ಬೆಂಗಳೂರು, ಮಾ.17- ಸಮಾಜಘಾತುಕ ಶಕ್ತಿಗಳು ಕಾಂಗ್ರೆಸ್ ಜತೆ ಸಂಬಂಧ ಹೊಂದಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಡಿಪಿಐ ಚುನಾವಣೆಯಲ್ಲಿ ಸ್ರ್ಪಧಿಸುವ ಮೂಲಕ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದು ಈಗ ಸಾಬೀತಾಗಿದೆ. ಇದರಿಂದ ಕಾಂಗ್ರೆಸ್‍ನ ನಿಜ ಮುಖವಾಡ ಬಯಲಿಗೆ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಅನೇಕ ಸುಳ್ಳುಗಳನ್ನು ಹೇಳಿ ಅದನ್ನು ನಿಜ ಮಾಡಲು ಹೊರಟಿರುವ ಕಾಂಗ್ರೆಸ್‍ನ ಕುತಂತ್ರ ಜನರಿಗೆ ತಿಳಿದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಅದೃಷ್ಟದ ಕಲ್ಲೆಂದು ನಂಬಿಸಿ ಸಾರ್ವಜನಿಕರಿಗೆ ವಂಚನೆ : ಇಬ್ಬರು ಸಿಸಿಬಿ ಬಲೆಗೆ
ವಿದೇಶದಲ್ಲಿ ಭಾರತದ ಸಂವಿಧಾನದ ಬಗ್ಗೆ ಮಾತನಾಡಿ ಅಪಚಾರವೆಸಗಿರುವ ರಾಹುಲ್ ಗಾಂಧಿ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪತ್ರಿಕಾಗೋಷ್ಠಿ ವೇಳೆಯೂ ಅದು ಗೊತ್ತಾಗಿದೆ. ಕಾಂಗ್ರೆಸ್‍ಗೆ ಕೇವಲ ಅಧಿಕಾರ ಬೇಕೆ ಹೊರತು ಜನಕಲ್ಯಾಣ ಅಗತ್ಯವಿಲ್ಲ.
ಇದಕ್ಕಾಗಿ ಹಲವಾರು ಆರೋಪ ಮಾಡಿ ಸಮಾಜದಲ್ಲಿ ಅಶಾಂತಿ, ಒಡಕು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.