ಹಿರಿಯ ನಾಯಕರ ಕಡೆಗಣನೆಗೆ ಗುಜರಾತ್ ಸೋಲಿಗೆ ಕಾರಣ : ಮೊಯ್ಲಿ

Social Share

ಬೆಂಗಳೂರು,ಡಿ.10- ಗುಜರಾತ್‍ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿದ ಪರಿಣಾಮ ಹೀನಾಯ ಸೋಲುಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಕ್ಷಕ್ಕೆ ಯಶಸ್ಸು ತಂದುಕೊಟ್ಟವರನ್ನು ಕಡ್ಡಾಯವಾಗಿ ಗೌರವಿಸಬೇಕು. ಹಿಮಾಚಲಪ್ರದೇಶದಲ್ಲಿ ವೀರಭದ್ರ ಸಿಂಗ್ ಪಕ್ಷವನ್ನು ಗೆಲ್ಲಿಸಿದರು. ಅವರ ಬಳಿಕ ಅವರ ಪತ್ನಿ ಪ್ರತಿಭಾ ಸಿಂಗ್‍ರನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಲಾಯಿತು.

ಈ ಪ್ರಯೋಗ ಯಶಸ್ವಿಯಾಗಿದೆ. 68 ಕ್ಷೇತ್ರಗಳ ಪೈಕಿ 40ರಲ್ಲಿ ಕಾಂಗ್ರೆಸ್ ಗೆದ್ದು ಹಿಮಾಚಲಪ್ರದೇಶದಲ್ಲಿ ಅಧಿಕಾರ ಹಿಡಿದಿದೆ. ಅದೇ ರೀತಿ ಪರೀಕ್ಷೆ, ಉತ್ತಮ ಪರೀಕ್ಷೆ ಮತ್ತು ಕಾಲಕ್ಕನುಗುಣವಾದ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾದ ನಾಯಕರನ್ನು ಗೌರವಿಸಬೇಕು, ಗುರುತಿಸಬೇಕು ಎಂದು ಹೇಳಿದರು.

ಪೊಲೀಸ್ ಬಲವರ್ಧನೆ ಹೆಚ್ಚು ಅನುದಾನ ಬಿಡುಗಡೆ : ಗೃಹ ಸಚಿವ ಜ್ಞಾನೇಂದ್ರ

ಗುಜರಾತ್‍ನಲ್ಲಿ ರಾಜ್ಯ ನಾಯಕರನ್ನು ಉತ್ತಮವಾಗಿ ನಡೆಸಿಕೊಳ್ಳಲಾಗಿಲ್ಲ. ಈಗಲೂ ಅಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಇದರಿಂದ ನಾವು ಪಾಠ ಕಲಿಯಬೇಕಿದೆ. ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿ ನಾಯಕರು, ರಾಜ್ಯ ನಾಯಕರ ಮೇಲೆ ಒತ್ತಡ ಹೇರಬಾರದು.

ನಿರ್ದೇಶನ, ಸೂಚನೆಗಳನ್ನು ನೀಡುವ ಬದಲು ಸಬಲೀಕರಣಗೊಳಿಸಬೇಕು, ಶಕ್ತಿ ತುಂಬಬೇಕು. ಪಕ್ಷ ನಿಷ್ಠೆ ಹಾಗೂ ಸದಾಕಾಲ ದುಡಿದವರಿಗೆ ಸ್ಥಾನಮಾನ ನೀಡಬೇಕು ಎಂದರು.

ಅಭಿಷೇಕ್ ಅಂಬರೀಷ್‍ – ಅವಿವಾ ಬಿದ್ದಪ್ಪ ನಿಶ್ಚಿತಾರ್ಥ

2017ರ ವಿಧಾನಸಭೆ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಉತ್ತಮ ಪರಿಸ್ಥಿತಿಯಲ್ಲಿತ್ತು. ಅದರ ಬಳಿಕ ಅಲ್ಲಿ ಸ್ಥಳೀಯ ನಾಯಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ. ಸಮರ್ಥರನ್ನು ಗುರುತಿಸಲಾಗಲಿಲ್ಲ ಎಂದು ವಿಶ್ಲೇಷಿಸಿದ್ದಾರೆ.

#Congress,#SeniorLeaders, #Neglect, #GujaratResult, #VeerappaMoily,

Articles You Might Like

Share This Article