ಬೆಂಗಳೂರು,ಡಿ.2- ಕಾಂಗ್ರೆಸ್ ರೌಡಿಗಳನ್ನು ತಯಾರಿಸುವ ಕಾರ್ಖಾನೆ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೌಡಿ ಹಿನ್ನಲೆಯುಳ್ಳವರು ಸಮಾಜಘಾತುಕರಿಗೆ ಪಕ್ಷದಲ್ಲಿ ಅವಕಾಶವಿಲ್ಲ. ಹಾಗೊಂದು ವೇಳೆ ಯಾರಾದರೂ ಸೇರ್ಪಡೆಯಾಗಿದ್ದರೆ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದರು.
ದೇಶದಲ್ಲಿ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ರೌಡಿಗಳ ಬೆಳವಣಿಗೆಗೆ ಅವಕಾಶ ನೀಡಿದೆ. ಅವರ ಬೆಂಬಲ ಪಡೆದು ಅಧಿಕಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಗಡಿ ಭಾಗದಲ್ಲಿ ಮರಾಠಿ ಶಾಲೆ ಸ್ಥಾಪನೆಗೆ ತಡೆ
ಗೂಂಡಾಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ, ಪ್ರೋತ್ಸಾಹಿಸುವುದಿಲ್ಲ, ಕೇಸರಿ ಶಾಲು ಹಾಕಿದವರಲ್ಲ ಬಿಜೆಪಿಯವರಲ್ಲ. ಕೇಸರಿ ಹೆಸರಿನ ಜೊತೆಗೆ ಕಮಲದ ಚಿಹ್ನೆ ಇರಬೇಕು. ಬಿಜೆಪಿ ಸದಸ್ಯತ್ವ ಪಡೆದಿರಬೇಕು ಎಂದರು.
ಕನ್ನಡ ಬಾವುಟ ಹಾರಿಸಿದ ಯುವಕನಿಗೆ ಪೊಲೀಸ್ ಥಳಿತ : ತನಿಖೆಗೆ ಸಿಎಂ ಸೂಚನೆ
ಬಿಜೆಪಿ ನಾಯಕರೊಂದಿಗೆ ರೌಡಿ ಹಿನ್ನಲೆಯುಳ್ಳವರು ಫೋಟೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನೂರಾರು ಫೋಟೋಗಳು ನಮ್ಮ ಬಳಿ ಇದೆ. ಕಾಂಗ್ರೆಸ್‍ನವರು ಅವರ ಜಾತಕವನ್ನು ನೋಡಿಕೊಳ್ಳಲಿ ಎಂದು ಟೀಕಿಸಿದರು.
Congress, rowdy, factory, Minister, Ashok,