ಚುನಾವಣಾ ವೆಚ್ಚಕ್ಕಾಗಿ ಸರ್ಕಾರದಿಂದ ಗುತ್ತಿಗೆ ಡೀಲ್ : ಕಾಂಗ್ರೆಸ್ ಹೊಸ ಬಾಂಬ್

Social Share

ಬೆಂಗಳೂರು,ಫೆ.15- ನಿರ್ಗಮಿತ ಸರ್ಕಾರ ಚುನಾವಣೆ ವೆಚ್ಚಕ್ಕಾಗಿ ಹಣ ಸಂಗ್ರಹಿಸಲು ಅಕ್ರಮವಾಗಿ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದ್ದು, 10 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನೂ ಲೂಟಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ನಮ್ಮ ಸರ್ಕಾರ ತನಿಖೆಗೆ ಒಳಪಡಿಸಲಿದೆ ಎಂದು ಎಚ್ಚರಿಸಿದ್ದಾರೆ.

ಸದಾಶಿವನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇನ್ನೂ ಒಂದು ತಿಂಗಳು ಮಾತ್ರ ಇರಲಿದೆ. ಬಹುತೇಕ ಈ ತಿಂಗಳ ಅಂತ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಅದಕ್ಕೂ ಮೊದಲು ಚುನಾವಣೆ ವೆಚ್ಚಕ್ಕೆ ಹಣ ಸಂಗ್ರಹಿಸಲು ಸರ್ಕಾರದ ಬೃಹತ್ ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಸಣ್ಣ ನೀರಾವರಿ, ನಗರಾಭಿವೃದ್ಧಿ ಸೇರಿ ಎಲ್ಲಾ ಇಲಾಖೆಗಳಲ್ಲೂ ಅಕ್ರಮ ಗುತ್ತಿಗೆ ನೀಡುವ ಪರಿಪಾಠ ಆರಂಭವಾಗಿದೆ ಎಂದು ಆರೋಪಿಸಿದರು.

500 ಕೋಟಿ ವೆಚ್ಚದ ಕಾಮಗಾರಿಯನ್ನು ಒಂದು ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಿದ್ದಾರೆ. ಪ್ರತಿ ಟೆಂಡರ್ ಬಗ್ಗೆಯೂ ತಮ್ಮ ಬಳಿ ಮಾಹಿತಿ ಇದೆ. ಎಲ್ಲಾ ಟೆಂಡರ್ ಎಸ್.ಆರ್.ದರವನ್ನು ಶೇ.100ರಷ್ಟು ಹೆಚ್ಚು ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿದೆ.

