“ಬಿಎಸ್ವೈಗೆ ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡು, ಈಗ ಕಾಲು ಹಿಡಿಯುತ್ತಿದ್ದಾರೆ”

Social Share

ಬೆಂಗಳೂರು,ಮಾ.1- ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈ ಕಾಲು ಹಿಡಿಯುತ್ತಿರುವ ಬಿಜೆಪಿ, ಈ ಮೊದಲು ಅದೇ ಯಡಿಯೂರಪ್ಪರ ಕಣ್ಣಲ್ಲಿ ನೀರು ಹಾಕಿಸಿ, ಅಧಿಕಾರದಿಂದ ಇಳಿಸಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷರ ಮುಖ ತೋರಿಸಿದರೆ ನಾಲ್ಕು ಮತಗಳು ಸಿಗುವುದಿಲ್ಲ ಎಂಬ ವಾಸ್ತವ ಸಂಗತಿ ಅರಿವಾಗುತ್ತಲೇ ಯಡಿಯೂರಪ್ಪ ಅವರನ್ನು ಉತ್ಸವ ಮೂರ್ತಿ ಮಾಡಲು ಬಿಜೆಪಿ ಹೊರಟ್ಟಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಇದೇ ಬಿಜೆಪಿ ಹಿಂದೆ ಯಡಿಯೂರಪ್ಪ ಅವರನ್ನು ಹೇಗೆಲ್ಲಾ ನಡೆಸಿಕೊಂಡಿತ್ತು ಎಂಬುದನ್ನು ಜನತೆ ನೋಡಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲು ಸಮಯ ಕೇಳಿದರೆ, ಕನಿಷ್ಠ ಭೇಟಿಗೂ ಅವಕಾಶ ನೀಡದೆ ಹಲವಾರು ಬಾರಿ ಬರಿಕೈನಲ್ಲಿ ಕಳುಹಿಸಿ, ಅವಮಾನ ಮಾಡಲಾಗಿತ್ತು. ಈಗ ಚುನಾವಣೆ ಬರುತ್ತಿದ್ದಂತೆ ಹಾಡಿ ಹೊಗಳಲಾಗುತ್ತಿದೆ.

ಮೋದಿ ಕೈ ಬೀಸಿದರೆಂದರೆ ಜನರಿಗೆ ಬರೆ ಬಿತ್ತು ಎಂದೇ ಅರ್ಥ : ಕಾಂಗ್ರೆಸ್ ಲೇವಡಿ

ಚುನಾವಣೆ ಮುಗಿಯುತ್ತಿದ್ದಂತೆಯೇ ಯಡಿಯೂರಪ್ಪ ಎಂಬ ಉತ್ಸವ ಮೂರ್ತಿಯನ್ನ ಬಿಜೆಪಿ ವಿಸರ್ಜನೆ ಮಾಡಲಿದೆ ಎಂದು ಕಾಂಗ್ರೆಸ್ ಹೇಳಿದೆ.ಇಂದು ಯಡಿಯೂರಪ್ಪ ಅವರ ಕಾಲು ಹಿಡಿಯುತ್ತಿರುವ ಬಿಜೆಪಿ, ಹಿಂದೆ ಕಣ್ಣೀರು ಹಾಕಿಸಿ ಯಡಿಯೂರಪ್ಪನವರ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬುದನ್ನು ಉತ್ತರಿಸಲಿ.

ಅಧಿವ ಪೂರೈಸುತ್ತೇನೆ ಎನ್ನುತ್ತಿದ್ದ ಯಡಿಯೂರಪ್ಪ ಇದ್ದಕ್ಕಿದ್ದಂತೆ ದೆಹಲಿಗೆ ಹೋಗಿ ಬಂದು ರಾಜೀನಾಮೆ ಕೊಟ್ಟಿದ್ದೇಕೆ? ಕಣ್ಣೀರು ಹಾಕಿ ಗೋಳಾಡಿದ್ದೇಕೆ? ಇಂದಿಗೂ ಸಿಗದ ಉತ್ತರ ಸಿಗದ ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಲಿ ಎಂದು ಸವಾಲು ಎಸೆದಿದೆ.

#Yediyurappa, #BJP, #AssemblyElection, #Congress,

Articles You Might Like

Share This Article