ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ ಶಾಸಕರು ದಿಢೀರ್ ಪ್ರತಿಭಟನೆ

Social Share

ಬೆಳಗಾವಿ,ಡಿ.19- ವಿಧಾನ ಮಂಡಲದ ಸಭಾಂಗಣದಲ್ಲಿ ಸ್ವಾತಂತ್ರ ಸೇನಾನಿ ಸಾವರ್ಕರ್ ಭಾವಚಿತ್ರ ಅಳವಡಿಸಿರುವುದನ್ನು ವಿರೋಧಿಸಿ ಹಾಗೂ ವಿವಾದ ರಹಿತವಾದ ಗಣ್ಯ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ ಶಾಸಕರು ದಿಢೀರ್ ಪ್ರತಿಭಟನೆ ನಡೆಸಿದರು.

ವಿಧಾನಮಂಡಲದ ಸಭಾಂಗಣದಲ್ಲಿ ಏಕಾಏಕಿ ಸ್ವತಂತ್ರ ಸೇನಾನಿ ಸಾವರ್ಕರ್ ಫೋಟೋ ಅಳವಡಿಸುವುದನ್ನು ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸಿದೆ. ಜೊತೆಗೆ ಇಂದು ಬೆಳಗ್ಗೆ ಸುವರ್ಣಸೌಧ ಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಕುವೆಂಪು, ನಾರಾಯಣಗುರು, ವಾಲ್ಮೀಕಿ, ಕನಕದಾಸ, ಲಾಲ್ ಬಹದ್ದೂರು ಶಾಸ್ತ್ರಿ , ಬಾಬು ಜಗಜೀವನ ರಾಂ. ನೆಹರು ಅವರ ಫೋಟೋಗಳನ್ನು ಹಿಡಿದು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು, ರಾಷ್ಟ್ರನಾಯಕರ ಭಾವಚಿತ್ರಗಳನ್ನು ವಿಧಾನಸಭೆಯ ಸಭಾಂಗಣದಲ್ಲಿ ಅಳವಡಿಸುವಂತೆ ಒತ್ತಾಯಿಸಿದರು. ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್, ಜವಹಾರ್ ಲಾಲ್ ನೆಹರು, ಬಾಬು ಜಗಜೀವನರಾಮ್,

ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ; ಠಾಕೂರ್

ಕುವೆಂಪು, ಸರ್ದಾರ್ ವಲ್ಲಭಬಾಯಿ ಪಟೇಲ್ ಮುಂತಾದ ದಾರ್ಶನಿಕರು, ವಿಚಾರವಂತರು ಹಾಗೂ ರಾಷ್ಟ್ರ ನಾಯಕರು ಭಾರತದ ಸಂಸ್ಕøತಿ ಪರಂಪರೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರುಗಳ ವಿಚಾರಧಾರೆ, ಆದರ್ಶಗಳು ಸರ್ವಕಾಲಿಕ ಸತ್ಯ ಮತ್ತು ಅನುಕರಣೀಯ.

ಆ ಕಾರಣದಿಂದಾಗಿ ಎಲ್ಲಾ ಮಹನೀಯರ ಭಾವಚಿತ್ರಗಳನ್ನು ಬೆಳಗಾವಿಯ ಸುವರ್ಣಸೌಧದ ಸಭಾಂಗಣದ ಹಾಲ್‍ನಲ್ಲಿ ಅಳವಡಿಸಿ, ಅವರ ಆದರ್ಶಗಳಿಗೆ ಮೆರಗು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅದರ ಬೆನ್ನಲ್ಲೇ ಇಂದು ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಸುಮಾರು 9.30ಕ್ಕೆ ಸುವರ್ಣ ಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ಆರಂಭಿಸಿದರು. ತಮ್ಮ ಕೈನಲ್ಲಿ ದಾರ್ಶಣಿಕರ ಫೋಟೋಗಳನ್ನು ಹಿಡಿದಿದ್ದು ವಿಶೇಷವಾಗಿತ್ತು.

ಸರಣಿ ಭ್ರಷ್ಟಾಚಾರ, ನೇಮಕಾತಿ ಹಗರಣ, ಕಮಿಷನ್ ದಂಧೆಯಲ್ಲಿ ಸರ್ಕಾರ ಮುಳುಗಿ ಹೋಗಿದೆ. ಇವುಗಳ ಬಗ್ಗೆ ಚರ್ಚೆಯಾದರೆ ಮರ್ಯಾದೆ ಹರಾಜಾಗುತ್ತದೆ ಎಂಬ ಕಾರಣಕ್ಕೆ ವಿಷಯಾಂತರ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆಡಳಿತ ಪಕ್ಷವೇ ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುವ ಮೂಲಕ ಮತದಾರರ ಪಟ್ಟಿ ಹಗರಣ, ಶೇ.40ರಷ್ಟು ಕಮಿಷನ್ ದಂಧೆ, ನೇಮಕಾತಿ ಅಕ್ರಮಗಳು ಚರ್ಚೆಯಾಗದಂತೆ ಹುನ್ನಾರ ನಡೆಸಲಾಗಿದೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದರು.

