ಕಾಂಗ್ರೆಸ್‍ನಲ್ಲೀಗ ಮೂರು ಶಕ್ತಿ ಕೇಂದ್ರಗಳಿವೆ : ಶೆಟ್ಟರ್ ವ್ಯಂಗ್ಯ

Social Share

ಹುಬ್ಬಳ್ಳಿ,ಅ.22- ಇಷ್ಟು ದಿನ ರಾಜ್ಯ ಕಾಂಗ್ರೆಸ್‍ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಂಬ ಎರಡು ಶಕ್ತಿ ಕೇಂದ್ರಗಳಿದ್ದವು. ಇದೀಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರಿಂದ ಮತ್ತೊಂದು ಶಕ್ತಿ ಕೇಂದ್ರ ರಚನೆಯಾದಂತಾಗಿದೆ ಎಂದು ಶಾಸಕ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೂ ಇಲ್ಲ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಶಕ್ತಿ ಕೇಂದ್ರದ ಜೊತೆಗೆ ಮೂರನೇ ಶಕ್ತಿ ಕೇಂದ್ರ ಹುಟ್ಟಿಕೊಂಡಿದೆ. ಪಕ್ಷದಲ್ಲಿ ಮತ್ತಷ್ಟು ಅಂತರ ಹೆಚ್ಚಾಗಲಿದೆ ಟೀಕಿಸಿದರು.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ . ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿ ಆ ಪಕ್ಷದ ಮುಖಂಡರು ಇದ್ದಾರೆ. ಅವರು ಅಧ್ಯಕ್ಷರಾಗಿರುವುದರಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ ಎಂದು ಲೇವಡಿ ಮಾಡಿದರು.

ಟ್ರಕ್‍ಗೆ ಬಸ್ ಡಿಕ್ಕಿ, 15 ಕಾರ್ಮಿಕರ ದುರ್ಮರಣ,ಮಧ್ಯಪ್ರದೇಶದಲ್ಲಿ ಘೋರ ದುರಂತ

ರಾಹುಲ್ ಗಾಂಧಿ ಎಲ್ಲಿಯವರೆಗೆ ಕಾಂಗ್ರೆಸ್‍ನಲ್ಲಿ ಇರುತ್ತಾರೆಯೋ ಅಲ್ಲಿಯವರೆಗೆ ಕಾಂಗ್ರೆಸ್ ಉದ್ಧಾರವಾಗುವುದಿಲ್ಲ. 70 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್‍ಗೆ, ಆವಾಗ ಭಾರತ್ ಜೋಡೊ ಮಾಡಲು ಸಾಧ್ಯವಾಗಿಲ್ಲವೇ? ಈಗ ಅದನ್ನು ಮಾಡುವ ಅಗತ್ಯವೇನಿತ್ತು? ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷ ಸತ್ತು ಹೋಗಿದ್ದು, ತುರ್ತಾಗಿ ಆಮ್ಲಜನಕದ ಅಗತ್ಯವಿದೆ . ಆದಾಗ್ಯೂ ಅಲ್ಲಿ ಒಂದಷ್ಟು ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.

ದೀಪಾವಳಿ ವೇಳೆ ಅಗ್ನಿ ಅವಘಡ ತಡೆಯಲು ಮುಂಜಾಗ್ರತಾ ಕ್ರಮಗಳ ಸುತ್ತೋಲೆ

ಹಲಾಲ್ ಇಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿಲ್ಲ. ಕೆಲವು ವ್ಯಕ್ತಿಗಳು, ಸಂಘಟನೆಗಳ ಮುಖಂಡರು ಆ ಕುರಿತು ಮಾತನಾಡುತ್ತಿದ್ದಾರೆ¿ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

Articles You Might Like

Share This Article