ಮತ್ತೊಂದು ವಿವಾದ : `ಹಿಂದೂ’ ಶಬ್ದದ ಸತ್ಯಶೋಧನೆಗೆ ಮುಂದಾದ ಸತೀಶ್

Social Share

ಬೆಂಗಳೂರು, ನ.10- ಪಕ್ಷಕ್ಕೆ ಹಾನಿಯಾಗಬಾರದು ಎಂಬ ಕಾರಣಕ್ಕೆ ನಾನು ನನ್ನ ಹೇಳಿಕೆಯನ್ನು ಹಿಂಪಡೆದಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ನನ್ನ ಮಾತುಗಳನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತೇನೆ. ಇದಕ್ಕೆ ಸಂಬಂಧ ಪಟ್ಟಂತೆ ಇತಿಹಾಸಕಾರರನ್ನು ಭೇಟಿಯಾಗುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ್ದೇನೆ. ಅದು ಇಷ್ಟು ದೊಡ್ಡ ವಿವಾದವಾಗಲಿದೆ ಎಂದು ಭಾವಿಸಿರಲಿಲ್ಲ. ಆದರೂ ಆಗಿ ಹೋಗಿದೆ.

ಸತ್ಯಾಂಶ ಬಿಟ್ಟು ಏನೋನೋ ತಿರುಚಿ ವರದಿಯಾಗಿದೆ. ನಾನೊಬ್ಬನ್ನೇ ಆಗಿದ್ದರೆ ಕ್ಷಮೆ ಕೇಳುತ್ತಿರಲಿಲ್ಲ. ಆದರೆ ನಾನು ಕಾಂಗ್ರೆಸ್ ಮುಖಂಡನಾಗಿದ್ದೇನೆ. ನನ್ನ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆಯಾಗಬಾರದು ಅದಕ್ಕಾಗಿ ವಿಷಾದ ವ್ಯಕ್ತ ಪಡಿಸಿ, ಹೇಳಿಕೆ ಹಿಂಪಡೆದಿದ್ದೇನೆ ಎಂದರು.

ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅರೆಸ್ಟ್

ಆದರೆ ವಿಷಯ ಇಲ್ಲಿಗೆ ಮುಗಿದು ಹೋಗುವುದಿಲ್ಲ. ನನ್ನ ಬಗ್ಗೆ ತುಂಬಾ ಜನ ಮಾತನಾಡಿದ್ದಾರೆ. ನನಗೂ ನನ್ನ ಮಾತುಗಳನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಅಧ್ಯಯನ ನಡೆಸುತ್ತೇನೆ. ಸತ್ಯಾಂಶವನ್ನು ನಮ್ಮ ಪಕ್ಷದ ಮುಖಂಡರು ಸೇರಿದಂತೆ, ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತೇನೆ.

ನಾನು ನನ್ನ ಸಿದ್ಧಾಂತದಿಂದ ಹಿಂದೆ ಸರಿದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರಿಗೂ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡುತ್ತೇನೆ. ಸದ್ಯಕ್ಕೆ ಅದರ ಅಗತ್ಯ ಇಲ್ಲ ಎಂಬ ಕಾರಣಕ್ಕೆ ಹೇಳಿಕೆಯನ್ನು ಹಿಂಪಡೆದಿದ್ದೇನೆ ಎಂದು ಹೇಳಿದರು.

ನಾನು ದುಡುಕಿನಿಂದ ಮಾತನಾಡಿಲ್ಲ, ಅಧ್ಯಯನ ಮಾಡಿಯೇ ಹೇಳಿದ್ದೇನೆ. ಆದರೂ ಮುಂದೆ ಇತಿಹಾಸಕಾರರು ಸೇರಿದಂತೆ ತಜ್ಞರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಸತ್ಯಾಂಶವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಿಸುತ್ತೇನೆ ಎಂದರು.

