ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Social Share

ಬೆಂಗಳೂರು,ಜ.3- ಮತಾಂತರ ನಿಷೇಧ ಕಾಯ್ದೆ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದೆ.  ಪ್ರತಿಭಟನೆಯಲ್ಲಿ ಶಾಸಕ ಹ್ಯಾರೀಸ್, ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಸಿ.ಎಸ್.ದ್ವಾರಕನಾಥ್,ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಬ್ದುಲ್ ಜಬ್ಬಾರ್ ಮತ್ತಿತರರು ಭಾಗವಹಿಸಿದ್ದರು.
ಸಿ.ಎಸ್.ದ್ವಾರಕನಾಥ್ ಮಾತನಾಡಿ, ಉತ್ತರಪ್ರದೇಶದಲ್ಲಿ ಚುನಾವಣೆ ಇರುವ ಕಾರಣಕ್ಕಾಗಿ ದೇಶಾದ್ಯಂತ ಮತೀಯ ವಾದವನ್ನು ಹೆಚ್ಚು ಬಿಂಬಿಸಲಾಗುತ್ತಿದೆ. ಉತ್ತರಪ್ರದೇಶದಲ್ಲಿನ ಮತಾಂತರ ಕಾಯ್ದೆಯನ್ನೇ ಮಕ್ಕಿಕಾಮಕ್ಕಿ ಕರ್ನಾಟಕದಲ್ಲೂ ರೂಪಿಸಲಾಗಿದೆ. ನಾಗಪುರದ ಆರ್‍ಎಸ್‍ಎಸ್ ಕಚೇರಿಯಲ್ಲಿ ಮಸೂದೆ ತಯಾರಿಯಾದಂತಿದೆ ಎಂದು ಆರೋಪಿಸಿದರು.
ನಮ್ಮದು ಬುದ್ದ, ಬಸವಣ್ಣನವರು ಹಾಕಿಕೊಟ್ಟ ಪರಂಪರೆ. ಮತಾಂತರ ನಿಷೇಧ ಕಾಯ್ದೆಯಿಂದ ಲಿಂಗಾಯಿತ, ದಲಿತ ಸಮುದಾಯಗಳ ಮೇಲೆ ಪರಿಣಾಮ ಬೀರಲಿದೆ. ದಲಿತರ ಸ್ವಾತಂತ್ರವನ್ನು ಕಸಿದುಕೊಳ್ಳಲಾಗುತ್ತಿದೆ. ಈ ನೆಲ ಶೇ.2ರಷ್ಟಿರುವ ನಾಗಪುರಕ್ಕೆ ಸೇರಿದವರದಲ್ಲ. ನಮ್ಮದು ಹೂಳುವ ಸಂಸ್ಕøತಿ, ಅವರದು ಸುಡುವ ಸಂಸ್ಕøತಿ.
ಬಸವ ಧರ್ಮದಿಂದ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಸೂದಗೆ ಹೇಗೆ ಸಹಿ ಮಾಡಿದರು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ದೇವಸ್ಥಾನಗಳನ್ನು ಖಾಸಗಿಯವರಿಗೆ ನೀಡಲು ಹೊರಟಿದೆ. ಇದು ಸೂಕ್ತವಲ್ಲ. ಉತ್ತರಪ್ರದೇಶದಲ್ಲಿ ಕೋತಿ ಆಡಿಸುವವನು ಜಾರಿಗೆ ತಂದ ಮತಾಂತರ ಮಸೂದೆಯನ್ನು ಇಲ್ಲಿಯೂ ಮತಾಂತರಗೊಳಿಸುವ ಅಗತ್ಯವಿಲ್ಲ ಎಂದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ, ಮೇಕೆದಾಟು ಪಾದಯಾತ್ರೆಗೆ ಅಡ್ಡಿಪಡಿಸಲು ಸರ್ಕಾರ ಹುನ್ನಾರ ನಡೆಸಿದೆ. ಕಂದಾಯ ಸಚಿವ ಅಶೋಕ್ ಅವರ ಹೇಳಿಕೆಯನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ. ಕೋವಿಡ್ ಸೋಂಕು ಹೆಚ್ಚಾಗಿದ್ದರೆ ಅಗತ್ಯ ಕ್ರಮ ಕೈಗೊಳ್ಳಿ ಆದರೆ ನೆಲಜಲ ಬಾಷೆಯ ಪರವಾದ ಹೋರಾಟಗಳಿಗೆ ಅಡ್ಡಿಪಡಿಸಬೇಡಿ ಎಂದು ಹೇಳಿದರು.
ಪಾದಯಾತ್ರೆಯನ್ನು ಕಾಂಗ್ರೆಸ್ ಆಯೋಜನೆ ಮಾಡಿದ್ದರೂ ಕೂಡ ಇದು ಪಕ್ಷಾತೀತ ಹೋರಾಟ. ಬಿಜೆಪಿ ಹಾಗೂ ಜೆಡಿಎಸ್‍ನವರು ಇದರಲ್ಲಿ ಭಾಗವಹಿಸಬಹುದು. ಮುಂದೆ ಜೆಡಿಎಸ್‍ನವರು ನೆಲಜಲದ ವಿಷಯದಲ್ಲಿ ಹೋರಾಟ ಮಾಡಿದರೂ ನಾನು ಅದರಲ್ಲಿ ಭಾಗವಹಿಸುತ್ತೇನೆ. ಕನ್ನಡ ಚಿತ್ರರಂಗ ಹೋರಾಟದಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ ರಾಜಕಾರಣ ಬೇಡ ಎಂದು ಹೇಳಿದರು.
ಅಬ್ದುಲ್ಲ ಜಬ್ಬಾರ್ ಅವರು ಮಾತನಾಡಿ, ಕ್ರೈಸ್ತರ ಚರ್ಚ್‍ಗಳ ಮೇಲೆ ನಿರಂತರವಾಗಿ ದಾಳಿಯಾಗುತ್ತಿದೆ. ಮಂಡ್ಯದ ನಿರ್ಮಲ ಶಾಲೆಯ ಮೇಲೆ, ಗೋಕಾಕ ಚರ್ಚ್ ಮೇಲೆ ದಾಳಿ ನಡೆಸಲಾಗಿದೆ. ಚಿಕ್ಕಬಳ್ಳಾಪುರ ಮಂಡ್ಯದಲ್ಲಿ ಚರ್ಚ್‍ಗಳಿಗೆ ಅಕಾರಿಗಳೇ ಬೀಗ ಹಾಕಿಸಿದ್ದಾರೆ. ಉತ್ತರಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಕೋಮುವಾದದ ಘಟನೆಗಳು ತೀವ್ರವಾಗುತ್ತಿದೆ. ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಲಾಗುತ್ತಿದೆ. ಬಿಜೆಪಿ ನಾಯಕರು ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Articles You Might Like

Share This Article