ಕಾಂಗ್ರೆಸ್‍ನ ಪ್ರಭಾವಿ ನಾಯಕರ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ ಬಿಜೆಪಿ

Social Share

ಬೆಂಗಳೂರು,ನ.15- ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಂಗ್ರೆಸ್‍ನ 15 ಪ್ರಭಾವಿ ನಾಯಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಬಿಜೆಪಿ ಟಾರ್ಗೆಟ್ ಮಾಡಿದೆ.

ಈ ಕ್ಷೇತ್ರಗಳಿಗೆ ಸಮಬಲ ಸ್ಪರ್ಧೆ ನೀಡುವ ಅಭ್ಯರ್ಥಿಗಳು ಸಂಪನ್ಮೂಲ, ಚುನಾವಣಾ ತಂತ್ರ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಚಾರ ನಡೆಸುವ ಮೂಲಕ ಕ್ಷೇತ್ರದಲ್ಲೇ ಕಟ್ಟಿ ಹಾಕುವ ರಣತಂತ್ರವನ್ನು ಬಿಜೆಪಿ ಹೆಣೆದಿದೆ.

ಈ ಕ್ಷೇತ್ರಗಳಲ್ಲಿ ಖುದ್ದು ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಪ್ರಚಾರ ನಡೆಸಲಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ರ್ಪಧಿಸಬಹುದಾದ ಕೋಲಾರ, ವರುಣಾ, ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಪ್ರತಿನಿಧಿಸುವ ಶ್ರೀನಿವಾಸಪುರ, ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ,
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣ ಕ್ಷೇತ್ರಗಳನ್ನು ಕೂಡ ಬಿಜೆಪಿಯ ಹಿಟ್‍ಲಿಸ್ಟ್‍ನಲ್ಲಿದೆ.

ಚೀನಾದೊಂದಿಗೆ ಯಾವುದೇ ಶೀತಲ ಸಮರ ಇಲ್ಲ : ಬಿಡೆನ್

ಇದೇ ರೀತಿ ಕಾಂಗ್ರೆಸ್ ನಾಯಕರಾದ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಪ್ರತಿನಿಧಿಸುವ ಉಲ್ಲಾಳ, ಪ್ರಿಯಾಂಕ ಖರ್ಗೆ ಅವರ ಚಿತ್ತಾಪುರ, ಕೃಷ್ಣಭೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ, ಆರ್.ವಿ.ದೇಶಪಾಂಡೆ ಅವರ ಸ್ವಕ್ಷೇತ್ರ ಹಳಿಯಾಳ ಸೇರಿದಂತೆ 15 ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ಸೋಲಲಿ ಇಲ್ಲವೇ ಗೆಲ್ಲಲಿ ಈ ಕ್ಷೇತ್ರಗಳಿಗೆ ಅನ್ಯಪಕ್ಷಗಳ ಪ್ರಭಾವಿ ನಾಯಕರನ್ನು ಕರೆತಂದು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ನಾಯಕರು ವಿಶೇಷ ಗಮನಹರಿಸಿದ್ದಾರೆ.

ಈ 15 ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡರೆ ರಾಜ್ಯಾದ್ಯಂತ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರವಾಸ ಮಾಡಲು ಕಷ್ಟಕರವಾಗುತ್ತದೆ. ಅವರವರ ಕ್ಷೇತ್ರಗಳಲ್ಲೇ ಕಟ್ಟಿ ಹಾಕಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ರಷ್ಯಾ-ಉಕ್ರೇನ್ ಸಂಘರ್ಷ ಕುರಿತು ಜಿ-20 ಸಮ್ಮೇಳನದಲ್ಲಿ ಮೋದಿ ಪ್ರಸ್ತಾಪ

2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು. ಆಗ ಬಿಜೆಪಿ ಹಾಲಿ ಸಚಿವ ರಾಮುಲು ಅವರನ್ನು ಬಾದಾಮಿಯಿಂದ ಕಣಕ್ಕಿಳಿಸಿತ್ತು.
ಕೊನೆ ಕ್ಷಣದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ರಾಮುಲು ಮತ್ತು ಬಿ.ಎಸ್.ಯಡಿಯೂರಪ್ಪ ಜಂಟಿ ಪ್ರಚಾರ ರದ್ದಾಯಿತು.

ಅದೊಂದು ಬಾರಿ ಪ್ರಚಾರ ನಡೆಸಿದ್ದರೆ ಫಲಿತಾಂಶ ಏನೂ ಬೇಕಾದರೂ ಆಗುತ್ತಿತ್ತು ಎಂದು ಬಿಜೆಪಿಯಲ್ಲಿ ಈಗಲೂ ಕೇಳಿಬರುತ್ತಿದೆ.

ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ

ಹೀಗಾಗಿ ಪ್ರಮುಖ ನಾಯಕರನ್ನೇ ಗುರಿಯಾಗಿಟ್ಟುಕೊಂಡಿರುವ ಬಿಜೆಪಿ ಕ್ಷೇತ್ರ ಬಿಟ್ಟು ಕದಲದಂತೆ ತಂತ್ರವನ್ನು ರೂಪಿಸಿದೆ. ಇದು ಎಷ್ಟರ ಮಟ್ಟಿಗೆ ಕೈ ಹಿಡಿಯಲಿದೆ ಎಂಬುದು ಫಲಿತಾಂಶದ ನಂತರವೇ ಗೊತ್ತಾಗಲಿದೆ.

Articles You Might Like

Share This Article