ಅವುಗಳನ್ನು ಶಾಸಕರು, ಸಚಿವರಿಗೆ ಹಂಚಲಾಗಿದೆ. ಅವರು ಟೆಂಡರ್‍ಗಳನ್ನು ಬೀದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಏಳು ದಿನದಲ್ಲಿ ಗುತ್ತಿಗೆ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲು ಆತುರಾತುರವಾಗಿ ಕ್ರಮ ಕೈಗೊಳ್ಳಲಾಗಿದೆ. ಸಚಿವ ಸ್ಥಾನ ಸಿಗದವರಿಗೆ ಹೆಚ್ಚು ಟೆಂಡರ್ ಗಳನ್ನು ಕೊಡುತ್ತಿದ್ದಾರೆ. ಹಣ ಸಂಗ್ರಹ ಮಾಡಿ ಚುನಾವಣೆಯಲ್ಲಿ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಳೆ ಬಿಲ್ ಬಾಕಿ ಉಳಿದುಕೊಂಡಿದೆ. ಯಾರು ಕಮಿಷನ್ ಕೊಡುತ್ತಾರೋ ಅವರಿಗೆ ಬಾಕಿ ಹಣ ಬಿಡುಗಡೆ ಮಾಡುತ್ತಿದ್ದಾರೆ. ಕೆಆರ್‍ಡಿಎಲ್‍ನಲ್ಲಿ ಎಲ್ಲಾ ನಡೆಯುತ್ತಿದೆ. ಜೇಷ್ಠತೆ ಇರುವರಿಗೆ ಬಾಕಿ ಬಿಡುಗಡೆ ಮಾಡುತ್ತಿಲ್ಲ. ಬೆಂಗಳೂgರಿನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಭೂ ಸ್ವಾೀನವೇ ಮುಗಿದಿಲ್ಲ. ಆದರೂ 3500 ಕೋಟಿ ರೂಪಾಯಿ ಟೆಂಡರ್ ಕರೆದಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಪಕ್ಷದ ಶಾಸಕರಲ್ಲೇ ಕಮಿಷನ್ ಹಂಚಿಕೆಯಲ್ಲಿ ಜಗಳವಾಗಿ, ಪತ್ರ ಬರೆದು ಮಾಹಿತಿ ಹೊರ ಹಾಕುತ್ತಿದ್ದಾರೆ. ನಮಗೂ ಸರ್ಕಾರ ನಡೆಸಿ ಅನುಭವ ಇದೆ. ಗುತ್ತಿಗೆದಾರರು, ಅಕಾರಿಗಳು ನಮ್ಮ ಬಳಿಯೂ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲದರ ಮೇಲೂ ನಾವು ನಿಗಾ ಇಟ್ಟಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಬಾಕಿ ಬಿಲ್ ಪಾವತಿ ವೇಳೆ ಕಮಿಷನ್ ಸಂಗ್ರಹಿಸಲು ವಕ್ತಿಯೊಬ್ಬರನ್ನು ಕೂರಿಸಲಾಗಿತ್ತು. ನಗರದ ರಸ್ತೆ ಗುಂಡಿ ಮುಚ್ಚಲು ಏಳು ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಇದೇಲ್ಲಾ ಏನು ಎಂದು ಪ್ರಶ್ನಿಸಿದರು.
45 ದಿನಗಳ ಬಳಿಕ ಕಾಂಗ್ರೆಸ್ ಪಕ್ಷದ ನಮ್ಮ ಸರ್ಕಾರ ಬರಲಿದೆ. ಒಂದು ವರ್ಷದಿಂದ ನಡೆದಿರುವ ಎಲ್ಲಾ ಟೆಂಡರ್‍ಗಳನ್ನು ತನಿಖೆ ಮಾಡಿಸುತ್ತೇವೆ. ಅಕ್ರಮದಲ್ಲಿ ಭಾಗಿಯಾಗಿರುವ ಅಕಾರಿಗಳು, ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಎಚ್ಚರಿಸಿದರು.

ಶಾಸಕರು ಗುತ್ತಿಗೆದಾರರ ಮನೆ ಬಾಗಿಲಿಗೆ ಹೋಗಿ ಕೆಲಸ ತೆಗೋ, ಕಮಿಷನ್ ಕೋಡು ಎಂದು ಒತ್ತಡ ಹಾಕುತ್ತಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ದುಡ್ಡು ಲೂಟಿ ಹೊಡೆಯಲಾಗುತ್ತಿದೆ.ಸರ್ಕಾರದ ಈ ಭ್ರಷ್ಟಚಾರ ಕೊನೆಯಾಗಬೇಕು, ಅಕಾರಿಗಳು, ಗುತ್ತಿಗೆದಾರರು ಎಚ್ಚರಿಕೆಯಿಂದ ಇರಬೇಕು, ಅಕಾರ ನಡೆಸಿದವರಿಗೆ ಮುಂದಿನ ದಿನಗಳಲ್ಲಿ ಗ್ರಹಚಾರ ಕಾದಿದೆ ಎಂದರು.
ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲೂ ಭಾರೀ ಅಕ್ರಮಗಳು ನಡೆಯುತ್ತಿವೆ.

