ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಡಿಕೆಶಿ ಪಕ್ಷ ಒಡೆಯುತ್ತಾರೆ. ನಕಲಿ ಗಾಂಗಳಿಗೀಗ ಇತ್ತ ದರಿ, ಅತ್ತ ಪುಲಿ ಗಾದೆಯ ಅನುಭವ! ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾಡಿ ಎಂದ ಡಿಕೆಶಿ ಈಗ ತನ್ನದೇ ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲೇ ನಡೆಯುವ ವ್ಯಕ್ತಿಪೂಜೆಗೆ ರಾಹುಲ್ ಗಾಂ ಮುಖ್ಯ ಅತಿಥಿಯಂತೆ, ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ನಿಂತಿದೆಯೇ? ಎಂದು ಪ್ರಶ್ನಿಸಿದೆ.

ಡಿಕೆಶಿ ತಯಾರಿಸಿದ ಊಟವನ್ನು ಸಿದ್ದರಾಮಯ್ಯಗೆ ಬಡಿಸುವ ಹುನ್ನಾರವೇ ಇದು? ಒಡೆದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಒಡೆದೇ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರದು ಎಂದೂ ಒಂದಾಗದ ಒಡಕು ಮನಸು ಎಂದಿದೆ. ಬ್ರೇಕ್ ಪಾಸ್ಟ್ ಮೀಟಿಂಗ್‍ನಿಂದ ಇದೆಲ್ಲ ಸರಿ ಹೋಗುವ ಮಾತೇ? ಒಡಕು ಕನ್ನಡಿ, ಮಸುಕು ಪ್ರತಿಬಿಂಬ ಎಂದು ಟೀಕಿಸಿದೆ.

Articles You Might Like

Share This Article