ಚಿಕ್ಕಬಳ್ಳಾಪುರ,ಜ.14- ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮುಗಿ ಬಿದ್ದಿದ್ದಾರೆ.
ಉತ್ಸವ ಖಂಡಿಸಿ ಸುಧಾಕರ್ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಮಹಾಜನಗಳೇ ನಮ್ಮನ್ನು ನಂಬಿದರೆ ಕಳೆದ ಬಾರಿ ಹಾಗೆಯೇ ನಿಮಗೆ ಬೆಡ್ ಆಗಲಿ, ಆಕ್ಸಿಜನ್ ಆಗಲಿ ಸಿಗುವುದಿಲ್ಲ ಪ್ರಾಣ ಉಳಿಸಿಕೊಳ್ಳುವ ಆಸೆ ಇದ್ದರೆ ಮಾಸ್ ಧರಸಿ ಎಂದು ಪೋಸ್ಟರ್ ಅಂಟಿಸುವ ಮೂಲಕ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತೆ ಬಿಂದುಗೌಡ ಮತ್ತವರ ತಂಡ ರಾತ್ರೋರಾತ್ರಿ ಚಿಕ್ಕಬಳ್ಳಾಪುರ ಉತ್ಸವದ ಬ್ಯಾನರ್ ಗಳ ಮೇಲೆ ಈ ರೀತಿಯ ಪೋಸ್ಟರ್ ಅಂಟಿಸಿ ಗಮನ ಸೆಳೆದಿದ್ದಾರೆ.
ನನ್ನನ್ನು ಯಾರು ಏನು ಮಾಡೊಕ್ಕಾಗಲ್ಲ : ತೊಡೆತಟ್ಟಿದ ಸಿದ್ದರಾಮಯ್ಯ
ಸಚಿವ ಸುಧಾಕರ್ ಹಾಗೂ ನಟ ರಿಷಬ್ ಶೆಟ್ಟಿ ಮುಖದ ಮೇಲೆ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಈ ಹಿಂದೆ ಸಿಟಿ ರವಿ ಬ್ಯಾನರ್ ಹರಿದು ಹಾಕಿ ಸುದ್ದಿ ಆಗಿದ್ದ ಬಿಂದುಗೌಡ ಇದೀಗ ಸುಧಾಕರ್ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
#CongressWorkers #MinisterSudhakar, Chikkaballapura,