3ನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಚಾಲನೆ

Social Share

ಬೆಂಗಳೂರು,ಫೆ.28- ಛತ್ತೀಸ್‍ಗಡದ ಎಐಸಿಸಿ ಸರ್ವ ಸದಸ್ಯರ ಮಹಾಧಿವೇಶನ ಮುಗಿಸಿಕೊಂಡು ಮರಳಿದ ಕಾಂಗ್ರೆಸ್ ನಾಯಕರು ಪ್ರಜಾಧ್ವನಿಯ ಮೂರನೆ ಹಂತದ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಈ ಮೊದಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿಯಾಗಿ ಮೊದಲ ಹಂತದ ಯಾತ್ರೆ ನಡೆಸಿದ್ದರು. ವಿಧಾನಮಂಡಲ ಅಧಿವೇಶನಕ್ಕೆ ಮೊದಲು ಇಬ್ಬರು ನಾಯಕರು ಪ್ರತ್ಯೇಕವಾಗಿ ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಯಾತ್ರೆಗಳನ್ನು ನಡೆಸಿದರು.

ನಾಳೆಯಿಂದ ಸರ್ಕಾರಿ ಕಚೇರಿಗಳು ಬಂದ್..?

ಸಿದ್ದರಾಮಯ್ಯ ಯಾತ್ರೆಯ ನಡುವೆಯೂ ಅಲ್ಲಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಮುಂದುವರೆಸಿದ್ದರು. ಎಐಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಹೈಕಮಾಂಡ್ ಜೊತೆ ಚರ್ಚಿಸಿದ ಬಳಿಕ ರಾಜ್ಯಕ್ಕೆ ಮರಳಿರುವ ಇಬ್ಬರು ನಾಯಕರು ಮತ್ತೆ ತಮ್ಮ ತಂಡ ಕಟ್ಟಿಕೊಂಡು ಯಾತ್ರೆ ಮುಂದುವರೆಸಿದ್ದಾರೆ.

ಡಿ.ಕೆ.ಶಿವಕುಮಾರ್ ಇಂದು ಜೆಡಿಎಸ್‍ನ ಭದ್ರಕೋಟೆ ಹಾಸನಕ್ಕೆ ಲಗ್ಗೆಯಿಟ್ಟಿದ್ದಾರೆ. ಬೆಳಗ್ಗೆ ಹಾಸನದ ಆಲೂರು, ಸಕಲೇಶಪುರ, ಸಂಜೆ ಹೊಳೆನರಸಿಪುರ ಕ್ಷೇತ್ರದಲ್ಲಿ ಯಾತ್ರೆ ನಡೆಸಿದ್ದಾರೆ. ಸಿದ್ದರಾಮಯ್ಯ ಕಿತ್ತೂರು ಕರ್ನಾಟಕ ಭಾಗದ ಗದಗ ಜಿಲ್ಲೆಯ ರೋಣ, ನರಗುಂದ, ನವಲಗುಂದ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಚಂದ್ರಯಾನ-3ರ ಮಿಷನ್‍ನಲ್ಲಿ ಇಸ್ರೋದ ಮತ್ತೊಂದು ಸಾಧನೆ

ಮುಂದಿನ ತಿಂಗಳು ಇಬ್ಬರು ನಾಯಕರು ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ನಂತರ ಸಿದ್ದರಾಮಯ್ಯ ದಕ್ಷಿಣ ಭಾಗಕ್ಕೆ, ಶಿವಕುಮಾರ್ ಉತ್ತರ ಭಾಗಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ.

congress, Praja Dhwani, dk shivakumar, siddaramaiah,

Articles You Might Like

Share This Article