ಕಾಂಗ್ರೆಸ್‌ಗೆ ಹೊಡೆತ ಕೊಡುವುದೇ ನಾಯಕರ ಸ್ವಯಂ ವೈಭವೀಕರಣ ಪೈಪೋಟಿ

Social Share

ಬೆಂಗಳೂರು,ಜ.22- ಎಷ್ಟೇ ಪ್ರಯತ್ನ ಪಟ್ಟರು ಕಾಂಗ್ರೆಸ್‍ನಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣ ಮಟ್ಟ ಹಾಕಲು ಸಾಧ್ಯವಾಗದೆ ಇರುವುದು, ಪ್ರಮುಖ ನಾಯಕರ ನಡುವೆ ಪರಸ್ಪರ ವೈಮನಸ್ಸು ಹೆಚ್ಚಲು ಕಾರಣವಾಗುತ್ತಿದೆ.

ಚುನಾವಣಾ ಕಾಲದಲ್ಲಿ ಇದು ಪಕ್ಷಕ್ಕೆ ಮುಳುವಾಗುವ ಆತಂಕವೂ ಹೆಚ್ಚಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಯಾತ್ರೆ ಮೂಲಕ ವೇದಿಕೆಯಲ್ಲಿ ಎಷ್ಟೇ ಒಗ್ಗಟ್ಟಿನ ಮಂತ್ರ ಜಪಿಸಿದರು ಒಳಗೊಳಗೆ ಅಪತ್ಯ ಸಾಧಿಸುವ ವಿಷಯದಲ್ಲಿ ಪೈಪೋಟಿ ನಡೆದೆ ಇದೆ.

ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಸಾಧನೆಗಳನ್ನು ಹೆಚ್ಚಾಗಿ ಪ್ರಸ್ತಾಪಿಸುವ ಮೂಲಕ ತಾವು ಮಾಡಿದ ಸಾಧನೆಗಳನ್ನೆ ಹೆಚ್ಚಾಗಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅತ್ತ ಡಿ.ಕೆ.ಶಿವಕುಮಾರ್ ತಾವು ಅಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆಯಲ್ಲಿ ನಡೆಸಿದ ಚಟುವಟಿಕೆಗಳ ಸಾಕ್ಷ್ಯ ಚಿತ್ರಗಳ ಪ್ರದರ್ಶನದ ಮೂಲಕ ಸ್ವಯಂ ವೈಭವೀಕರಣಕ್ಕೆ ಪ್ರಯತ್ನಿಸುತ್ತಾರೆ.

ಅಮೆರಿಕ ಅಧ್ಯಕ್ಷ ಬಿಡೆನ್ ಮನೆಯಲ್ಲಿ ಎಫ್‍ಬಿಐ ಶೋಧ ದಾಖಲೆಗಳ ವಶ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹಾಗೂ ಅನಂತರದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಾಧನೆಗಳನ್ನು ಪಕ್ಷದ ವೇದಿಕೆಗಳಲ್ಲಿ ಬಿಂಬಿಸಲು ಹೆಚ್ಚು ಅವಕಾಶ ಸಿಗುತ್ತಿಲ್ಲ. ಅದಕ್ಕಾಗಿ ಸಿದ್ದರಾಮಯ್ಯ ಬಣ ಪದೇ ಪದೇ ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸಾಧನೆಗಳ ವೈಭವೀಕರಣಕ್ಕೆ ಯತ್ನಿಸುತ್ತಿದೆ.

ಹಾಗೊಮ್ಮೆ, ಹೀಗೊಮ್ಮೆ ಪಕ್ಷದ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯ ಯೋಜನೆಗಳ ಹಾಡುಗಳು ಅಥವಾ ಪ್ರಾತ್ಯಕ್ಷಿಕೆಗಳ ಪ್ರದರ್ಶನಕ್ಕೆ ಸಿದ್ದರಾಮಯ್ಯ ಗುಂಪು ಯತ್ನಿಸಿದರೂ ಅದಕ್ಕೆ ಅವಕಾಶ ಸಿಗುವುದಿಲ್ಲ.

