ಬೆಂಗಳೂರು,ಮಾ.8- ಬಿಜೆಪಿ ಸರ್ಕಾರದ ಭ್ರಷ್ಟಚಾರ ವಿರೋಧ ಬಂದ್ ಆಚರಣೆಯಲ್ಲಿ ಕಾಂಗ್ರೆಸ್ ಗೊಂದಲ ಪರಿಸ್ಥಿತಿ ಅನುಭವಿಸಿದ್ದು, ಕೊನೆ ಕ್ಷಣದಲ್ಲಿ ಹೋರಾಟದಿಂದ ಹಿಂದೆ ಸರಿದಿದೆ.
ನಾಳೆ ಪಿಯುಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಹಾಗೂ ಪೋಷಕರು ತಮಗೆ ತೊಂದರೆಯಾಗಲಿದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪರಮೇಶ್ವರ್, ಎಂ.ಬಿ ಪಾಟೀಲ್ ಸೇರಿದಂತೆ ಪ್ರಮುಖ ನಾಯಕರೆಲ್ಲರೂ ಪಕ್ಷದ ಸ್ಕ್ರೀನಿಂಗ್ ಸಮಿತಿಯಯ ಸಭೆಯಲ್ಲಿ ಚರ್ಚೆ ಮಾಡಿ ಬಂದ್ ಹಿಂಪಡೆಯಲು ತೀರ್ಮಾನಿಸಿದ್ದಾರೆ.
ನಾಳೆ ಯಾವುದೇ ರೀತಿಯ ಬಂದ್ ಇರುವುದಿಲ್ಲ. ಶಾಲಾ ಕಾಲೇಜು ಮಕ್ಕಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬಂದ್ ಹಿಂಪಡೆಯಲಾಗಿದ್ದು, ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಈ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.
ಮೋದಿ ರೋಡ್ ಶೋ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗ ಬದಲಾವಣೆ
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪೂರ್ವನಿಗದಿಯಂತೆ ಬಂದ್ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದರು. ಅಂಗಡಿಗಳ ಮಾಲೀಕರು ಹಾಗೂ ವ್ಯವಹಾರಸ್ಥರು ಬೆಳಗ್ಗೆ 9ರಿಂದ 11 ಗಂಟೆಯವರೆಗೆ ವಹಿವಾಟು ಬಂದ್ ಮಾಡಿ ಬಂದ್‍ಗೆ ಸಹಕರಿಸುವಂತೆ ಮನವಿ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ದ್ವಿತೀಯ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸಲಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ನಮ್ಮ ಪಕ್ಷದ ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ. ವಾಹನ ಸಂಚಾರ ಸೇರಿದಂತೆ ಜನ ಜೀವನಕ್ಕೆ ಬಂದ್‍ನಿಂದ ಅಡಚಣೆಯಾಗುವುದಿಲ್ಲ ಎಂದಿದ್ದೆರು.
ಬಿಜೆಪಿ ಟಿಕೆಟ್ ವಿಚಾರ : ಹಳಬರಿಗೆ ಕೋಕ್, RSS ನಿಷ್ಠರಿಗೆ ಲಕ್
ಆದರೆ ಕೆಲವೇ ಗಂಟೆಗಳಲ್ಲಿ ವ್ಯತಿರಿಕ್ತ ನಿರ್ಧಾರ ಹೊರ ಬಿದ್ದಿದೆ. ಕಾಂಗ್ರೆಸ್ ಕಳೆದ ಮೂರು ದಿನಗಳಿಂದ ಬಂದ್ ಕುರಿತು ಪೂರ್ವ ತಯಾರಿ ನಡೆಸಿತ್ತು. ಕೊನೆ ಕ್ಷಣದಲ್ಲಿ ಪಿಯುಸಿ ಪರೀಕ್ಷೆ ನೆಪವೊಡ್ಡಿ ಬಂದ್ ಕೈ ಬಿಡಲು ಬಿಜೆಪಿ ನಾಯಕರ ತಿರುಗೇಟುಗಳು ಕಾರಣ ಎಂದು ಹೇಳಲಾಗಿದೆ. ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬಂದ್‍ಗೆ ಸಹಕರಿಸಿ ಎಂಬ ಕರೆಗೆ ವ್ಯಾಪಾರಿಗಳು ಸಹಕರಿಸದಿದ್ದರೆ ಪಕ್ಷಕ್ಕೆ ಅವಮಾನವಾಗಲಿದೆ ಎಂಬ ಕಾರಣಕ್ಕೂ ಹಿಂದೆ ಸರಿಯಲಾಗಿದೆ ಎಂದು ತಿಳಿದು ಬಂದಿದೆ.
Congress, withdraws, tomorrow, state-wide, bandh, due, PU exams,