ಕಾಂಗ್ರೆಸ್‍ನಲ್ಲಿ 2 ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲ: ಡಿಕೆಶಿ

Social Share

ಬೆಂಗಳೂರು,ಜ.20- ಕಾಂಗ್ರೆಸ್‍ನಲ್ಲಿ ಒಬ್ಬರಿಗೆ ಒಂದೇ ಕ್ಷೇತ್ರ, ಎರಡು ಕಡೆ ಸ್ಪರ್ಧೆ ಮಾಡಲು ಅವಕಾಶ ಕೇಳಿ ಯಾರು ಅರ್ಜಿ ಸಲ್ಲಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೆಲಮಂಗಲ ನಗರಸಭೆಯ ಹಲವು ಪ್ರಮುಖ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಹಲವು ಭ್ರಷ್ಟಚಾರಗಳು ಪ್ರತಿದಿನ ಹೊರ ಬರುತ್ತಿವೆ. ಅದರಿಂದ ಬೇಸತ್ತ ಜನ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇದೆ ಎಂದು ಸೇರ್ಪಡೆಯಾಗುತ್ತಿದ್ದಾರೆ. ಎಲ್ಲರೂ ಬೇಷರತ್ ಆಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಟಿಕೆಟ್ ಹಂಚಿಕೆಯಲ್ಲಿ ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಫೆಬ್ರವರಿ 2ರಂದು ಸಭೆ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ, ನಂತರ ಪರಿಶೀಲನಾ ಸಮಿತಿ ಸಭೆ ನಡೆದು ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರವೇ ಘೋಷಣೆ ಮಾಡುತ್ತೇವೆ. ಇನ್ನೂ ಕೆಲವು ಕ್ಷೇತ್ರಗಳ ಮುಖಂಡರಿಗೆ ಕಿವಿಯಲ್ಲಿ ಹೇಳಿ ಕಳುಹಿಸುತ್ತೇವೆ ಎಂದರು.

ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಯಾರು ಅರ್ಜಿ ಹಾಕಿಲ್ಲ. ಐದಾರು ಮಂದಿ ಯಾವ ಕ್ಷೇತ್ರದಲ್ಲಾದರೂ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಅರ್ಜಿ ಹಾಕಿರುವವರು ಒಂದು ಕ್ಷೇತ್ರಕ್ಕಷ್ಟೆ ಎರಡು ಲಕ್ಷ ರೂಪಾಯಿಗಳ ಬಾಂಡ್ ಸಲ್ಲಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ಯಾರಿಗೂ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ಯೋಜನೆ ಜಾರಿ

ಬಿಜೆಪಿ ಸರ್ಕಾರ ಪಂಚಮಸಾಲಿ, ಒಕ್ಕಲಿಗರೂ, ಪರಿಶಿಷ್ಟ ಜಾತಿ ಮತ್ತು ಪಂಗಡದ ಸೇರಿದಂತೆ ಎಲ್ಲಾ ಸಮುದಾಯಗಳ ಮೀಸಲಾತಿ ವಿಷಯದಲ್ಲಿ ಮೋಸ ಮಾಡುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸರ್ಕಾರ ಹೇಳುವ ಮಾದರಿಯಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ.

ಸುಪ್ರೀಂಕೋರ್ಟ್ ತೀರ್ಪು ಮತ್ತು ಕಾನೂನು ಎಲ್ಲರಿಗೂ ಗೋತ್ತಿದೆ. ಮುಖ್ಯಮಂತ್ರಿಗೂ ಇದು ಗೋತ್ತು. ಅದಕ್ಕಾಗಿಯೇ ಒಕ್ಕಲಿಗರಿಗೆ ಮೀಸಲಾತಿ ಘೋಷಣೆ ಮಾಡುವ ದಿನ ಖುದ್ದು ಮುಖ್ಯಮಂತ್ರಿಯವರು ಬರಲಿಲ್ಲ, ಬಲದಾಗಿ ಪ್ರಮುಖ ಘೋಷಣೆಯನ್ನು ಕಾನೂನು ಸಚಿವರ ಮೂಲಕ ಹೇಳಿಸಿದರು. ಅದರ ಅರ್ಥ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಬಿಜೆಪಿ ಅನಗತ್ಯವಾಗಿ ಎಲ್ಲಾ ಕಡೆ ಸುಳ್ಳು ಹೇಳಿಕೊಂಡು, ಜನರನ್ನು ದಾರಿ ತಪ್ಪಿಸುತ್ತಿದೆ.

ಸಮಿತಿ ಮಾಡಿ ಮೂರು ತಿಂಗಳಲ್ಲಿ ವರದಿ ಪಡೆದು ನಂತರ ಜಾರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಾವುದು ಕಾನೂನು ಬದ್ಧವಾಗಿಲ್ಲ. ಸಮಿತಿ ವರದಿ ನೀಡುವ ವೇಳೆಗೆ ಚುನಾವಣೆ ಎದುರಾಗುತ್ತದೆ. ಈ ಸರ್ಕಾರವೇ ಇರುವುದಿಲ್ಲ. ಪರಿಶಿಷ್ಟರ ಮೀಸಲಾತಿಗೆ ಸಂವಿಧಾನ ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಿತ್ತು. ಆದರೆ ಆ ರೀತಿಯ ಯಾವ ಪ್ರಸ್ತಾವನೆಗಳು ನಮ್ಮ ಮುಂದಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇವರು ಯಾವುದೇ ಪೆಪರ್‍ನಲ್ಲಿ ಬರೆದುಕೊಂಡು ಬಂದು ಘೋಷಣೆ ಮಾಡುತ್ತಿದ್ದಾರೆ ಎಂದರು.

