ಬೆಂಗಳೂರು, ಜು.30- ತಮ್ಮ ಸ್ವಂತ ಮನೆಗೆ ರಕ್ಷಣೆ ನೀಡಲು ಸಾಧ್ಯವಾಗದ ಗೃಹ ಸಚಿವ ರಗ ಜ್ಞಾನೇಂದ್ರ, ಇಡೀ ಕರ್ನಾಟಕದ ರಕ್ಷಣೆ ಮಾಡಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದು ಕಾರ್ಯಕರ್ತರ ಕೊಲೆ ವಿರೋಸಿ, ಎಸ್‍ಡಿಪಿಐ ಮತ್ತು ಪಿಎಫ್‍ಐನಂತಹ ಸಂಘಟನೆಗಳನ್ನು ನಿಷೇಸಬೇಕು ಎಂದು ಒತ್ತಾಯಿಸಿ ಇಂದು ಬೆಳಗ್ಗೆ ಎಬಿವಿಪಿ ಕಾರ್ಯಕರ್ತರು ನಗರದ ಜಯಮಹಲ್‍ನಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಮನೆಯ ಗೇಟ್ ಹತ್ತಿ ಒಳಗೆ ನುಗ್ಗಿದ್ದರು. ಈ ಸಂದರ್ಭದಲ್ಲಿ ಉದ್ರಿಕ್ತ ಕಾರ್ಯಕರ್ತರನ್ನು ನಿಯಂತ್ರಿಸಲು ಪೆÇಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.
ಈ ಘಟನೆ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸ್ವಂತ ಮನೆಯನ್ನೇ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾದ ಗೃಹ ಸಚಿವರಿಗೆ ಇಡೀ ಕರ್ನಾಟಕದ ರಕ್ಷಣೆ ನೀಡಲು ಹೇಗೆ ಸಾಧ್ಯ. ಅಮಾಯಕ ಯುವರಿಕಗೆ ರಕ್ಷಣೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ.
ಇಂತಹ ಅಸಮರ್ಥರು ಗೃಹ ಸಚಿವರಾಗಿ ಮುಂದುವರೆಯುತ್ತಿರುವುದು ಯಾರ ಸಂತೋಷಕ್ಕಾಗಿ ಎಂದು ಕಾಂಗ್ರೆಸ್ ಕುಹಕ ಪ್ರಶ್ನೆ ಕೇಳಿದೆ.