ಕೆಎಂಎಫ್ ಸೇರಿದಂತೆ ಹಲವು ಸಂಸ್ಥೆಗಳ ನೇಮಕಾತಿಯಲ್ಲಿ, ಅದರಲ್ಲೂ ನಷ್ಟದಲ್ಲಿರುವ ನಿಗಮ-ಮಂಡಳಿಗಳಿಗೂ ನೇಮಕಾತಿ ನಡೆಸಿ 30, 40 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ ಸುಮಾರು 250 ಕೋಟಿ ರೂಪಾಯಿಗೂ ಮೀರಿದ ಭ್ರಷ್ಟಚಾರ ನಡೆದಿದೆ. ಲೋಕಾಯುಕ್ತರು ಇದನ್ನು ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಬೇಕು, ನಮ್ಮ ಸರ್ಕಾರ ಅಕಾರಕ್ಕೆ ಬಂದಾಗ ಇದನ್ನೂ ತನಿಖೆ ನಡೆಸುತ್ತೇವೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಅಧ್ಯಕ್ಷರು ಮತ್ತು ನಾನು ಇಂದು ಪ್ರಜಾಧ್ವನಿ ಯಾತ್ರೆ ಮುಂದುವರೆಸಿದ್ದು, ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಹಾಗಾಗಿ ವಿಧಾನಮಂಡಲದಲ್ಲಿ ಪ್ರಸ್ತಾಪಿಸಲು ಲಭ್ಯ ಇರುವುದಿಲ್ಲ. ಜೊತೆಗೆ ಏರೋ ಇರುವುದರಿಂದ 9.30 ಒಳಗೆ ನಾವು ಪ್ರಯಾಣಿಸುವ ಹೆಲಿಕಾಫ್ಟರ್ ಟೇಕ್ ಆಫ್ ಆಗಬೇಕಿದೆ. ಅದಕ್ಕಾಗಿ ತುರ್ತು ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯ ಸರ್ಕಾರ ಉದ್ವಾತದ್ವ ಲೂಟಿ ಹೊಡೆಯುತ್ತಿದೆ. ಅಸಮಧಾನ ಹೊಂದಿರುವ ಶಾಸಕರು, ಸಚಿವ ಸ್ಥಾನ ವಂಚಿತರನ್ನು ಸಮಾಧಾನ ಪಡಿಸಲು ಗುತ್ತಿಗೆ ಕಾಮಗಾರಿಗಳನ್ನು ಹಂಚಲಾಗುತ್ತಿದೆ. ನೀರಾವರಿ ನಿಗಮದ ಕಾಮಗಾರಿಗಳ ಟೆಂಡರ್ ನಲ್ಲಿ ಪಾರದರ್ಶಕತೆ ಇಲ್ಲ. ಎಸ್‍ಆರ್ ರೇಟ್ ಅನ್ನು ದ್ವಿಗುಣ ಮಾಡಿಕೊಳ್ಳಲಾಗಿದೆ. ಜನರ ತೆರಿಗೆ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ. ಇದನ್ನು ರಕ್ಷಣೆ ಮಾಡುವುದು ನಮ್ಮಲ್ಲರ ಜವವಾಬ್ದಾರಿ.

ಟೆಂಡರ್ ದರ ಹೆಚ್ಚಳ, ಬೇಕಾದವರಿಗೆ ಗುತ್ತಿಗೆ ನೀಡಿರುವುದು, ಹೆಚ್ಚು ಕಮಿಷನ್ ಕೊಟ್ಟವರಿಗೆ ಟೆಂಡರ್ ನೀಡುವುದು ನಡೆಯುತ್ತಿದೆ. ಬಾಕಿ ಬಿಲ್‍ಗಳು ಹೆಚ್ಚಿವೆ. ಬಾಕಿ ಪಾವತಿಯಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲೇ ಕಮಿಷನ್ ವಸೂಲಿ ಮಾಡಲಾಗುತ್ತಿದೆ. ಗುತ್ತಿಗೆದಾರರು, ಅಕಾರಿಗಳು ಅಕ್ರಮ ನಡೆಸಿದರೆ ನಾವು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಿಸುತ್ತೇವೆ.
ನ್ಯಾಯಾಲಯಕ್ಕೂ ಹೋಗುತ್ತೇವೆ. ಕ್ರಿಮಿನಲ್, ಸಿವಿಲ್ ಪ್ರಕರಣಗಳನ್ನು ದಾಖಲಿಸಲಾಗುವುದು. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈಗ ನಡೆಯುತ್ತಿರುವ ಎಲ್ಲಾ ಅಕ್ರಮಗಳನ್ನು ವಿಚಾರಣೆಗೆ ಒಳಪಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು.

