ಕಾಂಗ್ರೆಸ್‍ನಲ್ಲಿ ಪಕ್ಷ ನಿಷ್ಠರ ಅಸಮಾಧಾನ

Social Share

ಬೆಂಗಳೂರು,ಫೆ.20- ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ನಾಯಕರ ವಲಸೆಯ ಪ್ರಮಾಣ ಹೆಚ್ಚಾಗಲಾರಂಭಿಸಿದೆ. ಜೆಡಿಎಸ್‍ನ ನಾಲ್ಕು ಶಾಸಕರು, ಉತ್ತರಕರ್ನಾಟಕ ಭಾಗದ ಬಿಜೆಪಿಯ ಮೂವರು ಶಾಸಕರು, ಸುಮಾರು 20ಕ್ಕೂ ಹೆಚ್ಚು ಮಂದಿ ಮಾಜಿ ಶಾಸಕರು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ.

ಅದರಲ್ಲೂ ಬಿಜೆಪಿ ಆಡಳಿತದಲ್ಲಿದ್ದಾಗ ಅವಡಗಚ್ಚಿಕೊಂಡಿದ್ದ ನಾಯಕರು ಅಧಿಕಾರ ಅವಧಿ ಕೊನೆಗೊಳ್ಳುತ್ತಿದ್ದಂತೆ ಪಕ್ಷ ತೊರೆಯಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್‍ಗೆ ಸಿಹಿ-ಕಹಿ ಮಿಶ್ರ ಅನುಭೂತಿಯನ್ನು ಸೃಷ್ಟಿಸಿದೆ.

ಒಂದೆಡೆ ಕಾಂಗ್ರೆಸ್‍ಗೆ ಅನ್ಯ ಪಕ್ಷಗಳಿಂದ ವಲಸೆ ಹೆಚ್ಚುತ್ತಿರುವುದು ಸಕಾರಾತ್ಮಕವಾದ ಬೆಳವಣಿಗೆಯಾಗಿದ್ದರೆ, ಮತ್ತೊಂದೆಡೆ ವಲಸಿಗರಿಂದಾಗಿ ಮೂಲ ಕಾಂಗ್ರೆಸ್ಸಿಗರು ಅಸಮಾಧಾನಗೊಂಡು ಬಹಿರಂಗ ಬಂಡಾಯ ಸಾರುವ ಆತಂಕ ಕಾಡುತ್ತಿದೆ.

ಜೂನ್ ತಿಂಗಳೊಳಗೆ 8 ಸಾವಿರ ಶಾಲಾ ಕೊಠಡಿಗಳು ನಿರ್ಮಾಣ : ಸಿಎಂ

ಮೇಲ್ನೋಟಕ್ಕೆ ಪಕ್ಷಕ್ಕೆ ಬರುವ ಎಲ್ಲ ನಾಯಕರನ್ನು ಸ್ವಾಗತಿಸುವಂತೆ ಕಂಡರೂ ಕೂಡ ಒಳಗೊಳಗೆ ಅಸಮಾಧಾನಗಳು ಹೊಗೆಯಾಡುತ್ತಲೇ ಇವೆ. ಕ್ಷೇತ್ರಮಟ್ಟದಲ್ಲಿ ವಿರೋಧ ವ್ಯಕ್ತಪಡಿಸುವ ಮೂಲ ಕಾಂಗ್ರೆಸಿಗರನ್ನು ಸಮಾಧಾನ ಪಡಿಸುವಲ್ಲಿ ಹಿರಿಯ ನಾಯಕರು ಹೈರಾಣಾಗುತ್ತಿದ್ದಾರೆ. ಚುನಾವಣೆ ಮುಗಿಯುವವರೆಗೂ ಯಾವುದೇ ಹೇಳಿಕೆ ನೀಡಿ ಟೀಕಿಸದಂತೆ ಪದೇ ಪದೇ ಎಚ್ಚರಿಸಲಾಗುತ್ತಿದೆ.

ಈ ಹಂತದಲ್ಲಿ ಸಣಪುಟ್ಟ ಅಪಪ್ರಚಾರಗಳು ಕೂಡ ಭಾರೀ ಪರಿಣಾಮ ಬೀರಲಿದೆ. ಹೀಗಾಗಿ ಯಾರನ್ನು ದುಡುಕಿನ ಹೇಳಿಕೆಗಳನ್ನು ನೀಡಬಾರದು. ಪಕ್ಷವನ್ನು ಅಕಾರಕ್ಕೆ ತರುವತ್ತ ಗುರಿಯೊಂದಿಗೆ ಕೆಲಸ ಮಾಡಬೇಕು, ಚುನಾವಣೆ ಬಳಿಕ ಪಕ್ಷದಲ್ಲಿ ನಿಷ್ಠೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪರಿಗಣಿಸಿ ಅವಕಾಶ ಮಾಡಿಕೊಡಲಾಗುತ್ತದೆ.

ಅದರಲ್ಲೂ ಕಾಂಗ್ರೆಸ್ ಮೂಲದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಮತ್ತು ಹಿರಿಯ ನಾಯಕರು ಸ್ಥಳೀಯ ಮುಖಂಡರನ್ನು ಸಮಾಧಾನಪಡಿಸುತ್ತಿದ್ದಾರೆ ಎನ್ನಲಾಗಿದೆ.

ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ : ರಮೀಜ್ ರಾಜಾ

ಜೆಡಿಸ್, ಬಿಜೆಪಿಯಿಂದ ಕಾಂಗ್ರೆಸ್‍ನತ್ತ ಮುಖ ಮಾಡಿರುವ ಬಹುತೇಕ ನಾಯಕರು ಒಂದು ಕಾಲದಲ್ಲಿ ಪ್ರಬಲ ಎದುರಾಳಿಗಳಾಗಿದ್ದರು. ಕಾಂಗ್ರೆಸ್ ನಾಯಕರ ಜೊತೆ ಜಿದ್ದಾಜಿದ್ದಿನ ಸಂಘರ್ಷಮಯ ರಾಜಕೀಯ ಮಾಡಿದ್ದರು. ಇದು ವೈಯಕ್ತಿಕ ಹಗೆತನಕ್ಕೆ ಕಾರಣವಾಗಿತ್ತು. ಚುನಾವಣೆ ಎಂಬ ಕಾರಣಕ್ಕೆ ಏಕಾಏಕಿ ಎಲ್ಲವನ್ನು ಮರೆತು ಎದುರಾಳಿಗಳನ್ನು ಸ್ವಾಗತಿಸುವುದು ಸುಲಭ ಸಾಧ್ಯವಲ್ಲ ಎಂದು ಸ್ಥಳೀಯ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಕಾಂಗ್ರೆಸ್ ಗೆಲುವಿಗೆ ತ್ಯಾಗ ಮತ್ತು ಸಹನೆ ಅನಿವಾರ್ಯ ಎಂಬ ಹಿತವಚನಗಳು ಉನ್ನತಸ್ತರದ ನಾಯಕರುಗಳಿಂದ ಕೇಳಿಬರುತ್ತಿದೆ. ಹೀಗಾಗಿ ಮುಂದಿನ ಚುನಾವಣೆ ವೇಳೆಗೆ ವಲಸಿಗ ಮತ್ತು ಮೂಲ ನಿವಾಸಿ ನಾಯಕರ ನಡುವೆ ಕಾಂಗ್ರೆಸ್‍ನಲ್ಲೇ ಜಿದ್ದಾಜಿದ್ದ ಮುನ್ಸೂಚನೆ ಇದೆ.

Congress, leaders, Assembly elections, BJP, JDS, MLAs,

Articles You Might Like

Share This Article