ಭದ್ರತೆ ವೈಫಲ್ಯ: ಭಾರತ್ ಜೋಡೋ ಯಾತ್ರೆ ದಿಡೀರ್ ಸ್ಥಗಿತ

Social Share

ನವದೆಹಲಿ,ಜ.27- ಭದ್ರತೆ ವೈಫಲ್ಯದ ಕಾರಣಕ್ಕೆ ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ದಿಡೀರ್ ಸ್ಥಗಿತಗೊಂಡಿದೆ. ಇಂದು ಬೆಳಗ್ಗೆ ರಾಮ್‍ಬಾನ್ ಜಿಲ್ಲೆಯ ಕ್ವಾಜಿಗುಂಡ್‍ನಿಂದ ಯಾತ್ರೆ ಪುನರ್ ಆರಂಭವಾಗಿತ್ತು.

ಜಮ್ಮು ಕಾಶ್ಮೀರ ನ್ಯಾಷನಲ್ ಕಾನರೆನ್ಸ್‍ನ ಒಮರ್ ಅಬ್ದುಲ್ಲಾ ಯಾತ್ರೆಗೆ ಜೊತೆಯಾಗಿದ್ದರು. ರೈಲ್ವೆ ನಿಲ್ದಾಣದಿಂದ ಟ್ರಕ್‍ಯಾರ್ಡ್‍ವರೆಗೂ ಎರಡು ಕಿಲೋ ಮೀಟರ್ ದೂರ ಯಾತ್ರೆ ನಡೆದಿತ್ತು. ಕಾಂಗ್ರೆಸ್‍ನ ಸ್ಥಳೀಯ ನಾಯಕರು ಭಾಗವಹಿಸಿದ್ದರು.

ಪಾದಯಾತ್ರೆ ಹಾಗೆ ಮುಂದುವರೆದಿದದರೆ ಇಂದು ಅನಂತನಾಗ್ ಜಿಲ್ಲೆಯ ಖನಬಳ ಪ್ರದೇಶದಲ್ಲಿ ಕಾಶ್ಮೀರಕ್ಕೆ ಪ್ರವೇಶಿಸಬೇಕಿತ್ತು. ಆದರೆ ಅಷ್ಟರಲ್ಲಿ ಭದ್ರತೆಯ ಕೊರತೆ ಎದುರಾಗಿತ್ತು.

ಬಣ್ಣದ ಲೋಕದ ನಂಟು ಕಳಚಿದ `ಸಾಕ್ಷಾತ್ಕಾರ’ ನಟಿ ಜಮುನಾ

ಭದ್ರತಾಪಡೆಗಳು ಸರಿಯಾದ ಭದ್ರತೆ ಒದಗಿಸಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ಇತರ ನಾಯಕರು ಯಾತ್ರೆಯನ್ನು ಸ್ಥಗಿತಗೊಳಿಸಿದರು. ರಾಹುಲ್‍ಗಾಂಧಿಯನ್ನು ಅಲ್ಲಿಂದ ಕಾರಿನಲ್ಲಿ ಕರೆದೊಯ್ಯಲಾಯಿತು.

ಸರಿಯಾದ ಭದ್ರತೆ ಇಲ್ಲದೆ ನಾವು ಪಾದಯಾತ್ರೆ ಮುಂದುವರೆಸಲು ಬಿಡುವುದಿಲ್ಲ. ರಾಹುಲ್‍ಗಾಂಧಿ ನಡೆಯಲು ಮುಂದಾದರೂ ನಾವು ಅವಕಾಶ ನೀಡುವುದಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು.

Congress, stops, Bharat Jodo Yatra, Kashmir, security measures,

Articles You Might Like

Share This Article