ಆಕಾಂಕ್ಷಿಗಳೊಂದಿಗೆ ಕೈಮುಖಂಡರ ಸಭೆ

Social Share

ಬೆಂಗಳೂರು,ನ.25- ವಿಧಾನಸಭೆ ಚುನಾವಣೆಯ ಪೂರ್ವ ತಯಾರಿಯ ಮೊದಲ ಹಂತದಲ್ಲಿ ಕಾಂಗ್ರೆಸ್ ನಾಯಕರು ಇಂದು ಟಿಕೆಟ್ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ವರ್ತೂರು ಸಮೀಪದ ಖಾಸಗಿ ರೆಸಾರ್ಟ್ವೊಂದರಲ್ಲಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದವರ ಜತೆ ಸಮಾಲೋಚನ ಸಭೆ ನಡೆಸಲಾಗುತ್ತದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ರಣದೀಪ್ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಮತ್ತಿತರರು ಸಭೆಯ ನೇತೃತ್ವ ವಹಿಸಿದ್ದರು.

ಪ್ರತಿಯೊಬ್ಬ ಅರ್ಜಿದಾರರಿಗೂ ಬೂತ್ ಮಟ್ಟದ ಏಜೆಂಟರ್ಗಳ ವಿವರಗಳೊಂದಿಗೆ ಸಭೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಅರ್ಜಿದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಟಾಚಾರಕ್ಕೆ ಅರ್ಜಿ ಸಲ್ಲಿಸಿ ಅವಕಾಶಗಳಿಗೆ ನಿರೀಕ್ಷಿಸಿದವರನ್ನು ಈ ಸಭೆಯಲ್ಲಿ ಫಿಲ್ಟರ್ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಅರ್ಜಿ ಸಲ್ಲಿಸದವರಿಗೆಲ್ಲಾ ಟಿಕೆಟ್ ಸಿಗುವುದಿಲ್ಲ. ಟಿಕೆಟ್ ಸಿಕ್ಕವರ ಜತೆ ಉಳಿದ ಎಲ್ಲಾ ಆಕಾಂಕ್ಷಿಗಳು ಜತೆಯಾಗಿ ನಿಂತು ಕೆಲಸ ಮಾಡಬೇಕು.

ಕ್ಷೇತ್ರದಲ್ಲಿ ಯಾವುದೇ ಭಿನ್ನಮತ್ತೀಯ ಹಾಗೂ ಪಕ್ಷ ವಿರೋಧ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಒಂದು ವೇಳೆ ಆ ರೀತಿಯ ಮನಸ್ಥಿತಿ ಇದ್ದವರು ಬೇರೆ ದಾರಿ ನೋಡಿಕೊಳ್ಳಿ ಎಂದ ಪಕ್ಷದ ನಾಯಕರು ನಿಷ್ಟುರವಾಗಿ ಹೇಳಿದ್ದಾರೆ.

ಪ್ರತಿ ಚುನಾವಣೆಯಲ್ಲೂ ಭಿನ್ನಮತೀಯ ಚಟುವಟಿಕೆಗಳು ಕಾಂಗ್ರೆಸ್ ಪಾಲಿಗೆ ಮುಳುವಾಗುತ್ತಿವೆ. ಈ ಬಾರಿ ಅದಕ್ಕೆ ಅವಕಾಶ ನೀಡಬಾರದು ಎಂದು ಹಿರಿಯ ನಾಯಕರು ಸೂಚಿಸಿದ್ದಾರೆ.

Congress, ticket, aspirants, Meeting,

Articles You Might Like

Share This Article