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸರ್ಕಾರಕ್ಕೆ ಪತ್ರ ಬರೆದು ನೀರಾವರಿ ನಿಗಮದಲ್ಲಿ ಒಂದೇ ದಿನ ನಡೆದಿರುವ 18 ಸಾವಿರ ಕಾಮಗಾರಿಗಳ ಟೆಂಡರ್ ಅನ್ನು ರದ್ದು ಪಡಿಸಿ, ಮರು ಟೆಂಡರ್ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ಶಾಸಕರೂ ಇದೇ ರೀತಿ ಹಲವು ಪತ್ರಗಳನ್ನು ಬರೆದಿದ್ದಾರೆ.

ಚುನಾವಣೆಗಾಗಿ ಹಣ ಲೂಡಿ ಮಾಡಲಾಗುತ್ತಿದೆ. ಇತಿಹಾಸದಲ್ಲೇ ಈ ರೀತಿ ಲೂಟಿ ನೋಡಿರಲಿಲ್ಲ. ರಾಜ್ಯ ಹಾಳು ಮಾಡುತ್ತಿದ್ದಾರೆ. ತಡೆ ಗಟ್ಟದಿದ್ದರೆ ರಾಜ್ಯ ಉಳಿಯಲ್ಲ. ಅವರು ಮತ್ತೆ ಅಧಿಕಾರಕ್ಕೆ ಬರಲ್ಲ, ಲೂಟಿ ಹೊಡೆದು ಹೋಗುತ್ತಾರೆ. ಅದಕ್ಕಾಗಿ ಇದನ್ನು ನಿಲ್ಲಿಸಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಪ್ರತಿಬಾರಿಯೂ ದಾಖಲೆ ಕೇಳುತ್ತಾರೆ. ಅವರದೇ ಪಕ್ಷದ ಶಾಸಕರು ಪತ್ರ ಬರೆದಿದ್ದಾರೆ. ಇನ್ನೇನು ದಾಖಲೆ ಬೇಕು, ಈ ಮೊದಲು ಅವರದೇ ಪಕ್ಷದ ಶಾಸಕಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ವಿಶ್ವನಾಥ್ ಸೇರಿದಂತೆ ಅನೇಕರು ಹೇಳಿದ್ದಾರೆ. ಇನ್ನೇನು ಪುರಾವೆ ಬೇಕು ಎಂದರು.ನೀರಾವರಿ ನಿಗಮಗಳಿಗೆ ಮುಖ್ಯಮಂತ್ರಿಯೇ ಅಧ್ಯಕ್ಷ, ಅವರೇ ಹೇಳಿಕೊಟ್ಟು ಅಕ್ರಮ ನಡೆಸುತ್ತಿದ್ದಾರೆ ಎಂದು ದೂರಿದರು.

ರಣದೀಪ್‍ಸಿಂಗ್ ಸುರ್ಜೇವಾಲ ಮಾತನಾಡಿ, ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಲು, ಇದು ಭ್ರಷ್ಟಚಾರದ ರಾಕೇಟ್ ನಡೆಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ತನಿಖಾ ಆಯೋಗ ರಚಿಸಲಿದೆ, ಪ್ರತಿ ಗುತ್ತಿಗೆಯನ್ನು ಪರೀಲನೆ ನಡೆಸಲಾಗುವುದು, ಲೋಪಗಳು ಕಂಡು ಬಂದರೆ ಕ್ರಿಮಿನಲ್ ಮತ್ತು ಸಿವಿಲ್ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು .

#Congress, #Allegations, #BJPGovt,

Articles You Might Like

Share This Article