ಉಪರಾಷ್ಟ್ರಪತಿಯವರ ವಿವಾದಿತ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್

Social Share

ನವದೆಹಲಿ,ಜ.13- ಸಂಸತ್ ಎಲ್ಲದಕ್ಕಿಂತ ದೊಡ್ಡದು ಎಂದು ವಿವಾದಿತ ಹೇಳಿಕೆ ನೀಡಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿಯನ್ನು ಮುಂದುವರೆಸಿದೆ. ಧನ್ಕರ್ ಅವರಿಗಿಂತ ಹಿಂದೆ ಉಪರಾಷ್ಟ್ರತಿಯಾಗಿದ್ದ ವೆಂಕಯ್ಯ ನಾಯ್ಡು ಹೇಳಿಕೆಯನ್ನೇ ಉಲ್ಲೇಖಿಸಿ ತಿರುಗೇಟು ನೀಡಿರುವ ಕಾಂಗ್ರೆಸ್, ದೇಶದ ಮೂರು ಅಂಗಗಳಿಂತಲೂ ಸಂವಿಧಾನವೇ ಶ್ರೇಷ್ಠ ಎಂದಿದೆ.

ಜೈಪುರದಲ್ಲಿ ನಡೆದ 83ನೇ ಅಖಿಲ ಭಾರತ ಪೀಠಾಪತಿಗಳ ಸಮ್ಮೇಳನದಲ್ಲಿ ಮಾತನಾಡಿದ್ದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, 2015ರಲ್ಲಿ ಎನ್‍ಜೆಎಸಿ ಕಾಯ್ದೆಯನ್ನು ರದ್ದುಗೊಳಿಸಿರುವುದನ್ನು ಟೀಕಿಸಿದ್ದರು. 1973ರ ಕೇಶವಾನಂದ ಭಾರತಿ ಪ್ರಕರಣದ ಮಹತ್ವದ ತೀರ್ಪನ್ನು ಪ್ರಶ್ನಿಸಿ, ಇದು ತಪ್ಪು ನಿದರ್ಶನವಾಗಿದೆ.

ಸುಪ್ರಿಂಕೋರ್ಟ್ ತೀರ್ಪನ್ನು ಸಂಸತ್ ಒಪ್ಪುವುದಿಲ್ಲ, ಸಂಸತ್ ಸಂವಿಧಾನವನ್ನು ತಿದ್ದುಪಡಿ ಮಾಡವ ಸಾಮಾಥ್ರ್ಯವನ್ನು ಹೊಂದಿದೆ. ಆದರೆ ಸಂವಿಧಾನದ ಮೂಲ ಸ್ವರೂಪವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಈ ಹಂತದಲ್ಲಿ ಸಂಸತ್ ಎಲ್ಲಾ ಅಂಗಗಳಿಂತಗೂ ಮೇಲ್ಮಟ್ಟದ್ದಾಗಿದೆ ಎಂದು ಪ್ರತಿಪಾದಿಸಿದ್ದರು.

ಜೋಶಿಮಠದಲ್ಲಿ 12 ದಿನಗಳಲ್ಲಿ 5.4ಸೆಂ,ಮೀ ಭೂಮಿ ಮುಳುಗಡೆ

ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ನಿನ್ನೆ ಕಾಂಗ್ರೆಸ್ನ್ ಹಿರಿಯ ನಾಯಕ ಚಿದಂಬರಂ ಟ್ವೀಟ್ ಮಾಡಿ, ಉಪರಾಷ್ಟ್ರಪತಿ ಅವರ ಹೇಳಿಕೆಯನ್ನು ತಪ್ಪು ಎಂದು ಅಲ್ಲಗಳೆದಿದ್ದರು.

ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನದ ವಿಭಾಗದ ಉಸ್ತುವಾರಿ ನಾಯಕ ಜೈರಾಮ್ ರಮೇಶ್ ಅವರು ಇಂದು ಟ್ವೀಟ್ ಮಾಡಿದ್ದು ತಮ್ಮ ಪಕ್ಷದ ನಾಯಕ ಚಿದಂಬರಂ ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ವೆಂಕಯ್ಯ ನಾಯ್ಡು ಅವರು 2020ರ ನವೆಂಬರ್‍ನಲ್ಲಿ ಗುಜರಾತ್‍ನ ಕೆವಾಡಿಯಾದಲ್ಲಿ 80 ನೇ ಅಖಿಲ ಭಾರತ ಪೀಠಾಪತಿಗಳ ಸಮ್ಮೇಳನದ ಉದ್ಘಾಟನೆ ವೇಳೆ ಮಾತನಾಡಿ, ಸಂವಿಧಾನವೇ ಸರ್ವಶ್ರೇಷ್ಠ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಂವಿಧಾನದಲ್ಲಿ ವ್ಯಾಖ್ಯಾನಿಸಿದಂತೆ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬದ್ಧವಾಗಿವೆ.

ಶರದ್ ಯಾದವ್ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ರಾಹುಲ್‍

ಮೂರು ಅಂಗಗಳಲ್ಲಿ ಯಾವುದೂ ಸರ್ವೋಚ್ಚ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆ ಹೇಳಿಕೆಯನ್ನು ಟ್ಯಾಗ್ ಮಾಡಿರುವ ಜೈರಾಂರಮೇಶ್, ಹಿಂದಿನ ಉಪರಾಷ್ಟ್ರಪತಿಯವರು ಮತ್ತು ನಮ್ಮ ಪಕ್ಷದ ಚಿದಂಬರಂ ಸರಿಯಾಗಿ ಹೇಳಿದ್ದಾರೆ. ಪ್ರಸ್ತುತ ಉಪರಾಷ್ಟ್ರಪತಿಯವರು ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂದಿದ್ದಾರೆ.

Congress, Slams, VP Dhankar, Constitution Supreme, Remarks,

Articles You Might Like

Share This Article