ಕಾಂಗ್ರೆಸ್‍ನವರು ಕುರ್ಚಿಗಾಗಿ ರಾಜಕಾರಣ ಮಾಡುತ್ತಿದ್ದಾರೆ : ಸಚಿವ ನಾರಾಯಣಸ್ವಾಮಿ

Social Share

ಚಿತ್ರದುರ್ಗ,ಜ.13- ಕಾಂಗ್ರೆಸ್ ನಾಯಕರು ಕೇವಲ ಕುರ್ಚಿಗಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಾಂಗ್ರೆಸ್ ಮುಖಂಡರನ್ನು ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಒಮಿಕ್ರನ್ ಬಗ್ಗೆ ಯಾವ ರೀತಿ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಗಮನದಲ್ಲಿ ಇದೆ. ಕಾಂಗ್ರೆಸ್ ಮುಖಂಡರು ಸಮಾಜಕ್ಕಿಂತ ರಾಜಕಾರಣವೇ ಮುಖ್ಯ ಎಂದು ತಿಳಿದಿದ್ದಾರೆ.
ಅವರಿಗೆ ಕುರ್ಚಿ, ಅಧಿಕಾರವೇ ಮುಖ್ಯ. ರಾಜ್ಯದ ಹಾಗೂ ದೇಶದ ಜನರ ಆರೋಗ್ಯದ ಹಾಗೂ ಆರ್ಥಿಕತೆಯ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಬೆಂಗಳೂರಿನಲ್ಲಿ ಪ್ರತಿದಿನ ಕೋವಿಡ್ 10- 15 ಕೇಸ್‍ಗಳು ಬರುತ್ತಿವೆ. ಆದರೆ, ಕಾಂಗ್ರೆಸ್ ನಾಯಕರು ಸರ್ಕಾರ ತಪ್ಪು ಮಾಹಿತಿ ನೀಡುತ್ತಿವೆ ಎಂದು ಹೇಳುವ ಮೂಲಕ, ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ.
ಪ್ರತಿಭಟನೆ ಮಾಡಲು ಅನೇಕ ದಾರಿಗಳಿವೆ. ಸಮಯ ಇದೆ. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಯಾವುದೇ ಪ್ರತಿಭಟನೆ ಮಾಡಲು ಅವಕಾಶವಿದೆ. ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಗಂಡಸ್ತನದ ಬಗ್ಗೆ ಕಾಂಗ್ರೆಸ್ ಪಕ್ಷದವರನ್ನೇ ಕೇಳಬೇಕಾಗಿದೆ. ಈ ಬಗ್ಗೆ ಗೌರವಯುತವಾಗಿ ಚರ್ಚೆ ಮಾಡುವುದು ಸೂಕ್ತ ಎಂದು ಹೇಳಬಯಸುತ್ತೇನೆ. ಇದರಲ್ಲಿ ಗಂಡಸ್ತನದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಆಡಳಿತವನ್ನ ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕೆಂದುಪ್ರಜ್ಞಾವಂತ ಸಮಾಜ ಗಮನಿಸುತ್ತಿದೆ.
ಹಿಂದೆ ನಿಮ್ಮದೇ ಕೇಂದ್ರ ಸರ್ಕಾರ ಅಕಾರ ಇದ್ದಾಗ ತಮಿಳುನಾಡು ಸರ್ಕಾರ ನಿಮ್ಮ ಜೊತೆ ಇತ್ತು. ಕರ್ನಾಟಕದಲ್ಲೂ ನಿಮ್ಮದೇ ಸರಕಾರ ಇತ್ತು. ಅಂದು ಏಕೆ ಅನುಮತಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಜನರು ಪ್ರಶ್ನೆಕೇಳುವಂತಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Articles You Might Like

Share This Article