ಡಿ.ಕೆ.ಶಿವಕುಮಾರ್ ಉತ್ತಮ ಸಂಘಟಕರು ಎಂದು ಉಲ್ಲೇಖಿಸುವುದನ್ನು ಬಿಟ್ಟು ಸಿದ್ದರಾಮಯ್ಯ ಅವರು, ಕಳೆದ ಎರಡು ವರ್ಷದಲ್ಲಿ ಪಕ್ಷ ಸಂಘಟನೆಯಲ್ಲಾದ ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಈ ಮೂಲ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ಉಪೇಕ್ಷಿಸುವ ಜಾಣ ಪ್ರಯತ್ನ ನಡೆದಿದೆ. ಒಂದೇ ವೇದಿಕೆಯಲ್ಲಿದ್ದರೂ ಉಭಯ ನಾಯಕರು ತಮ್ಮ ವೈಭವೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾ, ನಾಯಕತ್ವದ ಅಪತ್ಯ ಸಾಸಲು ಯತ್ನಿಸುತ್ತಿದ್ದಾರೆ.

ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ

ಚುನಾವಣೆ ದೃಷ್ಟಿಯಿಂದ ಒಳ್ಳೆಯ ಕಾರ್ಯಕ್ರಮಗಳು ಕಾಂಗ್ರೆಸ್‍ನ ಸಾಧನೆ ಎಂದು ಏಕಮೇವಾವ ಅಭಿಪ್ರಾಯವಾಗಿ ಬಿಂಬಿಸುವ ಪ್ರಯತ್ನವಾಗಿಲ್ಲ. ಇನ್ನೂ ಸಾರ್ವಜನಿಕವಾಗಿ ಸಿದ್ದು ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ವಿಷಯವನ್ನು ಪ್ರಸ್ತಾಪಿಸಿ ಪಕ್ಷದಲ್ಲಿ ಒಡಕಿನ ಧ್ವನಿಗೆ ಕಾರಣರಾಗಿದ್ದಾರೆ. ಇದಕ್ಕೆ ಸರಿಯಾಗಿ ಟಾಂಗ್ ನೀಡಲು ಡಿ.ಕೆ.ಶಿವಕುಮಾರ್ ಬಣ ಟಿಕೆಟ್ ಹಂಚಿಕೆಯಲ್ಲಿ ತಮ್ಮದೇ ಪಾರುಪತ್ಯ ಸ್ಥಾಪಿಸುವ ರಣತಂತ್ರ ರೂಪಿಸಿದೆ.

ಮುಂದಿನ ದಿನಗಳಲ್ಲಿ ಇದು ಟಿಕೆಟ್ ಹಂಚಿಕೆಯಲ್ಲಿ ಭಾರೀ ಗೊಂದಲ ಮತ್ತು ಗದ್ದಲ ಮಾಡಲಿದೆ ಎಂಬ ಅಂದಾಜುಗಳಿವೆ. ಡಿ.ಕೆ.ಶಿವಕುಮಾರ್ ಅವರು ಪ್ರತಿಯೊಂದು ನಿರ್ಧಾರವನ್ನು ಎಲ್ಲರೊಂದಿಗೆ ಚರ್ಚಿಸಿದ ಬಳಿಕವೇ ಸಾಮೂಹಿಕ ನಾಯಕತ್ವದಲ್ಲಿ ತೆಗೆದುಕೊಳ್ಳುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ವೇದಿಕೆಯಲ್ಲಿ ಪ್ರಸಾರವಾಗುವ ಸಾಕ್ಷ್ಯ ಚಿತ್ರಗಳು ಮಾತ್ರ ಡಿ.ಕೆ.ಶಿವಕುಮಾರ ಅವರಬ್ಬರನ್ನು ಮಾತ್ರವೇ ಬಿಂಬಿಸುತ್ತಿವೆ.

ಬಿಜೆಪಿ ಆಡಳಿತದ ವೈಪಲ್ಯಗಳು, ಆಡಳಿತ ವಿರೋ ಅಲೆಯಿಂದಾಗಿ ಈ ಬಾರಿ ಕಾಂಗ್ರೆಸ್‍ಗೆ ಸುಲಭವಾಗಿ ಅಕಾರ ದಕ್ಕಲಿದೆ ಎಂಬ ನಿರೀಕ್ಷೆಯಲ್ಲಿ ಕೈ ನಾಯಕರಿದ್ದಾರೆ. ಈ ಹಂತದಲ್ಲಿ ಒಡಕಿನ ಧ್ವನಿಗಳು, ಪರಸ್ಪರ ಕಾಲೆಳೆಯುವ ಆಟಗಳು ಪಕ್ಷಕ್ಕೆ ಮುಳುವಾಗುತ್ತಿವೆ ಎಂದು ಹೇಳಲಾಗಿದೆ.

Congress, leaders, election, KPCC President, DK Shivakumar, Siddaramaiah,

Articles You Might Like

Share This Article