ಫೆಬ್ರವರಿ 28ರ ವೇಳೆಗೆ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ. ಮುಂದಿನ 48 ದಿನ ಅಧಿಕಾರಿಗಳ ಆಡಳಿತ ಇರುತ್ತದೆ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ನಡುವೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿಯವರಿಗೂ ಗೋತ್ತು ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಕಾಂಗ್ರೆಸ್‍ನ ಎರಡು ಭರವಸೆಗಳನ್ನು ಬಿಜೆಪಿ ನಕಲು ಮಾಡಲು ಮುಂದಾಗಿದೆ. ಬಜೆಟ್‍ನಲ್ಲಿ ಈ ರೀತಿಯ ಯೋಜನೆ ಘೋಷಣೆ ಮಾಡಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಕಳೆದ ಮೂರುವರೆ ವರ್ಷದಿಂದ ಅಧಿಕಾರದಲ್ಲಿದ್ದಾಗ ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.

ಪೊಲೀಸ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ

ಕಾಂಗ್ರೆಸ್ ಭರವಸೆ ಈಡೇರಿಸಲು ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಲಾಗುತ್ತಿದೆ. ನಾವು ಎಲ್ಲಿಂದ ತರುತ್ತೇವೆ, ಎಂಬುದು ನಮಗೆ ಬಿಟ್ಟಿದ್ದು. ನಮಗೆ ಸುದೀರ್ಘ ಅನುಭವ ಇದೆ. ಅದಕ್ಕೆ ಅಗತ್ಯ ಹಣಕಾಸನ್ನು ಹೊಂದಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಡುಗೆ ಅನಿಲದ ಮೇಲಿನ ಸಬ್ಸಿಡಿ ಕಿತ್ತು ಹಾಕಿದರು. ಚುನಾವಣೆ ಹತ್ತಿರ ಬಂದಾಗ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿ ಜನರನ್ನು ಯಾಮಾರಿಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‍ನ ನೀಡಿರುವ ಎರಡು ಭರವಸೆಗಳಿಂದ ಪ್ರತಿ ಮನೆಗೆ ವರ್ಷಕ್ಕೆ 42 ಸಾವಿರ ರೂಪಾಯಿಷ್ಟು ನೆರವು ದೊರೆಯಲಿದೆ. ಅವನ್ನು ಜಾರಿ ಮಾಡಲು ನಾವು ಬದ್ಧ ಎಂದರು.

ಕಳೆದ ಆರು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಈಗ ಉಲ್ಟಾ ಹೊಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ನಡೆಸುತ್ತೇವೆ ಎನ್ನುತ್ತಿದ್ದಾರೆ. ಅಲ್ಲಿಗೆ ರಾಜ್ಯದ ನಾಯಕತ್ವ ಸಂಪೂರ್ಣ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದರು.

ನಾಳೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ

ಬಿಜೆಪಿ ಸರ್ಕಾರದಲ್ಲಿ ಕೊರೊನಾ ಕಾಲಘಟ್ಟದಲ್ಲಿ ಹಾಸಿಗೆ ಹಗರಣ ನಡೆಸಿದರು. ಹೆಣದ ಮೇಲೆ ಹಣ ತಿಂದರು. ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಲಂಚ ಪಡೆಯುವ ವಿಡಿಯೋ ಬಹಿರಂಗವಾಗಿದೆ. ಅವರದೇ ಪಕ್ಷದ ಶಾಸಕರಾದ ಎಚ್.ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಭ್ರಷ್ಟಚಾರದ ಬಗ್ಗೆ ಹೇಳಿದ್ದಾರೆ. ಶೇ.40ರಷ್ಟು ಕಮಿಷನ್ ಹಗರಣ, ಗುತ್ತಿಗೆದಾರರು ಲಂಚ ಕೊಡಲಾಗದೆ ದಯಾಮರಣ ಕೇಳಿರುವುದು, ಪಿಎಸ್‍ಐ ನೇಮಕಾತಿ ಹಗರಣ, ಉಪಕುಲಪತಿ ಹುದ್ದೆ ಗಿಟ್ಟಿಸಲು ನಾಲ್ಕು ಕೋಟಿ ಕೊಡಬೇಕಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿರುವುದು ಸೇರಿದಂತೆ ಸಾಧನೆಗಳನ್ನು ಬಿಜೆಪಿ ಮಾಡಿದೆ ಎಂದು ಲೇವಡಿ ಮಾಡಿದರು.

Congress, ticket, one, constituencies, KPCC President, DK Shivakumar,

Articles You Might Like

Share This Article