ಬೆಂಗಳೂರು,ಫೆ.28- ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿರುವ ಬಿಜೆಪಿ, ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿ ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರಚಾರ ನಡೆಸುತ್ತಿದೆ. ಅದೇ ರೀತಿ ಕಾಂಗ್ರೆಸ್ ಕೂಡ ರಾಷ್ಟ್ರೀಯ ನಾಯಕರ ಮೊರೆಹೋಗಲು ಮುಂದಾಗಿದೆ.
ಚುನಾವಣೆಗೂ ಮುನ್ನವೇ ಪ್ರಿಯಾಂಕಗಾಂಧಿ ಅವರು ರಾಜ್ಯಕ್ಕೆ ಹೆಚ್ಚು ಬಾರಿ ಆಗಮಿಸಬೇಕು. ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಛತ್ತೀಸ್‍ಗಢದ ನವರಾಯಪುರದಲ್ಲಿ ನಡೆದ ಸಮಾವೇಶದಲ್ಲಿ ಹೈಕಮಾಂಡ್ ನಾಯಕರಿಗೆ ಕಾಂಗ್ರೆಸ್ ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಿಎಸ್‌ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ..? : ಡಿಕೆಶಿ
ಈಗಾಗಲೇ ಪ್ರತಿ ಜಿಲ್ಲೆಯಲ್ಲೂ ಪ್ರಜಾಧ್ವನಿಯಾತ್ರೆಗಳು ಸಂಚಲನ ಮೂಡಿಸಿವೆ. ಸಿದ್ದರಾಮಯ್ಯ ಮತ್ತ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ಪ್ರವಾಸ ನಡೆಸುತ್ತಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ನಾಯಕರೂ ಆಗಮಿಸಿದರೆ ಪಕ್ಷದ ಬಲ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಕರ್ನಾಟಕದ ಪ್ರಚಾರ ಕಾರ್ಯಕ್ರಮಗಳಿಗೆ ಸಮಯ ಮೀಸಲಿಡುವಂತೆ ಮನವಿ ಸಲ್ಲಿಸಲಾಗಿದೆ.
ಮುಳ್ಳುಹಂದಿ ಶಿಕಾರಿಗೆ ಹೋದಾಗ ಸುರಂಗದಲ್ಲಿ ಸಿಲುಕು ಇಬ್ಬರ ಸಾವು
ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದವೇ ಆಗಿರುವುದರಿಂದ ಚುನಾವಣೆ ಘೋಷಣೆಗೂ ಮುನ್ನ ಅವರು ರಾಜ್ಯದಲ್ಲಿ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅವರ ಜತೆಗೆ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕ ಗಾಂಧಿ ಅವರು ನಿಯಮಿತವಾಗಿ ರಾಜ್ಯಕ್ಕೆ ಭೇಟಿ ನೀಡಬೇಕು.
ಪ್ರತಿ ವಿಭಾಗವಾರು ಮಟ್ಟದ ಸಮೇಶಗಳಲ್ಲಿ ರಾಷ್ಟ್ರೀಯ ನಾಯಕರು ತೊಡಗಿಸಿಕೊಳ್ಳುವುದರಿಂದ ಪಕ್ಷದ ಬಲ ಹೆಚ್ಚಾಗಲಿದೆ. ಅದೇ ರೀತಿ ನೆರೆ ರಾಜ್ಯಗಳ ರಾಜಕೀಯದಲ್ಲಿ ಸಕ್ರಿಯವಾಗಿರುವ ನಟರಾದ ಆಂಧ್ರಪ್ರದೇಶದ ಚಿರಂಜೀವಿ, ತಮಿಳುನಾಡಿನ ಕಮಲಹಾಸನ್ ಸೇರಿದಂತೆ ಪ್ರಮುಖರನ್ನು ರಾಜ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಗಡಿ ಭಾಗಗಳಲ್ಲಿ ಇವರ ಪ್ರಚಾರಗಳಿಂದಾಗಿ ಪಕ್ಷಕ್ಕೆ ಲಾಭವಾಗಲಿವೆ ಎಂದು ಚರ್ಚೆ ನಡೆಸಲಾಗಿದೆ.
3ನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಚಾಲನೆ
ಬಿಜೆಪಿ ಸ್ಯಾಂಡಲ್‍ವುಡ್ ನಟರಾದ ಯಶ್, ರಿಷಬ್‍ಶೆಟ್ಟಿ ಸೇರಿದಂತೆ ಅನೇಕರ ಜತೆ ಈಗಾಗಲೇ ಸಭೆಗಳನ್ನು ನಡೆಸಿ ಚುನಾವಣಾ ಕಾಲದಲ್ಲಿ ಅವರನ್ನು ಪರೋಕ್ಷವಾಗಿ ಬಳಸಿಕೊಳ್ಳುವ ಕಾರ್ಯತಂತ್ರಗಳು ನಡೆದಿವೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಿದ್ದಾಂತವನ್ನು ಬೆಂಬಲಿಸುವ ಹಾಗೂ ಪಕ್ಷದಲ್ಲೇ ಇರುವ ಸ್ಟಾರ್ ನಟರ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲು ತಯಾರಿಗಳು ನಡೆಯುತ್ತಿವೆ. ಪ್ರಿಯಾಂಕ ಗಾಂ ಅವರ ಕಾರ್ಯಕ್ರಮಕ್ಕೆ ವ್ಯಾಪಕ ಬೇಡಿಕೆಗಳು ಕಂಡು ಬಂದಿವೆ.
ಈಗಾಗಲೇ ರಾಜ್ಯಕ್ಕೆ ಒಮ್ಮೆ ಭೇಟಿ ನೀಡಿರುವ ಅವರು ಕನಿಷ್ಠ ಮೂರ್ನಾಲ್ಕು ಬಾರಿಯಾದರೂ ಆಗಮಿಸಬೇಕು. ರೋಡ್ ಶೋ, ಬಹಿರಂಗ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಬೇಕೆಂದು ಮನವಿಸಲ್ಲಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ರೂಪಿಸಿದ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಾಗಿ ಗಾಂ ಕುಟುಂಬ ಭರವಸೆ ನೀಡಿದೆ.
Congress, national, leaders, campaigning, assembly, election,