ಕಾಂಗ್ರೆಸ್ ರೌಡಿಗಳ ಪಕ್ಷ, ನಮ್ಮದು ಸುಸಂಸ್ಕೃತರ ಪಕ್ಷ : ಈಶ್ವರಪ್ಪ

Social Share

ಶಿವಮೊಗ್ಗ,ನ.30- ಕಾಂಗ್ರೆಸ್ ರೌಡಿಗಳ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದವರು ಎಂದು ಕಾಂಗ್ರೆಸ್‍ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ರೌಡಿಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಲೇವಡಿ ಮಾಡಿದ್ದ ಕಾಂಗ್ರೆಸ್, ಬಿಜೆಪಿ ರೌಡಿಗಳ ಪಕ್ಷ ಎಂದು ಹರಿಹಾಯ್ದಿತ್ತು. ಇದಕ್ಕೆ ಟಾಂಗ್ ನೀಡಿರುವ ಈಶ್ವರಪ್ಪ, ನಮ್ಮದು ರೌಡಿಗಳ ಪಕ್ಷ ಅಲ್ಲ. ಸುಸಂಸ್ಕೃತರ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿಹಾರ್ ಜೈಲಿಗೆ ಹೋಗಿ ಬಂದವರು. ಕಾಂಗ್ರೆಸ್‍ನ ಯುವ ಮೋರ್ಚಾ ಅಧ್ಯಕ್ಷ ನಲಪಾಡ್ ಬಾರ್‍ನಲ್ಲಿ ಹೊಡೆದಾಡಿ ಜೈಲಿಗೆ ಹೋಗಿ ಬಂದವನು ಎಂದು ಠಕ್ಕರ್ ಕೊಟ್ಟರು.

ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಾತನಾಡಿದ ಅವರು, ಕರ್ನಾಟಕದ ಒಂದಿಂಚು ಭೂಮಿ ಸಹ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ರಾಜ್ಯದ ಆರೂವರೆ ಕೋಟಿ ಜನ ಒಗ್ಗಟ್ಟಾಗಿದ್ದಾರೆ. ಅಲ್ಲಿ ಕುಡಿಯುವುದಕ್ಕೆ ನೀರು ಸಹ ಇಲ್ಲ. ಗಡಿಭಾಗದ ಜನ ಕರ್ನಾಟಕಕ್ಕೆ ಸೇರಲು ಬಯಸುತ್ತಿದ್ದಾರೆ ಎಂದರು.

ಹಿಂದೂ ಧರ್ಮ ನಾಶಕ್ಕೆ ಲವ್‍ಜಿಹಾದ್ ನಡೆಯುತ್ತಿದೆ : ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಡಿಕೆಶಿ, ಸಿದ್ದು ಒಳಜಗಳದ ಬಗ್ಗೆ ಪ್ರತಿಕ್ರಿಯಿಸಿ, ಡಿಕೆಶಿ ಒಳಗೊಳಗೆ ದ್ವೇಷ ಮಾಡಿ, ಮೇಲ್ನೋಟಕ್ಕೆ ಚೆನ್ನಾಗಿ ಮಾತನಾಡುತ್ತಾರೆ. ಇಬ್ಬರು ಒಬ್ಬರಿಗೊಬ್ಬರು ಚಾಕು ಹಾಕಿಕೊಳ್ಳುತ್ತಾರೆ. ಹಿಂದೂ ಸಮಾಜ ಬಿಜೆಪಿ ಪರವಾಗಿದೆ. ಈಗಾಗಿಯೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಜೆಡಿಎಸ್ ಸೇರ್ಪಡೆ ಸಂಬಂಧ ಸಿ.ಎಂ.ಇಬ್ರಾಹಿಂ ಹೇಳಿಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಎಂ.ಇಬ್ರಾಹಿಂ ಅವರಿಗೆ ಬೇರೆ ಕೆಲಸ ಇಲ್ಲ. ರಸ್ತೆಯಲ್ಲಿ ಹೋಗುವ ನಾಯಿ ಕೂಡ ಜೆಡಿಎಸ್‍ಗೆ ಹೋಗುವುದಿಲ್ಲ. ಇನ್ನು ರಮೇಶ್ ಜಾರಕಿಹೊಳಿ ಅವರು ಸರ್ಕಾರ ತಂದವರು. ಅವರು ಯಾಕ್ರೀ ಬಿಜೆಪಿ ಬಿಟ್ಟು ಹೋಗುತ್ತಾರೆ ಎಂದು ಪ್ರಶ್ನಿಸಿದರು.

ಕೊಲಿಜಿಯಂನ 19 ಹೆಸರುಗಳು ತಿರಸ್ಕಾರ : ಕೇಂದ್ರ – ನ್ಯಾಯಾಂಗ ಸಂಘರ್ಷ..?

ಏನು ಇಲ್ಲದಿರುವ ಜೆಡಿಎಸ್‍ಗೆ ಜಾರಕಿಹೊಳಿ ಹೋಗುತ್ತಾರೆಯೇ? ಯಾವ ಕಾರಣಕ್ಕೂ ಹೋಗುವ ಪ್ರಶ್ನೆ ಉದ್ಬವವಾಗುವುದಿಲ್ಲ. ಇಬ್ರಾಹಿಂ ತಾನಂತು ಹೋಗಿ ಆಗಿದೆ. ತಾನು ಹೋಗಿರುವ ಒಂದೇ ಕಾರಣಕ್ಕೆ ಅವರು ಬರುತ್ತಾರೆ, ಇವರು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಇಬ್ರಾಹಿಂ ಅರ್ಥ ಇಲ್ಲದೇ ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Congress, rowdies, party, KS Eshwarappa,

Articles You Might Like

Share This Article