ನವದೆಹಲಿ, ಡಿ. 3- ಎಐಸಿಸಿಯ ಸಂಚಲನ ಸಮಿತಿ ಇಂದು ದೆಹಲಿಯಲ್ಲಿ ಸಭೆ ನಡೆಸಿದ್ದು, ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‍ನಲ್ಲಿ ಪಕ್ಷದ ಪೂರ್ಣಪ್ರಮಾಣದ ಪ್ರತಿಧಿನಿಗಳ ಸಭೆ ಕುರಿತು ಚರ್ಚೆ ನಡೆಸಿದೆ.
ಎಐಸಿಸಿ ಅಧ್ಯಕ್ಷರಾಗಿ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಕಾರ್ಯಕಾರಿ ಬದಲಾಗಿ ಸಂಚಲನ ಸಮಿತಿಯನ್ನು ರಚಿಸಿದ್ದರು.
ಈ ಸಮಿತಿ ಪಕ್ಷದ ಉನ್ನತ ನಿರ್ಧಾರಗಳನ್ನು ಕೈಗೊಳ್ಳಲಿವೆ. ಇಂದು ನಡೆದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಅಂಬಿಕಾ ಸೋನಿ, ಜಯರಾಮ್ ರಮೇಶ್, ಅಶೋಕ್‍ಗೆಹಲೋಟ್, ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಪಿ. ಚಿದಂಬರಂ ಸೇರಿದಂತೆ ಅನೇಕ ನಾಯಕರುಗಳು ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಗುಜರಾತ್ ವಿಧಾನ ಸಭೆ ಚುನಾವಣೆ ಅನುಭವಗಳನ್ನು ನಾಯಕರು ವಿನಿಮಯ ಮಾಡಿಕೊಂಡಿದ್ದಾರೆ. ಮುಂಬರುವ ಕರ್ನಾಟಕ, ರಾಜಸ್ಥಾನ ಸೇರಿದಂತೆ ಪಂಚ ರಾಜ್ಯಗಳ ಚನಾವಣೆಗಳ ಬಗ್ಗೆಯೂ ಪೂರ್ವ ತಯಾರಿ ಆರಂಭಿಸಲಾಗಿದೆ.
“ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ”
ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಪಕ್ಷಕ್ಕೆ ಹೊಸ ದಿಕ್ಕು ನೀಡಿದ್ದು, ಅದನ್ನು ರಾಜಕೀಯವಾಗಿ ಸದ್ಭವಳಿಕೆ ಮಾಡಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.
10.50 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳಿಗೆ ಒಡಿಶಾ ಸರ್ಕಾರ ಸಹಿ
ಬಿಜೆಪಿಯ ದ್ವೇಷದ ರಾಜಕಾರಣ, ಕೇಂದ್ರ ಸಂಸ್ಥೆಗಳ ದುರುಪಯೋಗದಂತಹ ಸವಾಲಿನ ಸಂದರ್ಭದಲ್ಲಿ ಪಕ್ಷವನ್ನು ಪುನರ್ ಸಂಘಟಿಸಿ ಕಾರ್ಯಕರ್ತರಿಗೆ ಉತ್ಸವ ತುಂಬುವ ಬಗ್ಗೆ ಹಲವು ಸಲಹೆಗಳು ಕೇಳಿಬಂದಿದೆ.
ಪ್ರಮುಖವಾಗಿ ಉದಯ್‍ಪುರ್ ಘೋಷಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕುರಿತು ಸಮಾಲೋಚನೆ ನಡೆಸುವುದಾಗಿ ಮೂಲಗಳು ತಿಳಿಸಿವೆ.
Congress, steering, panel, meeting,