ಬೆಂಗಳೂರಿಗರೇ ನಾಳೆ ರಸ್ತೆಗಿಳಿಯುವ ಮುನ್ನ ಇಲ್ಲಿ ಗಮನಿಸಿ

ಪ್ರಸ್ತುತ ಸಂದರ್ಭದಲ್ಲಿ ನನ್ನ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ರಾಷ್ಟ್ರ ಮತ್ತು ರಾಜ್ಯದಲ್ಲಿ ಸಾಕಷ್ಟು ಒತ್ತಡವಿತ್ತು. ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದೇನೆ. ನನ್ನ ಪಕ್ಷದ ಹಿರಿಯ ನಾಯಕರೊಂದಿಗೆ ನಾನು ಚರ್ಚೆ ಮಾಡಿದ್ದೇನೆ. ಪಕ್ಷ ದೊಡ್ಡದಿದೆ, ನನಗೆ ಪಕ್ಷ ಮುಖ್ಯ ಎಂದರು.

ಪಕ್ಷ ನನ್ನ ಕೈ ಬಿಡೊಲ್ಲ. ಮುಖಂಡರು ನನ್ನ ಹಿಂದೆ ಇದ್ದಾರೆ. ನನ್ನ ಹೇಳಿಕೆ ಈಗಾಗಲೇ ಸಾಕಷ್ಟು ವಿವಾದ ಆಗಿದೆ, ನನ್ನನ್ನು ಮತ್ತು ಪಕ್ಷವನ್ನು ಹಿಂದು ವಿರೋ ಎಂದು ಬಿಂಬಿಸಲಾಗಿದೆ. ಎಲ್ಲಿಂದ ಶುರುವಾಯಿತು, ಯಾರಿಂದ ಶುರುವಾಯಿತು ಎಂದು ಗೋತ್ತಿದೆ. ಮುಂದಿನ ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳು ಇದನ್ನು ಮತ್ತಷ್ಟು ಕೆಣಕುತ್ತವೆ ಎಂಬುದು ನನಗೆ ಗೋತ್ತಿದೆ. ಇಷ್ಟಕ್ಕೆ ಬಿಟ್ಟರೆ ಅದು ಪಕ್ಷಕ್ಕೆ ಮತ್ತಷ್ಟು ಹಾನಿಯಾಗಲಿದೆ. ಅದಕ್ಕಾಗಿ ಸತ್ಯವನ್ನು ಸಾಬೀತು ಪಡಿಸುವ ಅಗತ್ಯ ಇದೆ. ಅದನ್ನು ನಮ್ಮ ಕಾರ್ಯಕರ್ತರಿಗೆ ಸ್ಪಷ್ಟ ಮಾಹಿತಿ ನೀಡುತ್ತೇನೆ ಎಂದರು.

ಇಂಜಿನಿಯರಿಂಗ್ ಕೋರ್ಸ್‍ಗಳಲ್ಲಿ ವಾಸ್ತುಶಿಲ್ಪ ಪಠ್ಯ ಬೋಧನೆ

ನನ್ನ ಹೆಸರು ಕೆಡಿಸಿ, ಪಕ್ಷಕ್ಕೆ ಹಾನಿ ಮಾಡಲಾಗಿದೆ. ಆದರೆ ಸತ್ಯಾಂಶ ಜನರಿಗೆ ತಿಳಿಯಲೇಬೇಕು. ಅದಕ್ಕಾಗಿ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ನಾನು ಒತ್ತಡ ಹೇರುತ್ತೇನೆ, ಪಕ್ಷದ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಶಾಸಕಿ ಲಕ್ಷ್ಮೀ ಹೆಬಾಳ್ಕರ್, ಹಿರಿಯ ನಾಯಕರಾದ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. ಎಲ್ಲರೂ ಈ ವಿಷಯವನ್ನು ಇಲ್ಲಿಗೆ ಕೈ ಬಿಡಿ ಎಂದು ಮನವಿ ಮಾಡಿದರು.

Articles You Might Like

Share This Article