ಕಾಂಗ್ರೆಸ್ ಟಿಕೆಟ್‍ಗೆ ಮುಗಿಬಿದ್ದ ಆಕಾಂಕ್ಷಿಗಳು

Social Share

ಬೆಂಗಳೂರು,ನ.14- ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧೆ ಬಯಸುವವರು ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಲು ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಇಂದು ಪಕ್ಷದ ಕಚೇರಿ ಎದುರು ನೂಕುನುಗ್ಗಲು ಉಂಟಾಗಿತ್ತು.
ಕಳೆದ 15 ದಿನಗಳಿಂದಲೂ ಅರ್ಜಿ ವಿಚಾರಣೆ ಮತ್ತು ಸ್ವೀಕಾರ ನಡೆಯುತ್ತಿತ್ತು. ಈವರೆಗೂ ಸುಮಾರು 800 ಅರ್ಜಿಗಳು ಮಾರಾಟವಾಗಿದ್ದವು, 200 ಅರ್ಜಿಗಳು ಮರಳಿ ಬಂದಿದ್ದವು.

ಹೀಗಾಗಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ ಎಂಬ ವರದಿಗಳಾಗಿದ್ದವು. ಆದರೆ ಅಂತಿಮ ಗಡುವು ಸಮೀಪಿಸುತ್ತಿದ್ದಂತೆ ಅರ್ಜಿ ಪಡೆಯಲು ಮತ್ತು ನೀಡಲು ನೂಕುನುಗ್ಗಲು ಉಂಟಾಗಿದೆ. ನಾಳೆ ಮಂಗಳವಾರ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹೀಗಾಗಿ ಇಂದು ಹಲವಾರು ನಾಯಕರು ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಕಚೇರಿಗೆ ಆಗಮಿಸಿ ಅರ್ಜಿಗಳನ್ನು ಪಡೆದು ಸಲ್ಲಿಸಿದರು.

ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ನಿಷೇಧಿತ ಪಿಎಫ್‍ಐ ಸಂಘಟನೆ ಕೈವಾಡ

ಬಹಳಷ್ಟು ನಾಯಕರು ಬೆಂಬಲಿಗರೊಂದಿಗೆ ಆಗಮಿಸಿದ್ದರಿಂದ ಪಕ್ಷದ ಕಚೇರಿ ಎದುರು ಜನಜಾತ್ರೆ ನಿರ್ಮಾಣವಾಗಿತ್ತು. ಯುವ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಬೆಂಬಲಿಗರು ಜೈಕಾರ ಕೂಗಿದರು.
ಸಿಂಧನೂರು ಕ್ಷೇತ್ರದಿಂದ ಸ್ರ್ಪಧಿಸು ಬಸನಗೌಡರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಶಿವಮೊಗ್ಗ, ರಾಯಚೂರು, ಕಲಬುರಗಿ ಸೇರಿದಂತೆ ದೂರದೂರುಗಳಿಂದಲೂ ಆಗಮಿಸಿದ ನಾಯಕರು ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಿದ್ದು ವಿಶೇಷವಾಗಿತ್ತು.

ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಬಿಜೆಪಿ ಸಜ್ಜು

ಅರ್ಜಿ ಶುಲ್ಕ 5000 ರೂಪಾಯಿಗಳಿದ್ದು, ಅರ್ಜಿಯೊಂದಿಗೆ ಪರಿಶಿಷ್ಟ ಕ್ಷೇತ್ರದ ಆಕಾಂಕ್ಷಿಗಳು ಒಂದು ಲಕ್ಷ ರೂ. ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು 2 ಲಕ್ಷ ರೂ. ಡಿಡಿಯೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ.

Articles You Might Like

Share This Article