ಬೆಂಗಳೂರು,ಜ.12- ಕಾಂಗ್ರೆಸ್ ನಾಯಕರು ಎಂದೂ ಕೂಡ ಸತ್ಯ ಹೇಳಿಲ್ಲ. ಒಂದು ವೇಳೆ ಅವರು ಹೇಳಿದರೆ ಆ ಪಕ್ಷಕ್ಕೆ ಅಂದೇ ಸಾವು ಬರಲಿದೆ ಎಂದು ಜನ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳಿಕೊಂಡೇ ಜನರಿಗೆ ಮೋಸ ಮಾಡಿದರು. ಜೀವನದಲ್ಲಿ ಎಂದೂ ಕೂಡ ಸತ್ಯವನ್ನು ಹೇಳಲಿಲ್ಲ. ಸತ್ಯ ಹೇಳಿದ ದಿವನೇ ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ಳಲಿದೆ ಎಂದು ಕೆಂಡ ಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ 10 ಕೆಜಿ ಅಕ್ಕಿ ಕೊಡಲಾಗುತ್ತದೆ ಎಂಬ ಘೋಷಣೆಗೆ ಕಿಡಿ ಕಾರಿದ ಕಾರಜೋಳ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 10 ಕೆಜಿ ಕೊಡುತ್ತಿದೆ. ಇವರೇನು ಮತ್ತೆ ಕೊಡುವುದು ಎಂದು ಪ್ರಶ್ನಿಸಿದರು.
ನಾವು ಪ್ರಣಾಳಿಕೆಯಲ್ಲಿ ದಲಿತರು, ಪರಿಶಿಷ್ಟ ವರ್ಗ, ಹಿಂದುಳಿದವರಿಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದು ಹೇಳಿರಲಿಲ್ಲ. ನಮ್ಮ ಸರ್ಕಾರ 75 ಯೂನಿಟ್ ವರೆಗೂ ಉಚಿತವಾಗಿ ವಿದ್ಯುತ್ ಕೊಡುತ್ತಿದೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದು ಸಮರ್ಥಿಸಿಕೊಂಡರು.
163 ಕೋಟಿ ಜಾಹೀರಾತು ಖರ್ಚು ಪಾವತಿಸಲು ಆಪ್ ಸರ್ಕಾರಕ್ಕೆ ನೋಟೀಸ್
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರೇ ಗರಿವಿ ಹಠಾವೋಗೆ ಕರೆ ನೀಡಿದ್ದರು. ಆದರೆ, ದೇಶದಲ್ಲಿ ಬಡತನ ನಿರ್ಮೂಲನೆ ಆಯಿತೆ? ಆಗಿದ್ದು ಮಾತ್ರ ಕಾಂಗ್ರೆಸ್ ಹಠಾವೋ ಎಂದು ಕಿಡಿಕಾರಿದರು. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಶೇ.75ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ. ಸುಳ್ಳಿಗೆ ಮತ್ತೊಂದು ಹೆಸರೇ ಕಾಂಗ್ರೆಸ್. 60 ವರ್ಷ ಆಡಳಿತ ನಡೆಸಿದವರು ಪಾಪದ ರಾಶಿಯನ್ನೇ ಹಾಕಿದ್ದಾರೆ.
ಅದನ್ನು ಸ್ವಚ್ಛ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು. ಬರಿ ಸುಳ್ಳು ಘೋಷಣೆಗಳನ್ನು ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ನಾವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೇ ಇರುವ ಎಷ್ಟೋ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅದರ ಬಗ್ಗೆ ಏಕೆ ಕಾಂಗ್ರೆಸ್ನವರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
ಸಂಸತ್ತಿಗಿಂತ ಸಂವಿದಾನವೇ ಸರ್ವೋಚ್ಚ; ಚಿದಂಬರಂ
ಶಾಶ್ವತವಾಗಿ ಕಾಂಗ್ರೆರಸ್ನವರು ವಿರೋಧ ಪಕ್ಷದಲ್ಲೇ ಕೂರಬೇಕಾಗುತ್ತದೆ. 2018ರಲ್ಲೂ ಇದೇ ವಾಗ್ದಾನ ನೀಡಿದರು. ಜನತೆ ಇವರನ್ನು ಎರಡಂಕಿಗೆ ಇಳಿಸಿತು ಎಂದು ವ್ಯಂಗ್ಯವಾಡಿದರು.
Congress, party, Minister, Govind Karjol,