ಬೆಂಗಳೂರು,ಮಾ.6- ನಾಗಮಂಗಲದ ಜನರ ಗೌರವವನ್ನು ಹೆಚ್ಚಿಸಿದ್ದೇನೆ ಹೊರೆತು ಯಾವುದೇ ಚ್ಯುತಿ ತಂದಿಲ್ಲ ಸದಾಕಾಲ ಜನರ ಸೇವೆಯಲ್ಲು ತೊಡಗಿದ್ದವನು ನಾನು ಎಂದು ಮಾಜಿ ಸಚಿವ ಹಾಗೂ ನಾಗಮಂಗಲ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಹೇಳಿದರು.
ಬೆಂಗಳೂರಿನ ನಂದಿ ಲಿಂಕ್ ಮೈದಾನದಲ್ಲಿ ನಡೆದ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಹಾಗೂ ಕೊಪ್ಪ ಹೋಬಳಿಯ ಬೆಂಗಳೂರು ನಿವಾಸಿಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಲವರು ಅಪಪ್ರಚಾರ ನಡೆಸಿ ನನ್ನ ವರ್ಚಸ್ಸನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಮಾಡಿದ ಸೇವೆಯನ್ನು ಈಗಲೂ ಜನರು ನೆನೆಸಿಕೊಳ್ಳುತ್ತಾರೆ. ಈ ಭಾರಿಯ ಚುನಾವಣೆಯಲ್ಲಿ ಜನರ ಆಶೀರ್ವಾದ ನನ್ನ ಮೇಲಿದೆ ಎಂದು ನಂಬಿದ್ದೇನೆ.
ಬಿಜೆಪಿ ಸದಸ್ಯತ್ವದಿಂದಲೇ ಮಾಡಾಳ್ ವಿರೂಪಾಕ್ಷಪ್ಪ ಉಚ್ಛಾಟನೆ..?
ಕಳೆದ ಭಾರಿ ನಾನು ಸೋತರು ಕೂಡ ಕೊರೋನಾ ಸಮಯದಲ್ಲಿ ಎಲ್ಲರ ನೋವಿಗೆ ಸಂದಿಸುವ ಕೆಲಸಮಾಡಿದ್ದೇನೆ. ವಯಕ್ತಿಕವಾಗಿ ಅನೇಕರಿಗೆ ಧನ ಸಹಾಯದ ಜೊತೆಗೆ ಆಂಬುಲೆನ್ಸ್, ಔಷಧಿ, ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದೇನೆ ಎಂದರು.
ಶಾಸಕನಾಗಿದ್ದಾಗಲೂ ನಾಗಮಂಗಲ ಜನರ ನಂಬಿಕೆ ಉಳಿಯುವಂತೆ ಕೆಲಸಗಳನ್ನು ಮಾಡಿದ್ದೇನೆ. ಮುಂದೆ ಬರುವ ಚುನಾವಣೆಯಲ್ಲಿ ನಿಮ್ಮೆಲ್ಲರ ಪ್ರೀತಿ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು ಪ್ರತಿ ಮನೆಯ ಯಜಮಾನಿಗೆ 2 ಸಾವಿರ ನೀಡಲಿದೆ.
ಅನ್ನಭಾಗ್ಯ ಅಕ್ಕಿಯನ್ನು ವ್ಯಕ್ತಿಗೆ 10 ಕೇಜಿ ಅಕ್ಕಿ ವಿತರಿಸುವ ಭರವಸೆ ನೀಡಿದೆ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಜನಸಾಮಾನ್ಯರ ನೆಮ್ಮದಿಯ ಜೀವನ ನಡೆಸುವ ಸಂದರ್ಭವನ್ನು ಸೃಷ್ಟಿಸುವುದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದರು.
H3N2 ವೈರಸ್ ಬಗ್ಗೆ ಅನಗತ್ಯ ವದಂತಿ ಹಬ್ಬಿಸಬೇಡಿ : ಸಚಿವ ಸುಧಾಕರ್
ಸಂಸದ ಡಿ.ಕೆ. ಸುರೇಶ್ ಮಾತನಾಡಿ ನಾಗಮಂಗಲ ಕ್ಷೇತ್ರದ ಜನರು ಈ ಭಾರಿ ಚೆಲುವರಾಯಸ್ವಾಮಿಯವರನ್ನು ಗೆಲ್ಲಿಸಬೇಕು ಇದರಿಂದ ನೆನೆಗುದ್ದುಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳುತ್ತದೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ನಾಗಮಂಗಲ ಮಾದರಿ ಕ್ಷೇತ್ರವಾಗಲಿದೆ ಎಂದು ಹೇಳಿದರು.
ಮಾಜಿ ಸಚಿವರಾದ ಕೃಷ್ಣ ಬೈರೇಗೌಡ ಮಾತನಾಡಿ ಚುನಾವಣೆಯ ದಿನ ಎಲ್ಲರೂ ತಮ್ಮ ಗ್ರಾಮಗಳಿಗೆ ಮರಳಿ ಮತದಾನ ಮಾಡಬೇಕು ಚೆಲುವರಾಯಸ್ವಾಮಿಯವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಶಕ್ತಿ ತುಂಬಬೇಕು ಎಂದರು.
ನಿಷ್ಕ್ರಿಯಗೊಂಡ ಉಪಗ್ರಹದ ಮರು ಪ್ರಯೋಗಕ್ಕೆ ಇಸ್ರೋ ಸಿದ್ಧತೆ
ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಯು.ಬಿ.ವೆಂಕಟೇಶ್, ಮಾಜಿ ಶಾಸಕ ನರೇಂದ್ರ ಸ್ವಾಮಿ, ಹೆಚ್.ಸಿ. ಬಾಲಕೃಷ್ಣ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
Congress, welfare, Nagamangala, Chaluvarayaswamy,