ವಿಧಾನಮಂಡಲದಲ್ಲಿ ಸಾವರ್ಕರ್ ಫೋಟೋ ಅಳವಡಿಸುವ ಅಗತ್ಯವಿರಲಿಲ್ಲ. ಮಹರಾಷ್ಟ್ರದಲ್ಲೇ ಅವರ ಫೋಟೋ ಹಾಕಿಲ್ಲ. ಕರ್ನಾಟಕದಲ್ಲಿ ದುರುದ್ದೇಶ ಪೂರ್ವಕವಾಗಿ ಫೋಟೋ ಹಾಕಿ ವಿವಾದ ಸೃಷ್ಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

BIG BREAKING : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಚರ್ಚೆಯನ್ನು ದಿಕ್ಕು ತಪ್ಪಿಸುವ ಬಿಜೆಪಿಯ ಹುನ್ನಾರ ಹೆಚ್ಚು ದಿನ ನಡೆಯುವುದಿಲ್ಲ. ಜನ ತಕ್ಕ ಪಾಠ ಕಲಿಸುತ್ತಾರೆ. ವಿಧಾನಮಂಡಲದಲ್ಲಿ ಜನಪರ ಸಮಸ್ಯೆಗಳು ಚರ್ಚೆಯಾಗಬೇಕು ಎಂಬುದು ಕಾಂಗ್ರೆಸ್ ನಿಲುವು. ಬಿಜೆಪಿ ಭಾವನಾತ್ಮಕ ವಿವಾದಗಳ ಮೂಲಕ ಕಲಾಪದ ಸಮಯ ಹಾಳು ಮಾಡಲು ಸಂಚು ರೂಪಿದೆ ಎಂದು ಕಾಂಗ್ರೆಸ್ ಶಾಸಕರು ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಸರ್ಕಾರದ ನಡವಳಿಕೆ ದುರಂತವೇ ಸರಿ. ರಾತ್ರಿ 10 ಗಂಟೆವರೆಗೆ ಇದರ ಬಗ್ಗೆ ಗೊತ್ತಿರಲಿಲ್ಲ. ಪ್ರತಿಪಕ್ಷ ನಾಯಕರಿಗೂ ಮಾಹಿತಿ ನೀಡಿರಲಿಲ್ಲ. ರಾತ್ರಿ ನಂತರ ಇದನ್ನು ಏಕಾಏಕಿ ತಂದಿದ್ದಾರೆ. ಸರ್ಕಾರ ತನ್ನ ಭ್ರಷ್ಟಚಾರಗಳನ್ನು ಮುಚ್ಚಿಕೊಳ್ಳಲು ಈ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧಪಕ್ಷದ ಉಪ ನಾಯಕ ಯು.ಟಿ.ಖಾದರ್, ಹಿರಿಯ ಶಾಸಕ ಎಚ್.ಕೆ.ಪಾಟೀಲ್, ವಿಧಾನ ಪರಿಷತ್‍ನ ವಿರೋಧ ಪಕ್ಷದ ಸಚೇತಕ ಪ್ರಕಾಶ್ ರಾಥೋಡ್, ಮಾಜಿ ಸಚಿವ ಕೆ.ಜೆ.ಜಾರ್ಜ್, ಪಿ.ಟಿ.ಪರಮೇಶ್ವರ್‍ನಾಯಕ್, ಶಾಸಕರಾದ ಅಮರಗೌಡ ಬಯ್ಯಾಪುರ, ಲಕ್ಷ್ಮೀ ಹೆಬಾಳ್ಕರ್ ಸೇರಿದಂತೆ ಬಹುತೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ; ಠಾಕೂರ್

ದಿಢೀರ್ ನಡೆದ ಪ್ರತಿಭಟನೆ ಕೆಲ ಕಾಲ ಗೊಂದಲಗಳು ಸೃಷ್ಟಿಸಿದ್ದು, ಪೊಲೀಸರು ತಬ್ಬಿಬ್ಬಾಗುವಂತೆ ಮಾಡಿದರು.

Congress, veer savarkar, photo, suvarna soudha,

Articles You Might Like

Share This Article