ಸರ್ಕಾರದ ದಡ್ಡತನ ಕ್ರಮಕ್ಕೆ ಕಾಂಗ್ರೆಸ್ ಕಿಡಿ

Spread the love

ಬೆಂಗಳೂರು, ಜೂ.11- ವಲಸಿಗರಿಗೆ ಟೆಸ್ಟಿಂಗ್ ಕಡ್ಡಾಯಗೊಳಿಸಿ ಕಠಿಣ ನಿಯಮ ರೂಪಿಸದೆ ರಾಜ್ಯ ಸರ್ಕಾರ ಮತ್ತೊಮ್ಮೆ ದಡ್ಡತನದಿಂದ ವರ್ತಿಸಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಸರ್ಕಾರ ಮೊದಲಿನಿಂದಲೂ ಕರೋನಾ ನಿಯಂತ್ರಣಕ್ಕೆ ದಡ್ಡತನದ ಕ್ರಮಗಳನ್ನು ಕೈಗೊಂಡಿದೆ. ಲಾಕ್ಡೌನ್ ಹೇರಿದಾಗ ವಲಸಿಗರ ಮೂಲಕ ಹಳ್ಳಿಗಳಿಗೆ ಸೋಂಕು ಸಾಗಲು ಬಿಟ್ಟರು, ಈಗ ಹಳ್ಳಿಗಳಲ್ಲಿ ಉಲ್ಬಣವಾಗಿದೆ, ಮತ್ತೊಮ್ಮೆ ಹಳ್ಳಿಗಳಿಂದ ನಗರಕ್ಕೆ ವಲಸಿಗರನ್ನು ಬರಲು ಬಿಟ್ಟು ನಗರ ಪ್ರದೇಶದಲ್ಲಿ ಸೋಂಕು ಹೆಚ್ಚಾಗಲು ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ಆರೋಪಿಸಿದೆ.

ವಲಸಿಗರಿಗೆ ಟೆಸ್ಟಿಂಗ್ ಕಡ್ಡಾಯಗೊಳಿಸಿ ಕಠಿಣ ನಿಯಮ ರೂಪಿಸಬೇಕು, ಲಾಕ್ ಡೌನ್ ನಿಯಮಾವಳಿಗಳನ್ನು ವೈಜ್ಞಾನಿಕವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಲಸಿಕೆ ನೀಡಲು ಅವಕಾಶ ನೀಡದಿರುವ ಸರ್ಕಾರದ ನಿಲುವನ್ನು ಕಾಂಗ್ರೆಸ್ ಟೀಕಿಸಿದೆ.

ಲಸಿಕೆಗಳನ್ನು ವ್ಯಾಪಾರಕ್ಕೆ ಇಟ್ಟವರು ಕಾಂಗ್ರೆಸ್ ಉಚಿತ ಲಸಿಕೆ ನೀಡಲು ಕೇಳಿದ ಅನುಮತಿಯನ್ನು ತಿರಸ್ಕರಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರೋಗ್ಯ ತುರ್ತು ಪರಿಸ್ಥಿತಿಯಲ್ಲೂ ಪ್ರತಿಷ್ಠೆ, ರಾಜಕೀಯ ಮಾಡುತ್ತಿದ್ದಾರೆ. ಲಸಿಕೆ ನೀಡಲು ಅನುಮತಿ ನಿರಾಕರಿಸಿರುವ ಸರ್ಕಾರದ ನಿಲುವು ಜನವಿರೋಧಿ ನೀತಿಗೆ ಹಿಡಿದ ಕನ್ನಡಿ ಎಂದು ಆರೋಪಿಸಿದೆ.

Facebook Comments